ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಆರಂಭವಾದ ಟರ್ಮಿನಲ್ -2ರಿಂದ ಬಿಎಂಟಿಸಿಯ ವಾಯುವಜ್ರ ಹವಾನಿಯಂತ್ರಿತ ವೊಲ್ಲೊ ಬಸ್ ಸಂಚಾರ ಸೋಮವಾರದಿಂದ ಅಧಿಕೃತವಾಗಿ ಆರಂಭವಾಗಿದೆ.
ಈಗಾಗಲೇ ಟರ್ಮಿನಲ್-1 ರಿಂದ ವಾಯುವಜ್ರ ಬಸ್ ಕಾರ್ಯಾಚರಣೆ ನಡೆಸುತ್ತಿತ್ತು. ಎರಡು ತಿಂಗಳಿನಿಂದ ಟರ್ಮಿನಲ್ 2ವರೆಗೆ ಪ್ರಾಯೋಗಿಕವಾಗಿ ಬಸ್ ಓಡಿಸಲಾಗುತ್ತಿತ್ತು. ಆದರೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಇನ್ನೂ ಮುಂದೆ ಟರ್ಮಿನಲ್ 2ರಲ್ಲಿ ಬಿಎಂಟಿಸಿ ಪೂರ್ಣ ಪ್ರಮಾಣದಲ್ಲಿ ವಾಯುವಜ್ರ ಬಸ್ ಸೇವೆ ಒದಗಿಸಲಿದೆ. ಟರ್ಮಿನಲ್-1 ಬಸ್ ದರಗಳು ಇದಕ್ಕೂ ಅನ್ವಯಿಸುತ್ತವೆ. ಟರ್ಮಿನಲ್ 2ರಲ್ಲಿ ಬಸ್ ನಿಲುಗಡೆಗೆ ಜಾಗ ಮೀಸಲಿಡಲಾಗಿದೆ ಎಂದು ಬಿಎಂಟಿಸಿ ಟ್ವಿಟ್ ಮಾಡಿದೆ.
ಪ್ರತಿ ದಿನ ಸರಾಸರಿ ಆರರಿಂದ ಏಳು ಸಾವಿರ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ನಗರದ ಕಡೆಗೆ ಪ್ರಯಾಣಿಸುತ್ತಾರೆ. ಅದೇ ರೀತಿ ಐದರಿಂದ ಆರು ಸಾವಿರ ಪ್ರಯಾಣಿಕರು ಬೆಂಗಳೂರಿನ ವಿವಿಧ ಭಾಗಗಳಿಂದ ವಿಮಾನ ನಿಲ್ದಾಣಕ್ಕೆ ಸಂಚಾರ ಮಾಡುತ್ತಾರೆ. ಹೊಸ ಟರ್ಮಿನಲ್‌ಗೆ ಬಿಎಂಟಿಸಿ ಬಸ್ ಸೇವೆ ಆರಂಭಿಸಿರುವುದನ್ನು
ಪ್ರಯಾಣಿಕರು ಸ್ವಾಗತಿಸಿದ್ದಾರೆ. ಕ್ಯಾಬ್‌ಗಳಿಗೆ ಹೋಲಿಸಿದರೆ, ಬಿಎಂಟಿಸಿಯ ವಾಯುವಜ್ರ ಟಿಕೆಟ್ ದರಗಳು ಅಗ್ಗವಾಗಿದೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು. ಟರ್ಮಿನಲ್ 1 ಮತ್ತು 2ರಲ್ಲಿ ಬಿಎಂಟಿಸಿ ಕಾರ್ಯಾಚರಣೆ ಆರಂಭಿಸಿರುವುದು ಸಂತಸ ತಂದಿದೆ ಎಂದು ಪ್ರಯಾಣಿಕ ಅರ್ಜುನ್ ಬಿ. ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA