ಅಂಗನವಾಡಿ ಕಾಮಗಾರಿ ಬಿಲ್ ನಕಲಿ ಆರೋಪದ ಮೇಲೆ ಸಚಿವ ಭೈರತಿ ಬಸವರಾಜು ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಸಚಿವ ಭೈರತಿ ಬಸವರಾಜ್ ವಿರುದ್ದ ಇತ್ತೀಚೆಗೆ 97 ಕೋಟಿ ರೂ. ವಂಚನೆ ಬಗ್ಗೆ ಟಿ.ಜೆ ಅಬ್ರಾಹಂ ದೂರು ನೀಡಿದ್ದರು. ಇದೀಗ ಮತ್ತೊಂದು ದೂರು ನೀಡಿದ್ದಾರೆ.
ಅಂಗನವಾಡಿ ಕಾಮಗಾರಿ ಬಿಲ್ ನಕಲಿ ಮಾಡಲಾಗಿದೆ. ವಿಜಿನಾಪುರ 50ನೇ ವಾರ್ಡ್ ನ ಅಂಗನವಾಡಿ ಸಂಬಂಧ ಜಾಬ್ ಕಾರ್ಡ್,ಟೆಂಡರ್ ನೋಟಿಫಿಕೇಷನ್, ಬ್ಯಾಂಕ್ ಗ್ಯಾರಂಟಿ ಎಲ್ಲವೂ ನಕಲಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


