nammatumakuru

    Subscribe to Updates

    Get the latest creative news from FooBar about art, design and business.

    What's Hot

    ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರ: ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

    April 1, 2026

    ತುಮಕೂರು: ಅಣ್ಣನಿಂದಲೇ ತಮ್ಮನ ಕೊಲೆ; ಸುಳ್ಳು ಕಥೆ ಕಟ್ಟಿ ಸಿಕ್ಕಿಬಿದ್ದ ತಂದೆ–ಮಗ!

    April 1, 2026

    ಗುಣಮಟ್ಟದ ಹಾಲು ಶೇಖರಣೆ: ತುಮಕೂರು ಜಿಲ್ಲೆ ರಾಜ್ಯದಲ್ಲೇ ಪ್ರಥಮ: ಶಾಸಕ ಎಚ್.ವಿ.ವೆಂಕಟೇಶ್

    April 1, 2026
    Facebook Twitter Instagram
    ಟ್ರೆಂಡಿಂಗ್
    • ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರ: ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು
    • ತುಮಕೂರು: ಅಣ್ಣನಿಂದಲೇ ತಮ್ಮನ ಕೊಲೆ; ಸುಳ್ಳು ಕಥೆ ಕಟ್ಟಿ ಸಿಕ್ಕಿಬಿದ್ದ ತಂದೆ–ಮಗ!
    • ಗುಣಮಟ್ಟದ ಹಾಲು ಶೇಖರಣೆ: ತುಮಕೂರು ಜಿಲ್ಲೆ ರಾಜ್ಯದಲ್ಲೇ ಪ್ರಥಮ: ಶಾಸಕ ಎಚ್.ವಿ.ವೆಂಕಟೇಶ್
    • ಸಿದ್ದಗಂಗಾ ಮಠವು ಕರುಣಾ ಗಂಗೆಯಾಗಿ ಹರಿಯುತ್ತಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು
    • ತುಮಕೂರು: ಅಂತರಸನಹಳ್ಳಿ ಸೇತುವೆ ಬಳಿ ರಸ್ತೆಯಲ್ಲೇ ಹರಿಯುತ್ತಿದೆ ಕೊಳಚೆ ನೀರು; ವಾಹನ ಸವಾರರ ಪರದಾಟ
    • ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
    • ನಡೆಯುವ ದೇವರು, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು
    • ಇಂದು ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ 119ನೇ ಜನ್ಮದಿನೋತ್ಸವ ಸಂಭ್ರಮ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರಾಕ್ಷಸ ರಾಜಕೀಯಕ್ಕೆ ಕೊನೆ ಎಳೆಯಬೇಕು: ಮಧುಗಿರಿಯಲ್ಲಿ ಎಚ್.ಡಿ.ಕುಮಾರಸ್ವಾಮಿ
    ಮಧುಗಿರಿ April 10, 2023

    ರಾಕ್ಷಸ ರಾಜಕೀಯಕ್ಕೆ ಕೊನೆ ಎಳೆಯಬೇಕು: ಮಧುಗಿರಿಯಲ್ಲಿ ಎಚ್.ಡಿ.ಕುಮಾರಸ್ವಾಮಿ

    By adminApril 10, 2023No Comments3 Mins Read
    kumaraswami

    ಮಧುಗಿರಿ: ಕ್ಷೇತ್ರದ ಹಾಲಿ ಶಾಸಕರಾದ ಎಂ.ವಿ. ವೀರಭದ್ರಯ್ಯ ರವರ ನಿವಾಸ ಡಿ ಕೈಮರದಲ್ಲಿ ಹಮ್ಮಿಕೊಂಡಿದ್ದ ವಿವಿಧ ಪಕ್ಷಗಳಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಹಲವಾರು ಪಕ್ಷಗಳಲ್ಲಿ ಸೇವೆ ಸಲ್ಲಿಸಿದ ಜನಸೇವಕರು, ಸಮಾಜ ಸೇವಕರು ಹಾಗೂ ಹಲವಾರು ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರುಗಳು ಸುಮಾರು 2,000ಕ್ಕೂ ಹೆಚ್ಚು ಜನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ತೊರೆದು ವೀರಭದ್ರಯ್ಯ ರವರ ಚುನಾವಣಾ ಬೆಂಬಲಕ್ಕೆ ನಿಂತು ಜೆಡಿಎಸ್ ಪಕ್ಷ ಸೇರ್ಪಡೆ ಆಗಿದ್ದು ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.


    Provided by
    Provided by

    ಮಳೆಯ ಆಧಾರದಲ್ಲಿ ಜೀವನ ಮಾಡುವ ಕ್ಷೇತ್ರ ಇದು, ತೀರ ಬಡಪೀಡಿತ ಪ್ರದೇಶ. ಬೋರ್ವೆಲ್ ಇದ್ದರೆ ಮಾತ್ರ ರೈತರು ಕೃಷಿ ಮಾಡಬಹುದು ಆದ್ದರಿಂದ ರೈತರಿಗಾಗಿ ಶಾಶ್ವತ ನೀರಿನ ಪರಿಹಾರ ರೂಪಿಸಬೇಕು, ರಾಜ್ಯದಲ್ಲಿ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಸುಮಾರು ಎರಡೂವರೆ ಲಕ್ಷ ಕೋಟಿ ಹಣ ಬೇಕು. ಅದಕ್ಕೆ ಐದು ವರ್ಷದ ಸ್ವತಂತ್ರ ಸರ್ಕಾರದ ಅಧಿಕಾರ ನನಗೆ ಕೊಡಿ, ಉರಿಬಿಸಿಲಿನಲ್ಲಿ ನಾಲ್ಕು ತಿಂಗಳಲ್ಲಿ ರಾಜ್ಯ ವ್ಯಾಪ್ತಿ ಓಡಾಡಿ ಬಡವರಿಗಾಗಿ ಬದುಕು ಕಟ್ಟುವುದಕ್ಕೆ ಕೆಲಸ ಮಾಡುತ್ತ ಬಂದಿದ್ದು, ಬಡವರಿಗಾಗಿಯೇ ಪಂಚರತ್ನ ಯೋಜನೆ ತಂದಿದ್ದು, ಅಧಿಕಾರಕ್ಕೆ ಬಂದ ಕೂಡಲೇ ಪಂಚಾತ್ಮ ಯೋಜನೆಯ ಜಾರಿಯಾಗುತ್ತೆ ಆದ್ದರಿಂದ ನಮ್ಮ ಪಕ್ಷದ ಕ್ಷೇತ್ರದ ಅಭ್ಯರ್ಥಿ ವೀರಭದ್ರಯ್ಯ ರವರ ಗೆಲುವು ತುಂಬಾನೇ ಮುಖ್ಯ ಈ ಕಾರ್ಯಕ್ರಮ ಯಶಸ್ವಿಗೆ ಕಾರಣಕರ್ತರಾದ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಕೊಂಡವಾಡಿ ಚಂದ್ರಶೇಖರ್ ಮತ್ತು ಬೆಂಬಲಿಗರು, ಎಸ್ ಡಿ ಕೃಷ್ಣಪ್ಪ ರವರ ಅಭಿಮಾನಿಗಳು ಹಲವು ಪಕ್ಷಗಳ ಮುಖಂಡರು ಪಕ್ಷ ಸೇರ್ಪಡೆಯಾಗಿದ್ದು ಎಲ್ಲರೂ ಅವರ ಮನೆಗೆ ಮರಳಿ, ಮತ್ತೆ ಮನೆಗೆ ಬಂದಂತೆ. 2008 ರ ಚುನಾವಣಾ ಋಣ ನನ್ನ ಮೇಲಿದೆ ಸಂಪೂರ್ಣ ಅಧಿಕಾರ ಸಿಗದಿರುವುದರಿಂದ ಅಭಿವೃದ್ಧಿಪಡಿಸಲಾಗಿಲ್ಲ ಆದ್ದರಿಂದ ಈ ಬಾರಿ ಸಂಪೂರ್ಣ ಅಧಿಕಾರ ಕೊಡಿ ನಾನು ದತ್ತು ಪಡೆದಾರರು ಕ್ಷೇತ್ರ ಅಭಿವೃದ್ಧಿ ಮಾಡುವೆ ಎಂದರು.

    ಮಾಜಿ ಶಾಸಕ ರಾಜಣ್ಣನಿಗೆ ಪರೋಕ್ಷಕವಾಗಿ ಟಾಂಗ್ ಕೊಟ್ಟ ಕುಮಾರಸ್ವಾಮಿ :
    ಅಪೇಕ್ಸ್ ಬ್ಯಾಂಕ್ ಹಗರಣ ಬಯಲಾಗಿ ಜೈಲಿಗೆ ಹೋಗಬೇಕಿದ್ದ ವ್ಯಕ್ತಿಗೆ ಬಿಜೆಪಿ ಸರ್ಕಾರ ರಚನೆಯಾದ ಕೂಡಲೇ ರಕ್ಷಣೆ ಕೊಟ್ಟು ಶ್ರೀರಕ್ಷೆಯಾದ ಬಿಜೆಪಿ ಸರ್ಕಾರ, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ನಾಯಕ ಸಮಾಜದ ಮತಗಳು ಮಾತ್ರ ಬೇಕು ಅಷ್ಟೇ ನಾಯಕ ಸಮಾಜ ಗುರುಗಳ ಕುಟುಂಬದ ರಕ್ಷಣೆ ಬೇಡ,ಕಳೆದ ಸಂಸದೀಯ ಚುನಾವಣಾ ಸಂದರ್ಭದಲ್ಲಿ ದೇಶದ ಒಬ್ಬ ಮಾಜಿ ಪ್ರಧಾನಿಯ ಸೋಲಿಗೆ ಕಾರಣಕರ್ತರಾಗಿ ಹಾಗೂ ಅವರ ಸಾವು ಬಯಸಿದ ವ್ಯಕ್ತಿಗೆ ತಕ್ಕ ಪಾಠ ಕಲಿಸಬೇಕು, ಕ್ಷೇತ್ರದಲ್ಲಿ ರಾಕ್ಷಸಿಯ ರಾಜಕೀಯಕ್ಕೆ ಕೊನೆಯಲೆಯ ಬೇಕು ಎಂದು ಸಮಾವೇಶದಲ್ಲಿ ಟಾಂಗ್ ಕೊಟ್ಟರು.

    ಶಾಸಕರಾದ ವೀರಭದ್ರಯ್ಯ ಮಾತನಾಡಿ, ಕೊಂಡವಾಡಿ ಚಂದ್ರಶೇಖರ್ ಎಸ್.ಡಿ. ಕೃಷ್ಣಪ್ಪ ಇನ್ನು ಹಲವು ಮುಖಂಡರ ನೇತೃತ್ವದಲ್ಲಿ ಜಾತ್ಯಾತೀತ ಜನತಾದಳ ಪಕ್ಷದ ಸಿದ್ಧಾಂತ ಕುಮಾರಸ್ವಾಮಿ ಅವರ ಮಾರ್ಗದರ್ಶನ ಬೆಂಬಲಿಸಿ ಕಾಂಗ್ರೆಸ್ ಬಿಜೆಪಿ ಪಕ್ಷ ತೊರೆದು ಬೃಹತ್ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದರು.

    ಪ್ರಾದೇಶಿಕ ಪಕ್ಷವಾಗಿದ್ದರೂ ಸಹ ದೇಶಕ್ಕೆ ಪ್ರಧಾನಿ ಕೊಟ್ಟಿದ್ದು, ಇದೇ ನಮ್ಮ ಜಾತ್ಯತೀತ ಜನತಾದಳ ಪಕ್ಷ ನಾವು ಹೆಮ್ಮೆಯಿಂದ ಹೇಳಬಹುದು, ಎಚ್.ಡಿ.ದೇವೇಗೌಡರು ರಾಜ್ಯದ ಮುಖ್ಯಮಂತ್ರಿಗಳಾಗಿ, ದೇಶದ ಪ್ರಧಾನಮಂತ್ರಿಗಳಾಗಿ ಹತ್ತು ಹಲವು ಜನಉಪಯೋಗಿ ಕೆಲಸ ಕಾರ್ಯಗಳನ್ನು ಮಾಡಿರುವುದು ಒಂದು ಇತಿಹಾಸದಂತೆ ನಾವು ನೋಡಬಹುದು, ಗ್ರಾಮೀಣ ಭಾಗದ ಬದುಕನ್ನು ಹಸಿನ ಗಳಿಸುವುದಕ್ಕೆ ಈ ಪಂಚ ರತ್ನ ಯೋಜನೆ ಮಾಡಿರುವುದು ಈ ಯೋಜನೆಯಲ್ಲಿ ಆರೋಗ್ಯಕ್ಕೆ, ಶಿಕ್ಷಣಕ್ಕೆ, ವಿದ್ಯಾಭ್ಯಾಸಕ್ಕೆ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿ ಮಾಡಲು, ಪ್ರತಿ ಮನೆ ಮನೆಯ ಸಮಸ್ಯೆ ನೀಗಿಸುವುದಕ್ಕೆ ಈ ಯೋಜನೆಯು ಒಳಗುಂದಿದೆ, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ವಿಧವೆಯರ ಮಾಸಾಸ ಪಿಂಚಣಿ 800 ರಿಂದ 2,500 ಕ್ಕೆ ಏರಿಕೆ,ರೈತರ, ಶ್ರೀ ಶಕ್ತಿ ಸಂಘ ಸಾಲಗಳ ಮನ್ನಾ ಹಲವು ಯೋಜನೆಗಳು ಕಾರ್ಯರೂಪಕ್ಕೆ ಬರುತ್ತದೆ, ಮುಖ್ಯವಾಗಿ ಮಧುಗಿರಿ ಜಿಲ್ಲೆ ಯ ಕನಸು ನನಸಾಗುತ್ತದೆ ಆಗ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

    ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಬರಬೇಕಾದರೆ ಈ ಕ್ಷೇತ್ರದ ಸ್ಥಳೀಯ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ, ಕಾಂಗ್ರೆಸ್ ನ ಹೈಕಮಾಂಡ್ ಸೌಜನ್ಯಕ್ಕಾದರೂ ಮಾತನಾಡಿಸಿಲ್ಲ ಏಕಾಏಕಿ ಅಭ್ಯರ್ಥಿಯನ್ನು ಘೋಷಿಸಿದರು.

    ಅನಿವಾರ್ಯ ಪರಿಸ್ಥಿತಿಯಿಂದ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರುತ್ತಿದ್ದೇನೆ, ಏಕೆಂದರೆ ಈ ಹಿಂದೆ ಇದೆ ಜನತಾ ದಳದಿಂದಲೇ ನಾನು ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿದ್ದೆ, ಜಿಲ್ಲಾ ಪಂಚಾಯತಿಯ ಟಿಕೆಟ್ ಸಹಾ ಲಬಿಸಿತ್ತು ಆಗ ತಾನೇ ನನ್ನ ರಾಜಕೀಯ ಪ್ರವೇಶವಾಗಿತ್ತು, ರಾಜಕೀಯ ಪಕ್ಷದಲ್ಲಿ ನುಡಿದಂತೆ ನಡೆಯುವ ವ್ಯಕ್ತಿ ನಮ್ನ ಕುಮಾರಣ್ಣ ಈ ಹಿಂದೆ ರಾಜ್ಯಕ್ಕೆ ಅಪಾರ ಕೊಡುಗೆಗಳು ಕೊಟ್ಟಿರುವುದು ರೈತರ ಸಾಲ ಮನ್ನಾ, ಸ್ವಸಹಾಯ ಸಂಘಗಳ ಸಾಲ ಮನ್ನಾ ರೈತರ ಬೆನ್ನೆಲುಬಾಗಿ ನಿಂತಿರುವುದು, ಈ ಪಂಚ ರತ್ನ ಯೋಜನೆಯು ಸಹ ಅಪಾರ ಕೊಡುಗೆಗಳಿಂದ ತುಂಬಿದೆ ಕ್ಷೇತ್ರದಲ್ಲಿ ವೀರಭದ್ರಯ್ಯನವರಿಗೆ ಶಕ್ತಿ ತುಂಬಿದರೆ ರಾಜ್ಯದಲ್ಲಿ ಕುಮಾರಣ್ಣನಿಗೆ ಶಕ್ತಿ ತುಂಬಿದಂತೆ ಎಂದು ವೀರಭದ್ರಯ್ಯ ರವರ ಪರ ಮತಯಾಚಿಸಿದರು.

    ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ತಿಮ್ಮರಾಜು, ಸದಸ್ಯರಾದ ನಾಣಿ, ಚಂದ್ರಶೇಖರ್ ಬಾಬು, ಎಂ ಆರ್ ಜಗನ್ನಾಥ್, ಗಂಗರಾಜು, ಆಸಿಯ ಶಾಜು , ಮಾಜಿ ಪುರಸಭೆ ಸದಸ್ಯರಾದ ಅಲೀಂ ಉನ್ನಿಸಾ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಎಸ್.ಡಿ. ಕೃಷ್ಣಪ್ಪ, ದೊಡ್ಡಯ್ಯ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವೆಂಕಟೇಶ್ ಕೃಷ್ಣಪ್ಪ, ಮುಖಂಡರಾದ ಕಂಬದ ಹಳ್ಳಿ ರಘು, ಸಲ್ಮಾನ್, ನಾಗಭೂಷಣ್, ಗೋವಿಂದರಾಜು, ಕಾಂಗ್ರೆಸ್ನ ಯುವ ಮುಖಂಡ ಹರ್ಷದ್, ಕೊಡಿಗೇನಹಳ್ಳಿ ಜಬಿವುಲ್ಲಾ, ಅಲ್ಲೂ ಮಾಮು ಮತ್ತು ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಇದ್ದರು.

    ವರದಿ: ಅಬಿದ್ ಮಧುಗಿರಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

     

    admin
    • Website

    Related Posts

    ಪವಿತ್ರ ರಂಜಾನ್ ಹಬ್ಬ ಸಹೋದರತೆಯ ಸಂಕೇತ: ಶಾಸಕ ಕೆ.ಎನ್.ರಾಜಣ್ಣ

    March 22, 2026

    ಮಧುಗಿರಿ: ಒಳ ಮೀಸಲಾತಿ ಅನ್ವಯ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ

    March 12, 2026

    ಮಧುಗಿರಿ: ಅಪ್ರಾಪ್ತೆಯ ಮದುವೆಗೆ ಬ್ರೇಕ್: ಪೊಲೀಸರು ಬರುವಷ್ಟರಲ್ಲಿ ವಧು-ವರ ಎಸ್ಕೇಪ್!

    March 10, 2026

    Comments are closed.

    Our Picks

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರ: ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

    April 1, 2026

    ದಾವಣಗೆರೆ: ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದ್ದು, ಜಿಎಸ್‌ಟಿ ಸಂಗ್ರಹ ಮತ್ತು ಹೂಡಿಕೆಯಲ್ಲಿ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ…

    ತುಮಕೂರು: ಅಣ್ಣನಿಂದಲೇ ತಮ್ಮನ ಕೊಲೆ; ಸುಳ್ಳು ಕಥೆ ಕಟ್ಟಿ ಸಿಕ್ಕಿಬಿದ್ದ ತಂದೆ–ಮಗ!

    April 1, 2026

    ಗುಣಮಟ್ಟದ ಹಾಲು ಶೇಖರಣೆ: ತುಮಕೂರು ಜಿಲ್ಲೆ ರಾಜ್ಯದಲ್ಲೇ ಪ್ರಥಮ: ಶಾಸಕ ಎಚ್.ವಿ.ವೆಂಕಟೇಶ್

    April 1, 2026

    ಸಿದ್ದಗಂಗಾ ಮಠವು ಕರುಣಾ ಗಂಗೆಯಾಗಿ ಹರಿಯುತ್ತಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

    April 1, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.