ಅಸ್ಸಾಂ ಸರ್ಕಾರ ಶಾಲಾ ಶಿಕ್ಷಕರಿಗೆ ಡ್ರೆಸ್ ಕೋಡ್ ಬಿಡುಗಡೆ ಮಾಡಿದೆ. ಆದೇಶದ ಪ್ರಕಾರ, ಕೆಲವು ಶಿಕ್ಷಕರು ಸಾಮಾನ್ಯ ಜನರಿಗೆ ಸ್ವೀಕಾರಾರ್ಹವಲ್ಲದ ರೀತಿಯಲ್ಲಿ ಡ್ರೆಸ್ಸಿಂಗ್ ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಪುರುಷ ಶಿಕ್ಷಕರು ಟೀ ಶರ್ಟ್ ಮತ್ತು ಜೀನ್ಸ್ ಧರಿಸುವಂತಿಲ್ಲ. ಮಹಿಳಾ ಶಿಕ್ಷಕರು ಟೀ ಶರ್ಟ್, ಜೀನ್ಸ್, ಲೆಗ್ಗಿಂಗ್ ಧರಿಸಿ ಶಾಲೆಗೆ ಬರಬಾರದು. ಎಲ್ಲಾ ಶಿಕ್ಷಕರು ಸ್ವಚ್ಛ, ಸಾಧಾರಣ ಮತ್ತು ಸಭ್ಯವಾದ ಬಟ್ಟೆಗಳನ್ನು ಧರಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕ್ಯಾಶುಯಲ್ ಮತ್ತು ಪಾರ್ಟಿ ವೇರ್ ಗಳನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಪುರುಷ ಶಿಕ್ಷಕರಿಗೆ ವಸ್ತ್ರ ಸಂಹಿತೆ ಎಂದರೆ ಶರ್ಟ್ ಮತ್ತು ಪ್ಯಾಂಟ್ ಎಂದು ಸರ್ಕಾರ ನಿಗದಿಪಡಿಸಿದೆ. ಮಹಿಳಾ ಶಿಕ್ಷಕರಿಗೆ ಸಾಧಾರಣ ಸಲ್ವಾರ್ ಸೂಟ್ ಮತ್ತು ಸೀರೆ ಧರಿಸುವಂತೆ ಸೂಚನೆ ನೀಡಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


