ವರದಿ: ಟೈಗರ್’ನಾಗ್
ರಾತ್ರಿವರೆಗೂ ಬಾಗಿಲು ತೆರೆದು ಅಕ್ರಮ ಸಕ್ರಮ ಮಾಡಲು ಗ್ರಾಮ ಪಂಚಾಯತ್ ಮುಂದಾಗಿರುವ ಘಟನೆ ಜಟ್ಟಿ ಅಗ್ರಹಾರ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಪಂಚಾಯಿತಿಯ ಹಳೆಯ ಸಾಮಗ್ರಿಗಳು ಬೆಳಿಗ್ಗೆ ಹರಾಜು ಪ್ರಕ್ರಿಯೆ ಇತ್ತು, ಇದರ ಕಾರಣ ಏನೋ ಗೋಲ್ ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇದಲ್ಲದೆ ಈ ಹಿಂದೆ ಲೋಕಾಯುಕ್ತ ದಾಳಿ ಕೂಡ ನಡೆದಿತ್ತು, ದಾಖಲೆ ನಾಶ ಮಾಡಲು ತೆರೆದಿರಬಹುದಾ ಅಥವಾ ನಕಲಿ ಜಾಬ್ ಕಾರ್ಡ್ ಗೆ ಬಿಲ್ ಮಾಡಲು ಪ್ಲಾನ್ ನಡೆದಿರಬಹುದಾ ಎಂಬ ಇನ್ನೂ ಹಲವು ಅನುಮಾನಗಳಿಗೆ ಕಾರಣವಾಗಿದೆ
ಕಂಪ್ಯೂಟರ್ ಆಪರೇಟರ್ ಕಮ್ ಬಿಲ್ ಕಲೆಕ್ಟರ್ ಚಿಕ್ಕರಂಗಯ್ಯ ಒಬ್ಬರೇ ಗುರುವಾರ ರಾತ್ರಿ 8 ಗಂಟೆಯವರೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಧ್ಯಕ್ಷರ ಗಮನಕ್ಕೂ ತರದೆ ಅಕ್ರಮವಾಗಿ ಪಂಚಾಯಿತಿ ತೆರೆದಿರುವುದು ಎಲ್ಲಾ ಅನುಮಾನಗಳಿಗೆ ಕಾರಣವಾಗಿದೆ. ಜಿಲ್ಲಾ ಪಂಚಾಯತ್ ಸಿಇಒ ತನಿಖೆ ನಡೆಸುವಂತೆ ಸಾರ್ವಜನಿಕರ ಆಗ್ರಹವಾಗಿದೆ
ನನ್ನ ಗಮನಕ್ಕೆ ಇಲ್ಲ ಎಂದ ಗ್ರಾಪಂ ಪಿಡಿಓ:
ರಾತ್ರಿ ಎಂಟು ಗಂಟೆಯವರೆಗೆ ಜೆಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ಓಪನ್ ಇರುವುದು ನನ್ನ ಗಮನಕ್ಕೆ ಇಲ್ಲ, ನನ್ನ ಅನುಮತಿಯು ಅವರು ಪಡೆದಿಲ್ಲ. ನಾನು ಈ ಸಮಯದಲ್ಲಿ ಬಿಲ್ ಕಲೆಕ್ಟರ್ ಗೆ ಯಾವುದೇ ಕೆಲಸ ಮಾಡಲು ಸೂಚಿಸಿಲ್ಲ, ಬೆಳಿಗ್ಗೆ ಪಂಚಾಯಿತಿಗೆ ಬಂದು ತಾಲ್ಲೂಕು ಕಾರ್ಯನಿರ್ವಹಣಾ ಅಧಿಕಾರಿ ಸಲಹೆ ಪಡೆದು ಆತನ ಮೇಲೆ ಕ್ರಮ ಕೈಗೊಳ್ಳುತ್ತೇನೆ.
-ರಂಗನರಸಯ್ಯ, ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜೆಟ್ಟಿ ಅಗ್ರಹಾರ