2024 ರ ಲೋಕಸಭಾ ಚುನಾವಣಾ ಹೊಸ್ತಿಲಿನಲ್ಲಿ ಮತ್ತೆ ಮುನ್ನೆಲೆಗೆ ಬಂತು ರವಿ.ಡಿ ಚೆನ್ನಣ್ಣನವರ್ ಹೆಸರು. ಅಷ್ಟಕ್ಕೂ ಲೋಕಸಭಾ ಚುನಾವಣೆಗೂ ರವಿ. ಡಿ. ಚೆನ್ನಣ್ಣನವರ್ ಹೆಸರಿಗೂ ಏನು ಸಂಬಂಧ? ಅಂತಾ ಯೋಚಿಸುತ್ತಿದ್ದೀರಾ? ಅದರ ಕಂಪ್ಲಿಟ್ ಡೀಟೈಲ್ಸ್ ಇಲ್ಲಿದೆ ನೋಡಿ.
ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನೇರವಾಗಿ ರಾಜಕಾರಣಕ್ಕೆ ಬಂದು ಸಾಕಷ್ಟು ಹೆಸರು ಮಾಡಿರುವ ಇತ್ತೀಚೆಗೆ ತಮಿಳುನಾಡು ರಾಜ್ಯದಲ್ಲಿ ಸಂಚಲನ ಉಂಟು ಮಾಡುತ್ತಿರುವ ಕೆ. ಅಣ್ಣಾಮಲೈ ಹಾದಿಯಲ್ಲಿಯೇ ರವಿ. ಡಿ. ಚೆನ್ನಣ್ಣನವರ್ ಕೂಡ ಸಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
2024 ರಲ್ಲಿ ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ (ಮೀಸಲು) ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ರವಿ. ಡಿ. ಚೆನ್ನಣ್ಣನವರ್ ಸ್ಪರ್ಧೆ ಮಾಡಲಿದ್ದು, ಇದಕ್ಕೆ ಬೇಕಾದ ತಾಲೀಮು ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಇನ್ನು ಈ ಹಿಂದೆಯೇ ರವಿ. ಡಿ. ಚೆನ್ನಣ್ಣನವರ್ ರಾಜಕೀಯ ಪ್ರವೇಶ ಆಗಬೇಕಾಗಿತ್ತು. 9 ಆದ್ರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಹೀಗಾಗಿ, 2024 ರಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲಿ ರವಿ. ಡಿ. ಚೆನ್ನಣ್ಣನವರ್ ಸ್ಪರ್ಧೆ ನಿಶ್ಚಿತ ಎನ್ನಲಾಗಿದ್ದು, ಅವರ ಹೆಸರು ಇದೀಗ ಮತ್ತೆ ರಾಜಕಾರಣದಲ್ಲಿ ಸದ್ದು ಮಾಡಲಾರಂಭಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


