ಬೆಂಗಳೂರು ಹೊರವಲಯದಲ್ಲಿ ಚಡ್ಡಿ ಗ್ಯಾಂಗ್ ಮತ್ತೆ ಕಾಣಿಸಿಕೊಂಡಿದೆ. ಈ ಗ್ಯಾಂಗ್ ಕೈಯಲ್ಲಿ ಆಯುಧಗಳನ್ನು ಹಿಡಿದು ಸರ್ಜಾಪುರ ರಸ್ತೆ ಸುತ್ತಮುತ್ತ ಕಳ್ಳತನದ ಕೆಲಸಕ್ಕೆ ಇಳಿದಿದೆ. ಸದ್ಯ ಈ ಚಡ್ಡಿ ಗ್ಯಾಂಗ್ ನ ಐವರು ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸರ್ಜಾಪುರ ರಸ್ತೆಯ ಗುಟ್ಟಹಳ್ಳಿ, ದೊಡ್ಡ ತಿಮ್ಮಸಂದ್ರದ ವಿಲ್ಲಾಗಳಲ್ಲಿ ರಾತ್ರಿ ವೇಳೆ ಕಳ್ಳತನಕ್ಕೆ ಈ ಚಡ್ಡಿ ಗ್ಯಾಂಗ್ ಪ್ರಯತ್ನಿಸಿರುವುದು ಸಿಸಿ ಟಿವಿಯಿಂದ ಬಯಲಾಗಿದೆ.
ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡು ಕಳ್ಳತನಕ್ಕೆ ಇಳಿಯುತ್ತಿರುವ ಈ ಚಡ್ಡಿ ಗ್ಯಾಂಗ್ ಹರಿತವಾದ ಆಯುಧಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಸರ್ಜಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


