nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೊರಟಗೆರೆ: ತುಂಡಾದ ವಿದ್ಯುತ್ ತಂತಿಗೆ 6 ಕುರಿ ಬಲಿ: ಜೀವನಾಧಾರ ಕಳೆದುಕೊಂಡ ರೈತ ಮಹಿಳೆಯಿಂದ ಕಣ್ಣೀರು, ಪರಿಹಾರಕ್ಕೆ ಆಗ್ರಹ

    October 27, 2026

    ಗೃಹಜ್ಯೋತಿ ಗ್ರಾಹಕರೇ ಗಮನಿಸಿ! ಬೆಸ್ಕಾಂನಿಂದ ಮಹತ್ವದ ಸೂಚನೆ; ಈ ಕೆಲಸ ಮಾಡಲೇಬೇಕು

    October 27, 2026

    ಎಸ್‌ ಐಆರ್‌ ಮುಕ್ತಾಯ; ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಏನೇನು ಬದಲಾವಣೆ?

    October 27, 2026
    Facebook Twitter Instagram
    ಟ್ರೆಂಡಿಂಗ್
    • ಕೊರಟಗೆರೆ: ತುಂಡಾದ ವಿದ್ಯುತ್ ತಂತಿಗೆ 6 ಕುರಿ ಬಲಿ: ಜೀವನಾಧಾರ ಕಳೆದುಕೊಂಡ ರೈತ ಮಹಿಳೆಯಿಂದ ಕಣ್ಣೀರು, ಪರಿಹಾರಕ್ಕೆ ಆಗ್ರಹ
    • ಗೃಹಜ್ಯೋತಿ ಗ್ರಾಹಕರೇ ಗಮನಿಸಿ! ಬೆಸ್ಕಾಂನಿಂದ ಮಹತ್ವದ ಸೂಚನೆ; ಈ ಕೆಲಸ ಮಾಡಲೇಬೇಕು
    • ಎಸ್‌ ಐಆರ್‌ ಮುಕ್ತಾಯ; ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಏನೇನು ಬದಲಾವಣೆ?
    • ದೀಪಾವಳಿಗೂ ಮುನ್ನ ಮನೆ ಸ್ವಚ್ಛಗೊಳಿಸುತ್ತಿದ್ದೀರಾ? ಹಲ್ಲಿ, ಜಿರಳೆಗಳ ಕಾಟ ತಪ್ಪಿಸಲು ಈ ಕ್ರಮ ಅನುಸರಿಸಿ!
    • ಐಟಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನಿರಾಕರಣೆ: ಸರ್ಕಾರ ಖಡಕ್ ಎಚ್ಚರಿಕೆ, ಖಾಸಗಿ ಮೀಸಲಾತಿ ವಿಧೇಯಕ ಮತ್ತೆ ಮುನ್ನೆಲೆಗೆ!
    • ಕಬ್ಬಿಗೆ ಸೂಕ್ತ ಬೆಲೆ: ಪ್ರತಿಭಟನೆ ವೇಳೆ ರೈತರ ನಡುವೆಯೇ ಬಣ ಬಡಿದಾಟ: ಪ್ರತಿಭಟನಾ ಸಭೆ ರಣರಂಗವಾಯ್ತು!
    • ಸಂಜೆ ಚಹಾ ಜೊತೆಗೆ ರುಚಿಕರ ಹಾಗೂ ಗರಿಗರಿಯಾದ ಆಲೂಗಡ್ಡೆ ಫ್ರಿಟರ್ಸ್!
    • ದರೋಡೆಕೋರನಿಂದ ಆದಿಕವಿಯವರೆಗೆ; ಮಹರ್ಷಿ ವಾಲ್ಮೀಕಿಯವರ ಬದುಕಿನ ರೋಚಕ ಕಥೆ ಇಲ್ಲಿದೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕರ್ನಾಟಕದಿಂದಲೇ ಬಿಜೆಪಿಯ ಅವನತಿ ಪ್ರಾರಂಭವಾಗಿದೆ: ಸಿಎಂ ಸಿದ್ದರಾಮಯ್ಯ
    ರಾಜ್ಯ ಸುದ್ದಿ July 14, 2023

    ಕರ್ನಾಟಕದಿಂದಲೇ ಬಿಜೆಪಿಯ ಅವನತಿ ಪ್ರಾರಂಭವಾಗಿದೆ: ಸಿಎಂ ಸಿದ್ದರಾಮಯ್ಯ

    By adminJuly 14, 2023No Comments2 Mins Read
    siddaramaiah

    ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಸಿ ರೋಡ್ ಶೋ ಮಾಡಿಸುವುದು ಮತ್ತು ನಡ್ಡಾರವರು ನರೇಂದ್ರ ಮೋದಿಯವರನ್ನು ನೋಡಿ ಮತ ನೀಡಿ ಎಂದರೂ ಜನ ಮತ ನೀಡಲಿಲ್ಲ  ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

    ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸುತ್ತಾ ಮಾತನಾಡಿದ ಅವರು, ಇನ್ನು ಮುಂದೆ ಪ್ರಧಾನಿ ಮೋದಿಯವರ ಮೇಲೆ ಅವಲಂಬಿತರಾಗಬೇಡಿ. ಅವರು ಬಂದ ಕಡೆಯಲೆಲ್ಲಾ ಬಿಜೆಪಿ ಸೋತಿದೆ.  1980 ರಲ್ಲಿ ಜನತಾ ಲೋಕದಳದಿಂದ ಲೋಕಸಭಾ ಸ್ಪರ್ಧಿಯಾಗಿದ್ದೆ. ಆ ಸಂದರ್ಭದಲ್ಲಿ ಮಂಜುನಾಥ್ ಎಂದು ಕಾಂಗ್ರೆಸ್ ಅವರ ಅಭ್ಯರ್ಥಿಯಾಗಿದ್ದಾಗ, ಇಂದಿರಾ ಗಾಂಧಿ ಹೆಸರು ಹೇಳಿ, ಚುನಾವಣೆ ಗೆಲ್ಲುತ್ತೀರಿ ಎಂದು ಅವರಿಗೆ ಹೇಳಿದರು. ಆ ಕಾಲದಲ್ಲಿಯೂ ಕಾಂಗ್ರೆಸ್ ನವರಿಗೆ ಅಲ್ಲ, ಇಂದಿರಾಗಾಂಧಿ ಹಸರು ಹೇಳಿದರೆ ಚುನಾವಣೆ ಗೆಲ್ಲುತ್ತಿದ್ದರು. ಅಂತೆಯೇ, ಮೋದಿಯವರಿಗೂ ಹೆಸರು ಇತ್ತು. ಆದರೆ ಈಗ ಅದು ಮಂಕಾಗುತ್ತಿದೆ. ಪ್ರಧಾನಿ ಮೋದಿಯವರು ಜನಪ್ರಿಯ ನಾಯಕ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಈಗ ಮಂಕಾಗುತ್ತಿದೆ. ಮೇಲಿದ್ದವರು ಕೆಳಗೆ , ಕೆಳಗಿದ್ದವರು ಮೇಲೆ ಬರಬೇಕು. ಕರ್ನಾಟಕದಿಂದಲೇ ಬಿಜೆಪಿಯ ಅವನತಿ ಪ್ರಾರಂಭವಾಗಿದೆ ಎಂದರು.

    ಧರ್ಮಗಳ ನಡುವೆ ಬೆಂಕಿಯಿಡುವುದು ನಮ್ಮ ಪರಂಪರೆಯಲ್ಲ:

    ಕರ್ನಾಟಕದ ಒಂದು ಸಾವಿರ ವರ್ಷಗಳ ಪರಂಪರೆಯನ್ನು ಭಾಷಣದಲ್ಲಿ ಮಾಡಿಕೊಟ್ಟಿದ್ದಾರೆ.  ಕವಿರಾಜಮಾರ್ಗ ಶ್ರೀ ವಿಜಯ ದಲ್ಲಿ ಪರಧರ್ಮವನ್ನು , ಜೀವನ ಮಾರ್ಗಗಳನ್ನು, ಸಂಸ್ಕೃತಿಗಳನ್ನು ಗೌರವಿಸುವುದೇ ಆಸ್ತಿ ಮತ್ತುಒಡವೆ ಎಂದು ಅದರಲ್ಲಿ ತಿಳಿಸಿದ್ದಾರೆ.  ಅದೇ ಸಮಾಜದ ಆಸ್ತಿ ಎಂದು ಅಲ್ಲಿ ತಿಳಿಸಲಾಗಿದೆ. ನಮ್ಮ ದೇಶದಲ್ಲಿ ಧರ್ಮಗಳು  ಬೇರೆ ಇರಬಹುದು . ಆದರೆ ಎಲ್ಲ ಧರ್ಮಗಳ ಸಾರ ಒಂದೇ . ಮನುಷ್ಯರ ನಡುವೆ ಗೋಡೆ ಕಟ್ಟುವುದು, ಧರ್ಮಗಳ ನಡುವೆ ಬೆಂಕಿ ಇಡುವುದು ಅಮಾನವೀಯವಾದುದು. ಅದು ನಮ್ಮ ಪರಂಪರೆ ಅಲ್ಲ.  ಎಲ್ಲರದರಲ್ಲೂ  ವೈರುಧ್ಯಗಳಿದ್ದರೂ , ಏಕತೆಯನ್ನು ಕಾಣಬೇಕು. ಅದರಲ್ಲಿ ನಂಬಿಕೆ ಇಟ್ಟವರು ನಾವು. ಯಾವುದು ಒಂದು ಧರ್ಮ, ಜಾತಿಗೆ ಅಂಟಿಕೊಂಡವರಲ್ಲ ಎಂದರು.

    ಜನರು ಆತಂಕದಿಂದ ಬದುಕಬೇಕಿಲ್ಲ :

    ವಿದ್ಯಾಸಿರಿ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು. ಬಿಜೆಪಿ ಸರ್ಕಾರ ಇದನ್ನು ನಿಲ್ಲಿಸಿತ್ತು. ಈಗ ಮತ್ತೆ ಜಾರಿಗೆ ತರಲಾಗಿದೆ. ಕರ್ನಾಟಕದಲ್ಲಿ ಹೆಚ್ಚು ಒಣಭೂಮಿ ಇದ್ದಿದ್ದರಿಂದ ನಮ್ಮ ಸರ್ಕಾರ  ಕೃಷಿಭಾಗ್ಯ ಯೋಜನೆ ಈಗ ಮತ್ತೆ ಪ್ರಾರಂಭಿಸಲಾಗಿದೆ.  ಜಿಎಸ್ ಟಿ ತೆರಿಗೆ ಸಂಗ್ರಹ , ಅಬಕಾರಿ ಸುಂಕ ಹೆಚ್ಚಳ , ಮೋಟಾರ್ ವೆಹಿಕಲ್ ತೆರಿಗೆ , ಮುದ್ರಾಂಕ ಶುಲ್ಕ ಗಳನ್ನು ಹೆಚ್ಚಿಸಿ 13500 ಕೋಟಿ ಹೆಚ್ಚು ಸಂಗ್ರಹ ಮಾಡಲಾಗುತ್ತಿದೆ. 8000 ಕೋಟಿ ಸಾಲ ಪಡೆಯುತ್ತಿದ್ದೆವೆ. ನುಡಿದಂತೆ ನಡೆಯುತ್ತಿದ್ದೇವೆ. ನಾವು ನೀಡಿರುವ ಭರವಸೆಗಳನ್ನು ಈಡೇರಿಸಿದ್ದೇವೆ. ಬಿಜೆಪಿಯವರು 600 ಭರವಸೆಗಳಲ್ಲಿ ಶೇ. 10 ರಷ್ಟೂ  ಈಡೇರಿಸಿಲ್ಲ. ರೈತ ಸಾಲ ಮನ್ನಾ ಎಂದರು. ಆದರೆ ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರ ಎಲ್ಲ ಗ್ಯಾರೆಂಟಿ ಯೋಜನೆಗಳನ್ನು ಅನುದಾನ ನಿಗದಿಪಡಿಸಲಾಗಿದೆ.  ಅನುಷ್ಠಾನ ಮಾಡುತ್ತಿದ್ದೇವೆ.  35,410 ಕೋಟಿ ಈ ವರ್ಷ ಉಳಿದ ಅವಧಿಗೆ ಬೇಕಾಗುತ್ತಿದ್ದು , ಅನುದಾನ ನಿಗದಿಪಡಿಸಲಾಗಿದೆ. ಎಲ್ಲ ಐದು ಗ್ಯಾರೆಂಟಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದ್ದು , ಜಾರಿ ಮಾಡಿಯೇ ಮಾಡುತ್ತೇವೆ. ಜನರು ಯಾರೂ ಆತಂಕದಿಂದ ಬದುಕುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಊಟ , ಕಾನೂನು ರಕ್ಷಣೆ , ಕೈಗೆ ಹಣ  ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC

    ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಎಸ್‌ ಐಆರ್‌ ಮುಕ್ತಾಯ; ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಏನೇನು ಬದಲಾವಣೆ?

    October 27, 2026

    ದೀಪಾವಳಿಗೂ ಮುನ್ನ ಮನೆ ಸ್ವಚ್ಛಗೊಳಿಸುತ್ತಿದ್ದೀರಾ? ಹಲ್ಲಿ, ಜಿರಳೆಗಳ ಕಾಟ ತಪ್ಪಿಸಲು ಈ ಕ್ರಮ ಅನುಸರಿಸಿ!

    October 27, 2026

    ಕಬ್ಬಿಗೆ ಸೂಕ್ತ ಬೆಲೆ: ಪ್ರತಿಭಟನೆ ವೇಳೆ ರೈತರ ನಡುವೆಯೇ ಬಣ ಬಡಿದಾಟ: ಪ್ರತಿಭಟನಾ ಸಭೆ ರಣರಂಗವಾಯ್ತು!

    October 26, 2026

    Comments are closed.

    Our Picks

    ಕ್ರೆಡಿಟ್ ಕಾರ್ಡ್ ಹೊಂದಿರುವ ಪತಿ ಮೃತಪಟ್ಟರೆ ಸಾಲವನ್ನು ಪತ್ನಿ ತೀರಿಸಬೇಕಾ? ಬ್ಯಾಂಕಿಂಗ್ ನಿಯಮಗಳೇನು?

    October 26, 2026

    PM Kisan ಹಣ ಯಾವಾಗ ಬರುತ್ತೆ? ರೈತರು ಈ ಕೆಲಸಗಳನ್ನು ಮಾಡದಿದ್ದರೆ ಕಂತು ಸ್ಥಗಿತವಾಗಬಹುದು!

    October 26, 2026

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ

    October 24, 2026

    ಪ್ರಧಾನಿ ಮೋದಿ ಯಾವ ಮೊಬೈಲ್ ಬಳಸುತ್ತಾರೆ? ರಹಸ್ಯ ಫೋನ್‌ ಹಿಂದಿನ ಸತ್ಯವೇನು?

    October 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕೊರಟಗೆರೆ: ತುಂಡಾದ ವಿದ್ಯುತ್ ತಂತಿಗೆ 6 ಕುರಿ ಬಲಿ: ಜೀವನಾಧಾರ ಕಳೆದುಕೊಂಡ ರೈತ ಮಹಿಳೆಯಿಂದ ಕಣ್ಣೀರು, ಪರಿಹಾರಕ್ಕೆ ಆಗ್ರಹ

    October 27, 2026

    ಕೊರಟಗೆರೆ : ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಪರಿಣಾಮ ಐದು ಕುರಿ ಹಾಗೂ ಒಂದು ಮೇಕೆ ಮೃತಪಟ್ಟಿರುವ…

    ಗೃಹಜ್ಯೋತಿ ಗ್ರಾಹಕರೇ ಗಮನಿಸಿ! ಬೆಸ್ಕಾಂನಿಂದ ಮಹತ್ವದ ಸೂಚನೆ; ಈ ಕೆಲಸ ಮಾಡಲೇಬೇಕು

    October 27, 2026

    ಎಸ್‌ ಐಆರ್‌ ಮುಕ್ತಾಯ; ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಏನೇನು ಬದಲಾವಣೆ?

    October 27, 2026

    ದೀಪಾವಳಿಗೂ ಮುನ್ನ ಮನೆ ಸ್ವಚ್ಛಗೊಳಿಸುತ್ತಿದ್ದೀರಾ? ಹಲ್ಲಿ, ಜಿರಳೆಗಳ ಕಾಟ ತಪ್ಪಿಸಲು ಈ ಕ್ರಮ ಅನುಸರಿಸಿ!

    October 27, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.