ಮಧುಗಿರಿ: ಟೆಂಪೋ ಟ್ರಾವೆಲ್ಲರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅಪಘಾತದ ಬಳಿಕ ಟೆಂಪೋ ಟ್ರಾವೆಲರ್ ಸ್ಥಳದಿಂದ ಪರಾರಿಯಾಗಿರುವ ಘಟನೆ ನಡೆದಿದೆ.
ತುಮಕೂರು ರಸ್ತೆಯ ಸಮೀಪವಿರುವ ಸಾಲು ಮರದ ತಿಮ್ಮಕ್ಕನ ಉದ್ಯಾವನದ ಬಳಿ ಘಟನೆ ನಡೆದಿದೆ ಎನ್ನಲಾಗಿದ್ದು, ಪಟ್ಟಣದ ಲಿಂಗೇನಹಳ್ಳಿ ವಾಸಿಗಳಾದ ಆಟೋಚಾಲಕ ಮನ್ಸೂರ್ ಪಾಷಾ (30) ಹೆಂಡತಿ ನಗ್ಮಾ (26) ಬೆನ್ನುಮೂಳೆ ಮುರಿತವಾಗಿದ್ದು, ಪತಿಗೆ ಗಂಭೀರ ಗಾಯವಾಗಿದೆ. ಮಕ್ಕಳಾದ ಜೋಯ (4)ಗೆ ತಲೆಗೆ ಪೆಟ್ಟುಬಿದ್ದಿದೆ, ಅಯಾನ್ (3)ಗೆ ಕಾಲು ಮುರಿತವಾಗಿದೆ.
ಗಾಯಾಳುಗಳನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿದ್ದಾರೆ.
ವರದಿ: ಅಬಿದ್ ಮಧುಗಿರಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy