nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಗೃಹಿಣಿಯರೇ, ವಿದ್ಯಾರ್ಥಿಗಳೇ ಎಚ್ಚರ! ವರ್ಕ್ ಫ್ರಮ್ ಹೋಮ್ ಹೆಸರಿನಲ್ಲಿ ಆನ್ ಲೈನ್ ವಂಚಕರ ಜಾಲ!

    October 29, 2026

    ರೈಲಿನಲ್ಲಿ ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಮೊಬೈಲ್ ಚಾರ್ಜಿಂಗ್ ಬಂದ್? ಪ್ರಯಾಣಿಕರು ತಿಳಿಯಬೇಕಾದ ಮಾಹಿತಿ

    October 29, 2026
    Facebook Twitter Instagram
    ಟ್ರೆಂಡಿಂಗ್
    • ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್
    • ಗೃಹಿಣಿಯರೇ, ವಿದ್ಯಾರ್ಥಿಗಳೇ ಎಚ್ಚರ! ವರ್ಕ್ ಫ್ರಮ್ ಹೋಮ್ ಹೆಸರಿನಲ್ಲಿ ಆನ್ ಲೈನ್ ವಂಚಕರ ಜಾಲ!
    • ರೈಲಿನಲ್ಲಿ ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಮೊಬೈಲ್ ಚಾರ್ಜಿಂಗ್ ಬಂದ್? ಪ್ರಯಾಣಿಕರು ತಿಳಿಯಬೇಕಾದ ಮಾಹಿತಿ
    • ಕಿಡ್ನಿ ರೋಗಿಗಳಿಗೆ ಮನೆಬಾಗಿಲಲ್ಲೇ ಡಯಾಲಿಸಿಸ್ ಸೇವೆ? ಕಿಡ್ನಿ ರೋಗಿಗಳಿಗೆ ಗುಡ್‌ ನ್ಯೂಸ್
    • ಹೊಸಕೋಟೆ, ತುಮಕೂರಿಗೂ ಮೆಟ್ರೋ ಸಂಪರ್ಕ: ಬೆಂಗಳೂರಿನ ಸುತ್ತಮುತ್ತ ಭೂಮಿಗೆ ಹೆಚ್ಚುತ್ತಾ ಬೇಡಿಕೆ?
    • ಕೃಷಿ ಹೊಂಡಕ್ಕೆ ಬಿದ್ದು ದಂಪತಿ ಸಾವು: ಪತ್ನಿಯನ್ನು ರಕ್ಷಿಸಲು ಹೋದ ಪತಿಯೂ ಸಾವು!
    • ವಿಧಾನಪರಿಷತ್ ಚುನಾವಣೆ ಸೋಲಿಗೆ ನಮ್ಮವರೇ ಕಾರಣ: ಕೆ.ಎನ್. ರಾಜಣ್ಣ ಆಕ್ರೋಶ
    • ಉಪವಿಭಾಗ ಕಚೇರಿ ಸಮೀಪ ಹೊಸ ಬಾರ್‌ ಗೆ ಅನುಮತಿ ನೀಡಲು ಸಿದ್ಧತೆ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶ್ರೀಕಂಠೇಶ್ವರ ದೇವಸ್ಥಾನದ ಹುಂಡಿ ದುಡ್ಡಿನ ಮೇಲೆ ಶಾಸಕರ ಕಣ್ಣು
    ರಾಜ್ಯ ಸುದ್ದಿ March 10, 2023

    ಶ್ರೀಕಂಠೇಶ್ವರ ದೇವಸ್ಥಾನದ ಹುಂಡಿ ದುಡ್ಡಿನ ಮೇಲೆ ಶಾಸಕರ ಕಣ್ಣು

    By adminMarch 10, 2023No Comments2 Mins Read
    sree kanteshwara devalaya

    ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಕೆಲವು ದಿನಗಳಲ್ಲಿ ಘೋಷಣೆಯಾಗುವ ಸಾಧ್ಯತೆ ಇದ್ದು, ಈ ಮಧ್ಯೆ ಮತದಾರರ ಓಲೈಕೆಗಾಗಿ ರಾಜಕಾರಣಿಗಳು ಏನೆಲ್ಲಾ ಪ್ಲಾನ್ ಮಾಡುತ್ತಾರೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಅಂತೆಯೇ ಜಾತಿರಾಜಕಾರಣದ ಓಲೈಕೆಗಾಗಿ ಶಾಸಕರೊಬ್ಬರು ದೇವರ ಹುಂಡಿ ಹಣದಲ್ಲಿ ಸಮುದಾಯ ನಿರ್ಮಾಣ ಹಾಗೂ ಶಾದಿ ಮಹಲ್‍ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿಗೆ ಪ್ರಸ್ತಾಪ ಸಲ್ಲಿಸಿದ್ದು ಸಿಎಂ ಕೂಡ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿರುವ ವಿಚಾರ ಬಹಿರಂಗವಾಗಿದೆ.

    ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ಈ ರೀತಿ ಪ್ರಸ್ತಾಪವನ್ನಿಟ್ಟಿದ್ದಾರೆ. ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ನಿಧಿಯಲ್ಲಿ ಸಾಕಷ್ಟು ಅನುದಾನವಿದ್ದು, ಈ ಹಣವನ್ನ ಬಳಸಿ ಶಾದಿ ಮಹಲ್ ಸಮುದಾಯ ಭವನ ಸೇರಿ ವಿವಿಧ ಕಾಮಗಾರಿಗಳನ್ನ ಕೈಗೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ಬಳಿ ಪ್ರಸ್ತಾಪವಿಟ್ಟಿದ್ದಾರೆ. ಶಾಸಕ ಹರ್ಷವರ್ದನ್ ಪ್ರಸ್ತಾಪಕ್ಕೆ ಸಿಎಂ ಬೊಮ್ಮಾಯಿ ಕೂಡ ಸೈ ಎಂದು ಒಪ್ಪಿಗೆ ಸೂಚಿಸಿದ್ದಾರೆ.

    ಆದರೆ ಮುಜರಾಯಿ ಇಲಾಖೆ ಕಾಯ್ದೆ ಪ್ರಕಾರ ಯಾವುದೇ ದೇವಸ್ಥಾನದ ಹುಂಡಿ ಹಣವನ್ನು ಆ ದೇಗುಲದ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಬೇಕು. ಪಕ್ಕದ ದೇವಸ್ಥಾನಕ್ಕೆ ಕೂಡ ಬಳಕೆ ಮಾಡಬೇಕಾದರೂ ಹಲವು ಕಾನೂನು ಕಟ್ಟಲೆಗಳಿವೆ. ಆದರೆ ಕ್ಷೇತ್ರಕ್ಕೆ ಕೋಟಿ ಕೋಟಿ ರೂಪಾಯಿ ಅನುದಾನ ಬಂದರೂ ಸಹ ಆ ಅನುದಾನ ಬಳಸುವ ಬದಲು ಶ್ರೀಕಂಠೇಶ್ವರ ದೇವಸ್ಥಾನದ ಹುಂಡಿ ದುಡ್ಡಿನ ಮೇಲೆ ಶಾಸಕರು ಕಣ್ಣು ಹಾಕಿದ್ದು ಆ ಹಣದಲ್ಲಿ ನಂಜನಗೂಡಿನಲ್ಲಿ ಮಾಡಬೇಕಾದ ಹಲವು ಕಾಮಗಾರಿಗಳನ್ನ ಸಿಎಂ ಮುಂದೆ ಪ್ರಸ್ತಾಪ ಇಟ್ಟಿದ್ದಾರೆ.

    ಶಾದಿ ಮಹಲ್ ನಿರ್ಮಾಣಕ್ಕೆ 1 ಕೋಟಿ 50 ಲಕ್ಷ ರೂ, ಬಾಬು ಜಗಜೀವನ್ ರಾಮ್ ಸಮುದಾಯ ಭವನ -1 ಕೋಟಿ ರೂ, ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 80 ಲಕ್ಷರೂ. ಮಡಿವಾಳ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ, ಈಡಿಗ ಸಮುದಾಯ ಭವನ ನಿರ್ಮಾಣಕ್ಕೆ 70 ಲಕ್ಷ ರೂ. ಉಪ್ಪಾರ ಸಮುದಾಯ ನಿರ್ಮಾಣಕ್ಕೆ 2 ಕೋಟಿ ರೂ. ಪೌರಕಾರ್ಮಿಕರ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ ರೂ. ವಾಲ್ಮೀಕಿ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ 30 ಲಕ್ಷ, ಕುಂಬಾರ ಸಮುದಾಯ ಭವನ ನಿರ್ಮಾಣಕ್ಕೆ 30 ಲಕ್ಷ ರೂ. ಒಕ್ಕಲಿಗ, ಗೆಜ್ಜೆಗಾರ ಸಮುದಾಯ , ಗಾಣಿಗರ ಭವನ ನಿರ್ಮಾಣಕ್ಕೆ ತಲಾ ಮೂವತ್ತು ಲಕ್ಷ ರೂ. ಬಳಸಲು ಪ್ರಸ್ತಾಪ ಸಲ್ಲಿಸಿದ್ದಾರೆ.

    ದೇವರ ಹುಂಡಿ ದುಡ್ಡಲ್ಲಿ ಕಾಮಗಾರಿಗೆ ಸಲ್ಲಿಸಿರುವ ಪ್ರಸ್ತಾಪ ನೇರವಾಗಿ ಸಿಎಂ ಬೊಮ್ಮಾಯಿ ಬಳಿಯೇ ಹೋಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರು ಶಾದಿ ಮಹಲ್ ಬಿಟ್ಟು ಉಳಿದ ಎಲ್ಲಾ ಕಾಮಗಾರಿಗಳಿಗೂ ಶ್ರೀಕಂಠೇಶ್ವರ ದೇವಸ್ಥಾನದ ಹುಂಡಿ ಹಣವನ್ನ ಬಳಸಲು ಒಪ್ಪಿಗೆ ಸೂಚಿಸಿದ್ದಾರೆ.

    ಮುಜರಾಯಿ ಕಾನೂನು ಉಲ್ಲಂಘಿಸಿ ತರಾತುರಿಯಲ್ಲಿ ಸಿಎಂ ಬೊಮ್ಮಾಯಿ ಅನುಮತಿ ನೀಡಿದ್ದು ಹೇಗೆ ಕಾಣಿಕೆಯಾಗಿ ಭಕ್ತರು ನೀಡುವ ದುಡ್ಡನ್ನು ಹೀಗೆ ದುರ್ಬಳಕೆ ಮಾಡಿಕೊಳ್ಳುವುದು ತಪ್ಪಲ್ಲವೇ ಎಂಬುದು ಜನರ ಪ್ರಶ್ನೆಯಾಗಿದೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

     

    admin
    • Website

    Related Posts

    ಡಿಸಿಎಂ ಡಾ.ಜಿ. ಪರಮೇಶ್ವರ್ ಆರೋಗ್ಯದಲ್ಲಿ ಏರುಪೇರು: ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು

    October 27, 2026

    ಎಸ್‌ ಐಆರ್‌ ಮುಕ್ತಾಯ; ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಏನೇನು ಬದಲಾವಣೆ?

    October 27, 2026

    ದೀಪಾವಳಿಗೂ ಮುನ್ನ ಮನೆ ಸ್ವಚ್ಛಗೊಳಿಸುತ್ತಿದ್ದೀರಾ? ಹಲ್ಲಿ, ಜಿರಳೆಗಳ ಕಾಟ ತಪ್ಪಿಸಲು ಈ ಕ್ರಮ ಅನುಸರಿಸಿ!

    October 27, 2026

    Comments are closed.

    Our Picks

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026

    ಕ್ರೆಡಿಟ್ ಕಾರ್ಡ್ ಹೊಂದಿರುವ ಪತಿ ಮೃತಪಟ್ಟರೆ ಸಾಲವನ್ನು ಪತ್ನಿ ತೀರಿಸಬೇಕಾ? ಬ್ಯಾಂಕಿಂಗ್ ನಿಯಮಗಳೇನು?

    October 26, 2026

    PM Kisan ಹಣ ಯಾವಾಗ ಬರುತ್ತೆ? ರೈತರು ಈ ಕೆಲಸಗಳನ್ನು ಮಾಡದಿದ್ದರೆ ಕಂತು ಸ್ಥಗಿತವಾಗಬಹುದು!

    October 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಕ್ಯಾನ್ಸರ್ ಚಿಕಿತ್ಸೆಯ ವೆಚ್ಚದಿಂದ ಕಂಗಾಲಾಗಿರುವ ರೋಗಿಗಳಿಗೆ ತುಸು ನೆಮ್ಮದಿ ನೀಡುವ ಬೆಳವಣಿಗೆ ನಡೆದಿದೆ. ಭಾರತೀಯ ಔಷಧ ಬೆಲೆ ನಿಯಂತ್ರಣ ಸಂಸ್ಥೆ…

    ಗೃಹಿಣಿಯರೇ, ವಿದ್ಯಾರ್ಥಿಗಳೇ ಎಚ್ಚರ! ವರ್ಕ್ ಫ್ರಮ್ ಹೋಮ್ ಹೆಸರಿನಲ್ಲಿ ಆನ್ ಲೈನ್ ವಂಚಕರ ಜಾಲ!

    October 29, 2026

    ರೈಲಿನಲ್ಲಿ ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಮೊಬೈಲ್ ಚಾರ್ಜಿಂಗ್ ಬಂದ್? ಪ್ರಯಾಣಿಕರು ತಿಳಿಯಬೇಕಾದ ಮಾಹಿತಿ

    October 29, 2026

    ಕಿಡ್ನಿ ರೋಗಿಗಳಿಗೆ ಮನೆಬಾಗಿಲಲ್ಲೇ ಡಯಾಲಿಸಿಸ್ ಸೇವೆ? ಕಿಡ್ನಿ ರೋಗಿಗಳಿಗೆ ಗುಡ್‌ ನ್ಯೂಸ್

    October 29, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.