nammatumakuru

    Subscribe to Updates

    Get the latest creative news from FooBar about art, design and business.

    What's Hot

    ನಾವು ಗೊರಕೆ ಹೊಡೆಯುವ ಶಬ್ದ ನಮಗೇ ಏಕೆ ಕೇಳಿಸುವುದಿಲ್ಲ? ಇದರ ಹಿಂದಿದೆ ಮೆದುಳಿನ ವಿಚಿತ್ರ ಆಟ!

    November 5, 2026

    ಎಫ್‌ ಡಿ ಹೂಡಿಕೆದಾರರ ಗಮನಕ್ಕೆ: ನವೆಂಬರ್‌ ನಲ್ಲಿ ಬಡ್ಡಿದರ ಬದಲಾವಣೆ, ಯಾವ ಬ್ಯಾಂಕ್‌ ನಲ್ಲಿ ಹೆಚ್ಚು ಲಾಭ?

    November 5, 2026

    ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಉಚಿತ ತರಬೇತಿಗೆ ಅರ್ಜಿ ಆಹ್ವಾನ

    November 5, 2026
    Facebook Twitter Instagram
    ಟ್ರೆಂಡಿಂಗ್
    • ನಾವು ಗೊರಕೆ ಹೊಡೆಯುವ ಶಬ್ದ ನಮಗೇ ಏಕೆ ಕೇಳಿಸುವುದಿಲ್ಲ? ಇದರ ಹಿಂದಿದೆ ಮೆದುಳಿನ ವಿಚಿತ್ರ ಆಟ!
    • ಎಫ್‌ ಡಿ ಹೂಡಿಕೆದಾರರ ಗಮನಕ್ಕೆ: ನವೆಂಬರ್‌ ನಲ್ಲಿ ಬಡ್ಡಿದರ ಬದಲಾವಣೆ, ಯಾವ ಬ್ಯಾಂಕ್‌ ನಲ್ಲಿ ಹೆಚ್ಚು ಲಾಭ?
    • ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಉಚಿತ ತರಬೇತಿಗೆ ಅರ್ಜಿ ಆಹ್ವಾನ
    • ದೇವೀರಮ್ಮನ ಜಾತ್ರೆಗೆ ಕ್ಷಣಗಣನೆ:ಬೆಟ್ಟ ಹತ್ತುವ ಮುನ್ನ ಈ ನಿಯಮ ತಿಳಿಯಿರಿ!
    • ಯುವಜನರಲ್ಲೂ ಹೆಚ್ಚುತ್ತಿದೆ ಕ್ಯಾನ್ಸರ್ ಅಪಾಯ; ನಿರ್ಲಕ್ಷಿಸಬಾರದ ಈ ಲಕ್ಷಣಗಳು!
    • ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆ ಇಲ್ಲ – ಜಿಲ್ಲಾಡಳಿತದಿಂದ ಅಧಿಕೃತ ಸ್ಪಷ್ಟನೆ
    • ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾದ ಕೃಷ್ಣಪ್ಪ ಜೆ. ಅವರಿಗೆ ಗೌರವಪೂರ್ವಕ ನಿವೃತ್ತಿ ಬೀಳ್ಕೊಡುಗೆ
    • ವಿಶೇಷ ಚೇತನರಿಗೆ ಸಮಾಜದಲ್ಲಿ ಮೊದಲ ಆದ್ಯತೆ ನೀಡಬೇಕು: ಶಾಸಕ ಸಿ.ಬಿ.ಸುರೇಶ್‌ ಬಾಬು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಿರ್ಧಿಷ್ಟ ಗುರಿಗೆ ಬದ್ಧರಾದರೆ ಯಶಸ್ಸು ಸಾಧ್ಯ: ಶರಣಯ್ಯ ಭಂಡಾರಿಮಠ
    ಜಿಲ್ಲಾ ಸುದ್ದಿ August 23, 2023

    ನಿರ್ಧಿಷ್ಟ ಗುರಿಗೆ ಬದ್ಧರಾದರೆ ಯಶಸ್ಸು ಸಾಧ್ಯ: ಶರಣಯ್ಯ ಭಂಡಾರಿಮಠ

    By adminAugust 23, 2023No Comments2 Mins Read
    bagalakote

    ಬಾಗಲಕೋಟೆ: ಏಕಾಗ್ರತೆ, ಸಮರ್ಥಣಾಭಾವ, ಬದ್ಧತೆ ಮತ್ತು ನಿರ್ಧಿಷ್ಟ ಗುರಿ ಇಟ್ಟುಕೊಂಡು ಅಧ್ಯಯನದಲ್ಲಿ ತೊಡಗುವುದರಿಂದ ಯಶಸ್ಸು ಸಾಧ್ಯ ಎಂದು ಎಸ್.ಬಿ ವಿಸ್ಡಮ್ ಕರಿಯರ್ ಅಕಾಡೆಮಿ ಅಧ್ಯಕ್ಷರಾದ ಶರಣಯ್ಯ ಭಂಡಾರಿಮಠ ಹೇಳಿದರು.

    ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಎಸ್.ಬಿ ವಿಸ್ಡಮ್ ಕರಿಯರ್ ಅಕಾಡೆಮಿ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘ, ಉದ್ಯೋಗ ಮಾರ್ಗದರ್ಶಿ ಕೋಶ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಸಂಘದ ನೂತನ ಸಬಾಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಯ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ನಗರೀಕರಣ, ಜಾಗತೀಕರಣ, ಕೈಗಾರಿಕರಣದ ಅಭಿವೃದ್ಧಿಯಿಂದ ಪ್ರತಿ ಕ್ಷೇತ್ರದಲ್ಲಿಯೂ ಸ್ಪರ್ಧೆ ಏರ್ಪಡುತ್ತಿದ್ದು ಉದ್ಯೋಗ ಕ್ಷೇತ್ರವು ಮೊದಲ ಸ್ಥಾನದಲ್ಲಿದೆ. ಇಲ್ಲಿ ನಮ್ಮ ಕನಸಿನ ಹುದ್ದೆ ಪಡೆದುಕೊಳ್ಳಬೇಕೆಂದರೆ ನಿರ್ಧಿಷ್ಟವಾದ ನಡೆ ಮತ್ತು ವಿಭಿನ್ನ ಆಲೋಚನೆಗಳು ಅವಶ್ಯ ಎಂದರು.

    ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಸೂಕ್ಷ್ಮ ಅದ್ಯಯನ ಅವಶ್ಯಕ. ಯಶಸ್ಸು ಒಂದು ದಿನದ ಕೊಡುಗೆಯಲ್ಲ‌, ನಿರಂತರ ಪ್ರಯತ್ನದ ಫಲವಾಗಿದೆ‌‌. ಕೇವಲ ಒಂದು ವಿಷಯದ ಆಯ್ಕೆಯಿಂದ ಜ್ಞಾನದ ಅಭಿವೃದ್ಧಿ ಸಾಧ್ಯವಿಲ್ಲ ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಎಲ್ಲ ವಿಷಯಗಳು ಒಂದಕ್ಕೊಂದು ಪೂರಕವಾಗಿದ್ದು ಎಲ್ಲವನ್ನು ವ್ಯವಸ್ಥಿತ ವಿಧಾನದಲ್ಲಿ ಅಭ್ಯಸಿಸುವ ಕಲೆ ರೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಸಂವಿಧಾನವು ಕೇವಲ ಜ್ಞಾನಕ್ಕೆ ಸೀಮಿತವಾಗದೆ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಒಂದು ಶಕ್ತಿಯಾಗಿದೆ ಅದನ್ನು ಪ್ರತಿಯೊಬ್ಬ ಪ್ರಜೆಯು ತಿಳಿದುಕೊಳ್ಳಬೇಕು. ಇತಿಹಾಸವನ್ನು ಕಥೆಯ ಮಾದರಿಯಲ್ಲಿ ನೆನಪಿಟ್ಟು ಪರೀಕ್ಷೆಯಲ್ಲಿ ಪ್ರಮುಖ ಅಂಶಗಳನ್ನು ಸಾರಾಂಶ ರೂಪದಲ್ಲಿ ಬರೆಯುವ ಕಲೆ ಬೆಳಸಿಕೊಳ್ಳಬೇಕು. ಪ್ರಚಲಿತ ಘಟನೆಗಳನ್ನು ಓದುವುದು ಮತ್ತು ವರದಿ ಮಾಡಿಕೊಳ್ಳುವುದು, ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸುವುದು ಮತ್ತು ಮಾದರಿ ಪರೀಕ್ಷೆಗಳಲ್ಲಿ ಭಾಗವಹಿಸುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.

    ಬಿವಿವಿ ಸಂಘದ ಸದಸ್ಯ ಎಸ್.ಆರ್ ಮನಹಳ್ಳಿ ಮಾತನಾಡಿ ಶಿಕ್ಷಣ ಎನ್ನುವುದು ಭವಿಷ್ಯವನ್ನು ರೂಪಿಸುವ ಸೂತ್ರವಾಗಿದ್ದು ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ಮಾಡುವುದರ ಮೂಲಕ ಗುರಿಮುಟ್ಟುವ ಛಲವನ್ನು ಇಟ್ಟುಕೊಳ್ಳಬೇಕು. ಸರಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲು ಆಲೋಚನೆ, ಯೋಜನೆ ಮತ್ತು ಅನುಷ್ಠಾನ ಮಾಡುವ ಕೌಶಲ್ಯಗಳನ್ನು ಬೆಳಸಿಕೊಳ್ಳಿ ಎಂದರು
    ಪ್ರಾಚಾರ್ಯರಾದ ಎಸ್.ಆರ್ ಮುಗನೂರಮಠ ಅವರು ಮಾತನಾಡಿ ಶೈಕ್ಷಣಿಕ ಕೊಠಡಿಯಲ್ಲಿ ಪಟ್ಟ ಪರಿಶ್ರಮದಿಂದ ಉದ್ಯೋಗ ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲಲು ಸಾಧ್ಯ. ನಿರಂತರ ಅಧ್ಯಯನ‌ ಮಾಡಿದರೆ ಯಶಸ್ಸು ತಮ್ಮನ್ನು ಹುಡುಕಿಕೊಂಡು ಬರುತ್ತದೆ ವಿದ್ಯಾರ್ಥಿ ಜೀವನದಲ್ಲಿ ಕಠಿಣ ಅದ್ಯಯನದಲ್ಲಿ ತೊಡಗಿಕೊಳ್ಳಿ ಎಂದರು.

    ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗುಣರಾಣಿ ಡಿಎಮ್, ಎಸ್.ಬಿ ವಿಸ್ಡಮ್ ಕರಿಯರ್ ಅಕಾಡೆಮಿಯ ಕನ್ನಡ ಪ್ರಾಧ್ಯಾಪಕ ಬಾಗೇಶ ಮುರಳಿ, ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು ರಾಠೋಡ, ಪ್ರಾಧ್ಯಾಪಕರುಗಳಾದ ಎಸ್.ಡಿ ಕೆಂಗಲಗುತ್ತಿ, ಎಸ್.ವಿ ಕಟ್ಟಿ, ಎಮ್.ಎಸ್ ಬನ್ನಿ ಸೇರಿದಂತೆ ವಿವಿಧ ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    admin
    • Website

    Related Posts

    ದೇವೀರಮ್ಮನ ಜಾತ್ರೆಗೆ ಕ್ಷಣಗಣನೆ:ಬೆಟ್ಟ ಹತ್ತುವ ಮುನ್ನ ಈ ನಿಯಮ ತಿಳಿಯಿರಿ!

    November 5, 2026

    ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾದ ಕೃಷ್ಣಪ್ಪ ಜೆ. ಅವರಿಗೆ ಗೌರವಪೂರ್ವಕ ನಿವೃತ್ತಿ ಬೀಳ್ಕೊಡುಗೆ

    November 5, 2026

    ಔರಾದ್ ಬ್ಲಾಕ್ ಕಾಂಗ್ರೆಸ್ ಪ.ಜಾ. ವಿಭಾಗದ ಕಾರ್ಯದರ್ಶಿಯಾಗಿ ಗೌತಮ್ ಮೇತ್ರೆ ನೇಮಕ

    November 4, 2026

    Comments are closed.

    Our Picks

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಸ್ಪೆಷಲ್ ನ್ಯೂಸ್

    ನಾವು ಗೊರಕೆ ಹೊಡೆಯುವ ಶಬ್ದ ನಮಗೇ ಏಕೆ ಕೇಳಿಸುವುದಿಲ್ಲ? ಇದರ ಹಿಂದಿದೆ ಮೆದುಳಿನ ವಿಚಿತ್ರ ಆಟ!

    November 5, 2026

    ನಿದ್ದೆ ಮಾಡುವಾಗ ಸಣ್ಣ ಶಬ್ದ ಕೇಳಿಸಿದರೂ ಕೆಲವರು ತಕ್ಷಣ ಎಚ್ಚರಗೊಳ್ಳುತ್ತಾರೆ. ಯಾರಾದರೂ ಹೆಸರಿಟ್ಟು ಕರೆದರೆ ನಿದ್ದೆಯಿಂದ ಎದ್ದುಬಿಡುತ್ತಾರೆ. ಆದರೆ ಇಡೀ…

    ಎಫ್‌ ಡಿ ಹೂಡಿಕೆದಾರರ ಗಮನಕ್ಕೆ: ನವೆಂಬರ್‌ ನಲ್ಲಿ ಬಡ್ಡಿದರ ಬದಲಾವಣೆ, ಯಾವ ಬ್ಯಾಂಕ್‌ ನಲ್ಲಿ ಹೆಚ್ಚು ಲಾಭ?

    November 5, 2026

    ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಉಚಿತ ತರಬೇತಿಗೆ ಅರ್ಜಿ ಆಹ್ವಾನ

    November 5, 2026

    ದೇವೀರಮ್ಮನ ಜಾತ್ರೆಗೆ ಕ್ಷಣಗಣನೆ:ಬೆಟ್ಟ ಹತ್ತುವ ಮುನ್ನ ಈ ನಿಯಮ ತಿಳಿಯಿರಿ!

    November 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.