ಕರ್ನಾಟಕ ರಾಜ್ಯ ಸರಕಾರ ನಡೆಸಿದ ರಾಜ್ಯ ಶಿಕ್ಷಕರ ನೇಮಕಾತಿ ಪರೀಕ್ಷೆ ಹಾಲ್ ಟಿಕೆಟ್ ನಲ್ಲಿ ಮಾಜಿ ನೀಲಿಚಿತ್ರ ತಾರೆ ಸನ್ನಿ ಲಿಯೊನ್ ಅವರ ಅರೆಬೆತ್ತಲೆ ಭಾವಚಿತ್ರ ಪ್ರಕಟವಾಗಿದೆ.
ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯಲು ಹೋದ ಮಹಿಳೆ ತಮಗೆ ನೀಡಿದ ಹಾಲ್ ಟಿಕೆಟ್ ನೋಡಿ ಬೆಚ್ಚಿಬಿದ್ದಿದ್ದಾರೆ. ಏಕೆಂದರೆ ಅಲ್ಲಿ ತಮ್ಮ ಫೋಟೊ ಬದಲು ಸನ್ನಿ ಲಿಯೋನ್ ಅವರ ಅರೆಬೆತ್ತಲೆ ಫೋಟೊ ಮುದ್ರಣಗೊಂಡಿತ್ತು.
ಸನ್ನಿ ಲಿಯೊನ್ ಇರುವ ಹಾಲ್ ಟಿಕೆಟ್ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಅಲ್ಲದೇ ಘಟನೆ ಬಗ್ಗೆ ರಾಜ್ಯ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ.
ಕರ್ನಾಟಕ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಬಿಆರ್ ನಾಯ್ಡು ಮಂಗಳವಾರ ಈ ಗಂಭೀರ ಆರೋಪ ಮಾಡಿದ್ದು, ಶಿಕ್ಷಕರ ಪರೀಕ್ಷೆಗೆ ನೀಡಲಾದ ಅಭ್ಯರ್ಥಿಯ ಹಾಲ್ ಟಿಕೆಟ್ ನಲ್ಲಿ ಸನ್ನಿ ಲಿಯೊನ್ ಫೋಟೊ ಪ್ರಕಟವಾಗಿದೆ. ಇದು ಶಿಕ್ಷಣ ಇಲಾಖೆಯ ಬೇಜವಾಬ್ದಾರಿ ಕಾರಣ ಎಂದು ಆರೋಪಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


