ಲಕ್ನೋ: ಅಭಿವೃದ್ಧಿಯ ಹಾದಿಯಲ್ಲಿ ಯಾರೇ, ಯಾವುದೇ ರೀತಿಯ ಅಡ್ಡಿ ಉಂಟುಮಾಡಿದರೂ ಅವರ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಸಿದ್ದಾರೆ.
ಎಎನ್ ಐ ಸುದ್ದಿಸಂಸ್ಥೆಗೆ ನೀಡಿದ ಪಾಡ್ ಕಾಸ್ಟ್ ಸಂದರ್ಶನದಲ್ಲಿ ರಾಜ್ಯದಲ್ಲಿನ ಕ್ರಿಮಿನಲ್ ಗಳು ಮತ್ತು ಮಾಫಿಯಾ ವಿರುದ್ಧ ತಮ್ಮ ಸರ್ಕಾರದ ಬುಲ್ಡೋಜರ್ ಕ್ರಮವನ್ನು ಸಮರ್ಥಿಸಿಕೊಂಡಿರುವ ಅವರು, ರಾಜ್ಯದ ಅಭಿವೃದ್ಧಿಗೆ ಬುಲ್ಡೋಜರ್ ಮತ್ತು ಆಧುನಿಕ ಯಂತ್ರಗಳು ಅಗತ್ಯವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಪ್ರದೇಶದಂತಹ ಬೃಹತ್ ರಾಜ್ಯವು ತ್ವರಿತವಾಗಿ ಅಭಿವೃದ್ಧಿಯಾಗಬೇಕು ಎಂದರೆ, ಈ ಕಾಲಘಟ್ಟದಲ್ಲಿ ನಮಗೆ ಸಲಿಕೆ ಮತ್ತು ಗುದ್ದಲಿಗಳು ಬೇಕಿವೆಯೇ? ಈ ಮುಂಚೆ ಯಾವುದೇ ಕಾಮಗಾರಿಗೆ ಅನುಮೋದನೆ ದೊರೆತರೂ ಮಾಫಿಯಾ ಬಂದು ಅಕ್ರಮ ಆಸ್ತಿಯನ್ನು ಕಬಳಿಸುತ್ತಿತ್ತು. ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಹಿಂದಿನ ಸರ್ಕಾರಕ್ಕೆ ಧೈರ್ಯವೇ ಇರಲಿಲ್ಲ ಎಂದು ಯೋಗಿ ಸಮರ್ಥಿಸಿಕೊಂಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


