ಕೊರಟಗೆರೆ : ತಾಲೂಕಿನ ಹಕ್ಕಿಪಿಕ್ಕಿ ಕಾಲೋನಿಯ ಸರ್ಕಾರಿ ಹಳ್ಳದಲ್ಲಿ ಅಕ್ರಮವಾಗಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ 15 ಜನ ಆರೋಪಿಗಳನ್ನು ಕೊರಟಗೆರೆ ಪೊಲೀಸರ ತಂಡ ಬಂಧಿಸಿ ಅವರಿಂದ 4.15 ಲಕ್ಷ ರೂ ನಗದು, 3 ಕಾರು ಮತ್ತು 15 ಫೋನ್ ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಹೊಳವನಹಳ್ಳಿ ಹೋಬಳಿಯ ಅರಸಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಕ್ಕಿಪಿಕ್ಕಿ ಕಾಲೋನಿಯ ಸರ್ಕಾರಿ ಹಳ್ಳದಲ್ಲಿ ಅಕ್ರಮ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಬೆಂಗಳೂರು, ಮೈಸೂರು,ಮಂಡ್ಯ ಮತ್ತು ಗೌರಿಬಿದನೂರು ಮೂಲದ 15 ಜನ ಇಸ್ಪೀಟ್ ಆಟಗಾರರ ಮೇಲೆ ಕೊರಟಗೆರೆ ಪಿಎಸ್ಐ ಚೇತನ್ ಗೌಡ ನೇತೃತ್ವದ ತಂಡ ದಾಳಿ ನಡೆಸಿದೆ. ಇವರ ವಿರುದ್ಧ ಪ್ರಕರಣ ದಾಖಲಾಗಿದೆ, ಮಧುಗಿರಿ ಡಿವೈಎಸ್ಪಿ ವೆಂಕಟೇಶ್ ನಾಯ್ಡು ಮಾರ್ಗದರ್ಶನದಲ್ಲಿ ಕೊರಟಗೆರೆ ಸಿಪಿಐ ಸುರೇಶ್ ಮತ್ತು ಪಿಎಸ್ಐ ಚೇತನ್ ಗೌಡ ನೇತೃತ್ವದಲ್ಲಿ ದಾಳಿ ನಡೆದಿದೆ..
ಸಿಬ್ಬಂದಿಗಳಾದ ದೊಡ್ಡಲಿಂಗಯ್ಯ,ದಯಾನಂದ, ಮಲ್ಲೇಶ್, ರಾಘವೇಂದ್ರ, ರವಿಚಂದ್ರನ್, ಗಣೇಶ್, ಧರ್ಮಪಾಲ್ ನಾಯಕ, ದಿನೇಶ್, ಮಧು, ನಟರಾಜ್, ಪ್ರಕಾಶ್ ಸೇರಿ 12 ಜನರ ಪೊಲೀಸರ ತಂಡ ಮಿಂಚಿನ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ..
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU