ಗುರುಗದಹಳ್ಳಿ. ತಿಪಟೂರು ತಾಲೂಕಿನ ಹೊನವಳ್ಳಿ ಹೋಬಳಿಯ ಗುರುಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಯಾಣಿಕರ ತಂಗುದಾಣದ ಅವ್ಯವಸ್ಥೆಯಿಂದ ಕೂಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಿಡಿಗೇಡಿಗಳ ಉಪಟಳದಿಂದ ತಂಗುದಾಣ ಅಸ್ತವ್ಯವಸ್ಥವಾಗಿದೆ.
ಹೌದು ಗುರುಗದಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಬರುವ ಪ್ರಯಾಣಿಕರ ನಿಲ್ದಾಣ ತುಂಬಾ ಹದಗೆಟ್ಟು ಶೌಚಾಲಯದಂತೆ ಬಳಕೆಯಾಗುತ್ತಿದೆ. ಮತ್ತು ಮೇಲ್ಚಾವಣಿ ಮುರಿದು ಬೀಳುವ ಸ್ಥಿತಿಯಲ್ಲಿದ್ದು ಪ್ರಯಾಣಿಕರು ಭಯಭೀತರಾಗಿದ್ದಾರೆ.
ಇಲ್ಲಿ ರಾತ್ರಿ ಸಮಯ ಪುಂಡ ಪೋಕರಿಗಳ ಹಾವಳಿಯಿಂದ ಪ್ರಯಾಣಿಕರ ನಿಲ್ದಾಣ ಬಾರ್ ನಂತೆ ಕಾಣುತ್ತಿದೆ. ಎಣ್ಣೆಯ ಬಾಟಲ್ ಗಳನ್ನು ನಿಲ್ದಾಣದ ಒಳಗಡೆ ಒಡೆದು ಹಾಕಿ ಪುಂಡಾಟ ತೋರುತ್ತಿದ್ದಾರೆ ಮತ್ತು ನಿಲ್ದಾಣದ ಅಕ್ಕಪಕ್ಕ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಹೊಲಸು ವಾಸನೆ ಹರಡಿ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ
ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಇಲ್ಲಿ ಕುಳಿತುಕೊಳ್ಳುವ ಯಾವ ಯಾವ ವ್ಯವಸ್ಥೆ ಇಲ್ಲ.ಇನ್ನು ಮಳೆಗಾಲ ಆರಂಭವಾದಾಗ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ನಗರಕ್ಕೆ ಹೋಗಲು ಬಸ್ ಕಾಯುವಾಗ ನಿಲ್ದಾಣದ ಒಳಗಡೆ ನಿಲ್ಲಬೇಕು ಆದರೆ ಇಲ್ಲಿನ ಅವ್ಯವಸ್ಥೆ ಮತ್ತು ವಾಸನೆ ವಾಸನೆಯಿಂದ ಒಳಗಡೆ ನಿಲ್ಲಲು ಮುಜುಗರಪಡುವಂತಾಗಿದೆ ಹೊರಗಡೆ ಮಳೆಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಇಲಾಖೆ ಕ್ರಮಕೈಗೊಳ್ಳಬೇಕು. ಕೂಡಲೇ ಬಸ್ ತಂಗುದಾಣವನ್ನು ಸ್ವಚ್ಛತೆಗೊಳಿಸಿ ಮೇಲ್ಚಾವಣಿ ಸರಿಪಡಿಸಬೇಕೆಂದು ಇಲ್ಲಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದು, ಇಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವರದಿ: ಮಂಜು ಗುರುಗದಹಳ್ಳಿ