nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬರಗಾಲದ ಆತಂಕ ಬೇಡ, ಕಾಂಗ್ರೆಸ್ ಸರ್ಕಾರ, ನಾವೂ ಇದ್ದೇವೆ: ಕೆ.ಎನ್. ರಾಜಣ್ಣ

    August 13, 2026

    ತುರುವೇಕೆರೆ: ಜಿ.ಪರಮೇಶ್ವರ್ ಅವರಿಂದ ಬರ ಅಧ್ಯಯನದ ಆತುರದ ವೀಕ್ಷಣೆ: ರೈತರಿಗೆ ನಿರಾಸೆ

    August 13, 2026

    ಆ.29: ಪಾವಗಡದಲ್ಲಿ ಉದ್ಯೋಗ ಮೇಳ

    August 13, 2026
    Facebook Twitter Instagram
    ಟ್ರೆಂಡಿಂಗ್
    • ಬರಗಾಲದ ಆತಂಕ ಬೇಡ, ಕಾಂಗ್ರೆಸ್ ಸರ್ಕಾರ, ನಾವೂ ಇದ್ದೇವೆ: ಕೆ.ಎನ್. ರಾಜಣ್ಣ
    • ತುರುವೇಕೆರೆ: ಜಿ.ಪರಮೇಶ್ವರ್ ಅವರಿಂದ ಬರ ಅಧ್ಯಯನದ ಆತುರದ ವೀಕ್ಷಣೆ: ರೈತರಿಗೆ ನಿರಾಸೆ
    • ಆ.29: ಪಾವಗಡದಲ್ಲಿ ಉದ್ಯೋಗ ಮೇಳ
    • ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್
    • ಮೇಕೆ ಮೇಲೆ ದಾಳಿ ಮಾಡಲು ಬಂದ ಚಿರತೆ ಸೆರೆ
    • ವಿಐಪಿ ಸೆಲ್ ನಿಂದ ಸಾಮಾನ್ಯ ಕೈದಿಗಳ ಸೆಲ್ ಗೆ ಪ್ರಜ್ವಲ್ ರೇವಣ್ಣ ಶಿಫ್ಟ್: ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ!
    • ಸರಗೂರು: ತಳಮಟ್ಟದ ಕಾರ್ಯಕರ್ತರೇ ಪಕ್ಷದ ಶಕ್ತಿ – ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಎನ್. ಸುಬ್ಬಣ್ಣ ಕರೆ
    • ವಿದ್ಯಾರ್ಥಿಗಳಲ್ಲಿ ಪ್ರತಿಭೆಗೆ ಕೊರತೆಯಿಲ್ಲ, ಪ್ರಾಮಾಣಿಕತೆ ಬೆಳೆಸಿಕೊಳ್ಳುವುದು ಮುಖ್ಯ: ಸಾಹಿತಿ ರಿಜ್ವಾನ್ ಪಾಷಾ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸ್ಮಾರ್ಟ್ ವರ್ಚ್ಯುವಲ್ ಕ್ಲಿನಿಕ್ ಗಳು ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಸ್ಥಾಪನೆ
    ರಾಜ್ಯ ಸುದ್ದಿ December 14, 2022

    ಸ್ಮಾರ್ಟ್ ವರ್ಚ್ಯುವಲ್ ಕ್ಲಿನಿಕ್ ಗಳು ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಸ್ಥಾಪನೆ

    By adminDecember 14, 2022No Comments2 Mins Read
    varchuval

    ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ನ (ಬಿಎಸ್‌ಸಿಎಲ್) ಮಹತ್ವಾಕಾಂಕ್ಷಿ ವರ್ಚ್ಯುವಲ್ ಸ್ಮಾರ್ಟ್ ಕ್ಲಿನಿಕ್ (ವಿಎಸ್‌ಸಿ) ಕೇಂದ್ರಗಳ ಯೋಜನೆ ಹೊಸ ವರ್ಷದಿಂದ ಕಾರ್ಯಾರಂಭಗೊಳ್ಳಲಿದೆ. ಬಿಎಸ್‌ಸಿಎಲ್ ಅಧಿಕಾರಿಗಳ ಪ್ರಕಾರ ಈ ಯೋಜನೆಯಡಿ ಒಟ್ಟು ೨೭ ಕೇಂದ್ರಗಳ ಪೈಕಿ ೨೬ ಕೇಂದ್ರಗಳ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿದ್ದು, ಪ್ಯಾಲೆಸ್ ಗುಟ್ಟಹಳ್ಳಿಯಲ್ಲಿ ಪ್ರಾಯೋಗಿಕವಾಗಿ ಕಾರ್ಯಾಚರಣೆ ಆರಂಭಿಸಲು ಸಿದ್ಧವಾಗಿದೆ.

    ಗುಟ್ಟಹಳ್ಳಿಯಲ್ಲಿನ ಪ್ರಾಯೋಗಿಕ ಕೇಂದ್ರದ ಕಾಮಗಾರಿಗಳು ಪೂರ್ಣಗೊಂಡಿದ್ದು, ಕಾರ್ಯಾರಂಭಗೊಳ್ಳಲು ಸಿದ್ಧವಾಗಿದೆ. ಸದಾಶಿವನಗರದಲ್ಲಿರುವ ಜನತಾ ಬಜಾರ್‌ ನಲ್ಲಿ ಸ್ಥಾಪಿಸಿರುವ ಸೆಂಟ್ರಲ್ ಕ್ಲಿನಿಕಲ್ ಕಮಾಂಡ್ ಸೆಂಟರ್ (ಸಿಸಿಸಿಸಿ) ಪೂರ್ಣಗೊಳ್ಳುವುದಕ್ಕಾಗಿ ನಾವು ಕಾಯುತ್ತಿದ್ದೇವೆ. ಅದು ಡಿಸೆಂಬರ್ ೨೦೨೨ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ,” ಎಂದು ಬಿಎಸ್ ಸಿಎಲ್‌ ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ಅವರು ತಿಳಿಸಿದ್ದಾರೆ.

    ಈ ಸ್ಮಾರ್ಟ್ ವರ್ಚ್ಯುವಲ್ ಕ್ಲಿನಿಕ್‌ ಗಳನ್ನು ಬೆಂಗಳೂರು ನಗರದಾದ್ಯಂತ ಇರುವ ೨೭ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಸ್ಥಾಪಿಸಲಾಗುತ್ತಿವೆ. ಸಿಸಿಸಿ ಕೇಂದ್ರದಲ್ಲಿ ಒಂಬತ್ತು ವಿಶೇಷ ತಜ್ಞ ವೈದ್ಯರ ಸೇವೆಗಳನ್ನು ಲಭ್ಯಗೊಳಿಸಲಾಗುತ್ತದೆ. ಇವರನ್ನು ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮುಖ್ಯ ಆರೋಗ್ಯ ಅಧಿಕಾರಿಯವರು ಅತೀ ಶೀಘ್ರದಲ್ಲೇ ನೇಮಕ ಮಾಡುತ್ತಾರೆ.
    ಹೃದ್ರೋಗ, ಚರ್ಮ ರೋಗಗಳು, ಜನರಲ್ ಮೆಡಿಸಿನ್, ಇಎನ್‌ ಟಿ, ಕಣ್ಣಿನ ಚಿಕಿತ್ಸೆ, ಎಂಡೊಕ್ರೈನಾಲಜಿ, ಮಕ್ಕಳ ಚಿಕಿತ್ಸೆ, ಮನೋವೈದ್ಯ, ಹಾಗೂ ಸಾಮಾನ್ಯ ಶಸ್ತ್ರಚಿಕಿತ್ಸೆಗಳಂತಹ ತಜ್ಞ ವೈದ್ಯರ ನೇಮಕಾತಿಗೆ ಸಂಬಂಧಪಟ್ಟ ಅಧಿಸೂಚನೆಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಸಿಹೆಚ್‌ ಓ, ಬಿಬಿಎಂಪಿಯಲ್ಲಿ ಪ್ರಕಟಿಸಲಾಗಿದೆ. ಈ ವೈದ್ಯರು ಸಿಸಿಸಿ ಕೇಂದ್ರದಲ್ಲಿ ಸೇವೆ ಸಲ್ಲಿಸಲಿದ್ದು, ಆನ್‌ ಲೈನ್ ಮೂಲಕ ವಿಎಸ್‌ ಸಿ ರೋಗಿಗಳಿಗೆ ಸಲಹೆ ನೀಡುತ್ತಾರೆ,” ಎಂದು ಸುಶೀಲಮ್ಮ ಮಾಹಿತಿ ನೀಡಿದ್ದಾರೆ.

    ವಿಎಸ್‌ಸಿಯಲ್ಲಿ ಲಭ್ಯಗೊಳಿಸುವ ವೈದ್ಯಕಿಯ ಉಪಕರಣಗಳ ಪೈಕಿ ಡಿಜಿಟಲ್ ಸ್ಟೆಥೊಸ್ಕೋಪ್, ಸ್ಫಿಗ್ಮೊಮ್ಯಾನೋಮೀಟರ್, ಗ್ಲೂಕೋಮೀಟರ್, ಇಸಿಜಿ, ಡರ್ಮಾಸ್ಕೋಪ್, ಇಎನ್‌ಟಿ ತಪಾಸಣಾ ಕ್ಯಾಮೆರಾ, ಮ್ಯಾಗ್ನಿಫೈಯಿಂಗ್ ಲಎನ್ಸ್, ಪರಿಶೀಲನಾ ಮೇಜು, ಡಿಜಿಟಲ್ ಬರವಣಿಗೆ ಪ್ಯಾಡ್, ಆಪ್ತಾಲ್ಮಾಸ್ಕೋಪ್, ಫಂಡಸ್ ಕ್ಯಾಮೆರಾ, ಆಫ್ತಾಲ್ಮಿಕ್ ರಿಫ್ರ್ಯಾಂಕ್ಷನ್ ಯೂನಿಟ್, ಸ್ಕಿರ್‌ ಮರ್ ಟಿಯರ್ ಟೆಸ್ಟ್ ಸ್ಟ್ರಿಪ್, ಸ್ನೆಲ್ಲೆನ್ಸ್ ಚಾರ್ಟ್, ಜೇಗರ್ ಚಾರ್ಟ್, ಹಾಗೂ ಎ೩ ಡಿಜಿಎಲ್ ಎಕ್ಸ್ರೇ ಸ್ಕ್ಯಾನರ್‌ ಗಳು ಸೇರಿವೆ. ಈ ತಂತ್ರಜ್ಞಾನ ಆಧಾರಿತ ಸಿಸಿಸಿ ಕೇಂದ್ರ, ರೋಗಿಗಳಿಗೆ ಸಲಹೆ ನೀಡುವ ಸೇವೆಗಳನ್ನು ಒದಗಿಸಲು ನಗರದಾದ್ಯಂತ ಸ್ಥಾಪನೆಯಾಗಲಿರುವ ೨೭ ಸಿವಿಸಿಗಳೊಂದಿಗೆ ಸಂಪರ್ಕ ಹೊಂದಿರುತ್ತದೆ. ವೈದ್ಯರು ರೋಗಿಗಳನ್ನು ಆನ್‌ ಲೈನ್ ಮೂಲಕ ತಪಾಸಣೆ ಮಾಡಿದ ನಂತರ, ರೋಗನಿರ್ಣಯದ ಫಲಿತಾಂಶದ ಪ್ರಕಾರ ಅಗತ್ಯವಿದ್ದರೆ ತಜ್ಞ ಆಸ್ಪತ್ರೆಗೆ ಉಲ್ಲೇಖಿಸಿ ಕಳುಹಿಸಬಹುದು.

    ಪ್ರತಿ ವಿಎಸ್‌ ಸಿಯೂ ಸಹ ಅಗತ್ಯ ಸೇವೆಗಳನ್ನು ನಿರ್ವಹಿಸಲು ಓರ್ವ ಕ್ಲಿನಿಕಲ್ ಆಪರೇಟರ್ ಅನ್ನು ಒಳಗೊಂಡಿರುತ್ತದೆ. ಈ ಕ್ಲಿನಿಕಲ್ ಆಪರೇಟರ್‌ ಗಳು ರೋಗಿಗಳ ಮಾಹಿತಿಯನ್ನು ಸಂಗ್ರಹಿಸಿ, ಸಿಸಿಸಿಸಿಯಲ್ಲಿರುವ ತಜ್ಞ ವೈದ್ಯರೊಂದಿಗೆ ವೀಡಿಯೊ ಸಮಾಲೋಚನೆ ನಡೆಸುತ್ತಾರೆ. ಇದಾದ ನಂತರ ಎಲೆಕ್ಟ್ರಾನಿಕ್ ಪ್ರಿಸ್ಕ್ರಿಪ್ಷನ್ (ವಿದ್ಯುನ್ಮಾನ ರೂಪದಲ್ಲಿರುವ ವೈದ್ಯರ ಸಲಹೆ ಚೀಟಿ) ನ ಮುದ್ರಿತ ಪ್ರತಿಯೊಂದನ್ನು ಪಡೆಯಲಾಗುವುದು. ಈ ವಿಎಸ್‌ ಸಿಗಳು ನಗರದ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಬಲಪಡಿಸುತ್ತದೆ ಎನ್ನಲಾಗಿದ್ದು, ಸಮುದಾಯ ಆಸ್ಪತ್ರೆಗಳಲ್ಲಿನ ಓಪಿಡಿಗಳ ಹೊರೆಯನ್ನು ಕಡಿಮೆಗೊಳಿಸಲಿವೆ.

    “ಈ ಯೋಜನೆಯು, ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಗಣಕೀಕರಣ ಪ್ರಕ್ರಿಯೆ ಮೂಲಕ ನಗರದಲ್ಲಿರುವ ಪ್ರತಿ ವ್ಯಕ್ತಿಗೂ ಸಹ ಗುಣಮಟ್ಟದ ಆರೋಗ್ಯ ಸೇವೆ ತಲುಪುವಂತಾಗಲು ನೆರವಾಗಲಿದೆ. ನಗರದಲ್ಲಿ ವಾಸಿಸುವ ಬಡವರನ್ನು ಗಮನದಲ್ಲಿರಿಸಿಕೊಂಡು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಸ್ತುತ, ಆರ್ಥಿಕವಾಗಿ ಬಲಹೀನವಾಗಿರುವ ಸಮುದಾಯದವರಿಗೆ, ಉತ್ತಮ ಹಾಗೂ ಕೈಗೆಟಕುವ ದರಗಳಲ್ಲಿ ಆರೋಗ್ಯಸೇವಾ ಸೌಲಭ್ಯಗಳು ಲಭ್ಯವಾಗುತ್ತಿಲ್ಲದಿರುವ ಕಾರಣದಿಂದಾಗಿ ಖಾಯಿಲೆಯ ಮೂಲ ಕಾರಣದ ರೋಗನಿರ್ಣಯ ಲಭ್ಯವಾಗುತ್ತಿಲ್ಲ. ಈ ವಿಎಸ್‌ ಸಿಗಳು ಖಾಯಿಲೆಯ ಪತ್ತೆ ಹಚ್ಚಲು ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಒಳಗೊಳ್ಳಲಿದ್ದು, ಇಂತಹ ವರ್ಗದ ಜನರಿಗೆ ಉತ್ತಮ ಚಿಕಿತ್ಸೆ ಒದಗಿಸುವಲ್ಲಿ ನೆರವಾಗಲಿವೆ,” ಎಂದು ಬಿಎಸ್‌ ಸಿಎಲ್‌ ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಯೋಜನೆಯ ಪ್ರಕಾರ, ಬೆಂಗಳೂರು ಪಶ್ಚಿಮ ಭಾಗದಲ್ಲಿ ಹಾಗೂ ದಕ್ಷಿಣದಲ್ಲಿ ತಲಾ ಆರು ವಿಎಸ್‌ ಸಿಗಳು, ಪಶ್ಚಿಮದಲ್ಲಿ ೧೦ ವಿಎಸ್‌ ಸಿಗಳು, ಹಾಗೂ ಬೊಮ್ಮನಹಳ್ಳಿ, ಮಹದೇವಪುರ, ಆರ್‌.ಆರ್ ನಗರ, ಯಲಹಂಕ ಹಾಗೂ ದಾಸರಹಳ್ಳಿ ಪ್ರದೇಶಗಳಲ್ಲಿ ತಲಾ ಒಂದೊಂದು ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.

    ಸುದ್ದಿ ಮೂಲ: ಬೆಂಗಳೂರ್ ಮಿರರ್


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್

    August 13, 2026

    ವಿಐಪಿ ಸೆಲ್ ನಿಂದ ಸಾಮಾನ್ಯ ಕೈದಿಗಳ ಸೆಲ್ ಗೆ ಪ್ರಜ್ವಲ್ ರೇವಣ್ಣ ಶಿಫ್ಟ್: ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ!

    August 13, 2026

    ಬೀದರ್: ₹83 ಲಕ್ಷ ಶೂಟ್ಔಟ್ ದರೋಡೆ ಪ್ರಕರಣ ಭೇದಿಸಿದ ಪೊಲೀಸರು; ಬಿಹಾರದಲ್ಲಿ ಇಬ್ಬರು ಆರೋಪಿಗಳ ಬಂಧನ!

    August 13, 2026

    Comments are closed.

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಮಧುಗಿರಿ

    ಬರಗಾಲದ ಆತಂಕ ಬೇಡ, ಕಾಂಗ್ರೆಸ್ ಸರ್ಕಾರ, ನಾವೂ ಇದ್ದೇವೆ: ಕೆ.ಎನ್. ರಾಜಣ್ಣ

    August 13, 2026

    ಮಧುಗಿರಿ: ತಾಲೂಕಿನ ರೈತರು, ಕೂಲಿ ಕಾರ್ಮಿಕರು ಬರಗಾಲ ಬರುತ್ತದೆ ಎಂದು ಭಯ ಪಡುವ ಅಗತ್ಯವಿಲ್ಲ, ನಮ್ಮ ಕಾಂಗ್ರೆಸ್ ಸರ್ಕಾರ ಹಾಗೂ…

    ತುರುವೇಕೆರೆ: ಜಿ.ಪರಮೇಶ್ವರ್ ಅವರಿಂದ ಬರ ಅಧ್ಯಯನದ ಆತುರದ ವೀಕ್ಷಣೆ: ರೈತರಿಗೆ ನಿರಾಸೆ

    August 13, 2026

    ಆ.29: ಪಾವಗಡದಲ್ಲಿ ಉದ್ಯೋಗ ಮೇಳ

    August 13, 2026

    ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್

    August 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.