ತುಮಕೂರು: ಮುಸ್ಲಿಂ ಸಮುದಾಯದವರು ಜಿಲ್ಲೆಯಲ್ಲಿ ಇಂದು ಶ್ರದ್ಧಾಭಕ್ತಿಯಿಂದ ಬಕ್ರೀದ್ ಆಚರಿಸಿದರು. ಇನ್ನು ಕೊರಟಗೆರೆ ಪಟ್ಟಣದಲ್ಲಿ ಇರುವ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭಾಗಿಯಾದರು.
ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಸ್ಲಿಂ ಮುಖಂಡರ ನಮಾಝ್ ನಲ್ಲಿ ಪರಮೇಶ್ವರ್ ಪಾಲ್ಗೊಂಡರು. ಕಪ್ಪು ಟೋಪಿ ಧರಿಸಿ ಪ್ರಾರ್ಥನೆಯಲ್ಲಿ ಭಾಗಿಯಾದ ಪರಮೇಶ್ವರ್ ಅವರೊಂದಿಗೆ ನೂರಾರು ಮುಸ್ಲಿಂ ಭಾಂದವರು ಹಾಜರಿದ್ದರು.
ಈದ್ಗಾ ಮೈದಾನದಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಪ್ರಪ್ರಥಮವಾಗಿ ಅಲ್ಲಾಗೆ ನಾನು ನಮನ ಸಲ್ಲಿಸ್ತಿನಿ. ಇಡೀ ವಿಶ್ವಕ್ಕೆ ಸಂದೇಶ ಕೊಡುವ ಬಕ್ರಿದ್ ಹಬ್ಬ ಇದು. ನಾನು ಎಲ್ಲರಿಗೂ ನಮನಗಳನ್ನ ಹೇಳ್ತಿನಿ ಎಂದರು.
ಅಲ್ಲಾ ಎಲ್ಲರಿಗೂ ಅನೇಕ ರೀತಿ ಪರೀಕ್ಷೆ ಮಾಡ್ತಾನೆ. ಅದರಲ್ಲೂ ಮನುಷ್ಯರಿಗೆ ಹೆಚ್ಚು ಪರೀಕ್ಷೆ ಮಾಡ್ತಾನೆ. ಮಹಮ್ಮದ್ ಇಬ್ರಾಹಿಂ ಇಡೀ ವಿಶ್ವಕ್ಕೆ ಸಂದೇಶ ಕೊಟ್ಟಿದ್ದಾರೆ ಎಂದರು.
ಇದು ಪವಿತ್ರವಾದ ಹಬ್ಬ. ನಾನು ಬಹಳ ಸಂತೋಷವಾಗಿ ನಿಮ್ಮೊಟ್ಟಿಗೆ ಭಾಗಿಯಾಗಿದ್ದೇನೆ. ಚುನಾವಣಾ ಸಂದರ್ಭದಲ್ಲಿ ನಿಮ್ಮ ಬಳಿ ಬಂದು ನಿಮ್ಮ ಅಶಿರ್ವಾದ ಕೇಳಿದ್ದೆ, ನೀವೆಲ್ಲಾ ಕೊಟ್ಟಿದ್ದೀರಾ, ಅಲ್ಲಾನ ಕೃಪೆಯಿಂದ ಇವತ್ತು ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಿಮ್ಮ ಅಶಿರ್ವಾದದಿಂದ ಗೃಹ ಸಚಿವನಾಗಿದ್ದೇನೆ. ಈ ರಾಜ್ಯದಲ್ಲಿ ಶಾಂತಿ ಕಾಪಾಡಬೇಕಾದ ಕೆಲಸ ನನ್ನದು ಎಂದರು.
ಇದರಲ್ಲಿ ಯಾವುದೇ ಮುಲಾಜಿಲ್ಲದೇ ನನ್ನ ಕೆಲಸವನ್ನ ನಿಬಾಯಿಸ್ತಿನಿ. ನಾನು ಶಾಂತಿ ಕಾಪಾಡ್ತಿನಿ ಅಂತ ಪ್ರಮಾಣ ವಚನ ಸ್ವೀಕಾರ ಮಾಡಿದಿನಿ. ಇಡೀ ರಾಜ್ಯದಲ್ಲಿ ಶಾಂತಿ ಕಾಪಾಡ್ತಿನಿ. ಎಲ್ಲಾ ಕಷ್ಟಗಳಿಗೂ ಅಲ್ಲಾ ಸಹಕಾರ ಮಾಡುತ್ತೇನೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA