nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಲ್ಪತರು ನಾಡಿನಲ್ಲಿ ನಾಡಹಬ್ಬದ ಕಳೆ: ತುಮಕೂರು ದಸರಾ–2026ಕ್ಕೆ ಸಕಲ ಸಜ್ಜು, ಮುಖ್ಯಮಂತ್ರಿಗೆ ಆಹ್ವಾನ

    October 10, 2026

    ಪ್ರಜ್ವಲ್ ರೇವಣ್ಣಗೆ ಜೈಲು ಶಿಫ್ಟ್‌; ಪರಪ್ಪನ ಅಗ್ರಹಾರದಿಂದ ಹಿಂಡಲಗಾಗೆ ಸ್ಥಳಾಂತರಕ್ಕೆ ಆದೇಶ! ಕಾರಣವೇನು?

    October 10, 2026

    ಮಹಾಲಯ ಅಮಾವಾಸ್ಯೆ: ಈ ತಪ್ಪುಗಳನ್ನು ಮಾಡಬೇಡಿ! ಪಿತೃಗಳಿಗೆ ತರ್ಪಣ ನೀಡುವಾಗ ಏನು ಪಾಲಿಸಬೇಕು?

    October 10, 2026
    Facebook Twitter Instagram
    ಟ್ರೆಂಡಿಂಗ್
    • ಕಲ್ಪತರು ನಾಡಿನಲ್ಲಿ ನಾಡಹಬ್ಬದ ಕಳೆ: ತುಮಕೂರು ದಸರಾ–2026ಕ್ಕೆ ಸಕಲ ಸಜ್ಜು, ಮುಖ್ಯಮಂತ್ರಿಗೆ ಆಹ್ವಾನ
    • ಪ್ರಜ್ವಲ್ ರೇವಣ್ಣಗೆ ಜೈಲು ಶಿಫ್ಟ್‌; ಪರಪ್ಪನ ಅಗ್ರಹಾರದಿಂದ ಹಿಂಡಲಗಾಗೆ ಸ್ಥಳಾಂತರಕ್ಕೆ ಆದೇಶ! ಕಾರಣವೇನು?
    • ಮಹಾಲಯ ಅಮಾವಾಸ್ಯೆ: ಈ ತಪ್ಪುಗಳನ್ನು ಮಾಡಬೇಡಿ! ಪಿತೃಗಳಿಗೆ ತರ್ಪಣ ನೀಡುವಾಗ ಏನು ಪಾಲಿಸಬೇಕು?
    • ದೆವ್ವಗಳೇಕೆ ರಾತ್ರಿ ಹೊತ್ತಲ್ಲೇ ಕಾಣಿಸುತ್ತವೆ? ಬೆಚ್ಚಿಬೀಳಿಸುವ ಅಚ್ಚರಿಯ ಸಂಗತಿ ಇಲ್ಲಿದೆ ನೋಡಿ…
    • ಆಯುರ್ವೇದ, ಹೋಮಿಯೋಪತಿ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ: ಕೆಇಎ ಅಧಿಸೂಚನೆ
    • ‘ಕಲ್ಪತರು’ ಬ್ರ್ಯಾಂಡ್ ಮತ್ತು ಲೋಗೋ ಬಿಡುಗಡೆ: ತುಮಕೂರಿನ ಮಹಿಳೆಯರಿಂದ, ನಮ್ಮ ನಾಡು ನಮ್ಮ ಹೆಮ್ಮೆ
    • ದಸರಾ-2026ರ ಪಂಜಿನ ಕವಾಯತು ಕಾರ್ಯಕ್ರಮದ ಉಚಿತ ನೋಂದಣಿ ವೆಬ್‌ ಸೈಟ್‌ ಗೆ ಚಾಲನೆ
    • ಕೆಇಎ ಯುಜಿ ನೀಟ್ — 2026: ವೈದ್ಯಕೀಯ ಸೀಟುಗಳ ಆನ್‌ ಲೈನ್ ಸ್ಟ್ರೇ ವೇಕೆನ್ಸಿ ಸುತ್ತು ಪ್ರಕಟ; ಅಕ್ಟೋಬರ್ 13 ರಿಂದ ಹೊಸ ನೋಂದಣಿ ಆರಂಭ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವೈ.ಎನ್.ಹೊಸಕೋಟೆಯಲ್ಲಿ ವಾಲ್ಮೀಕಿ ವಿಗ್ರಹ ಅನಾವರಣ: ಸಮುದಾಯ ಏಕತೆ, ಶಿಕ್ಷಣ ಮತ್ತು ಅಭಿವೃದ್ಧಿಗೆ ಕರೆ
    ಪಾವಗಡ September 28, 2025

    ವೈ.ಎನ್.ಹೊಸಕೋಟೆಯಲ್ಲಿ ವಾಲ್ಮೀಕಿ ವಿಗ್ರಹ ಅನಾವರಣ: ಸಮುದಾಯ ಏಕತೆ, ಶಿಕ್ಷಣ ಮತ್ತು ಅಭಿವೃದ್ಧಿಗೆ ಕರೆ

    By adminSeptember 28, 2025No Comments2 Mins Read
    vamilki

    ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಪಟ್ಟಣದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ವಿಗ್ರಹ ಅನಾವರಣ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಜನಪ್ರತಿನಿಧಿಗಳು ಹಾಗೂ ವಾಲ್ಮೀಕಿ ಸಮುದಾಯದ ಗಣ್ಯರು ಭಾಗವಹಿಸಿದರು.

    ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ವಹಿಸಿದ್ದರು.  ಮಾಜಿ ಸಚಿವ ಬಳ್ಳಾರಿ ಶ್ರೀರಾಮುಲು ಅವರು ಮಾತನಾಡಿ, “ವಾಲ್ಮೀಕಿ ಸಮುದಾಯದವರು ಪಕ್ಷಾತೀತವಾಗಿ ಸಮಾಜದ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಅಭಿವೃದ್ಧಿಗೆ ಒತ್ತುಕೊಡಬೇಕು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರೋತ್ಸಾಹಿಸಬೇಕು” ಎಂದು ಕರೆ ನೀಡಿದರು.

    ಮಾಜಿ ಸಚಿವ ಹಾಗೂ ಹಾಲಿ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರು, “ವಾಲ್ಮೀಕಿ ಸಮಾಜದಲ್ಲಿ ನಾಯಕತ್ವ ಹುಟ್ಟಿನಿಂದಲೇ ಇದೆ. ಆದರೆ ಜನರನ್ನು ಆಳುವಂತಹ ನಾಯಕರಾಗಲು ಶಿಕ್ಷಣವೇ ಪ್ರಮುಖ ಆಯುಧ. ಪ್ರತಿಯೊಬ್ಬರೂ ವಿದ್ಯಾಭ್ಯಾಸದಲ್ಲಿ ಶ್ರಮಿಸಬೇಕು” ಎಂದು ಸಲಹೆ ನೀಡಿದರು.

    ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು, “ವಾಲ್ಮೀಕಿ ಸಮಾಜವು ಎಲ್ಲಾ ಸಮುದಾಯಗಳಂತೆ ಉತ್ತಮ ಸ್ಥಾನಕ್ಕೆ ಬೆಳೆಯಬೇಕು. ಯಾವುದೇ ದ್ವೇಷದ ಕೆಲಸಕ್ಕೆ ಮುಂದಾಗದೆ ಸಾಮರಸ್ಯದಿಂದ ನಡೆದುಕೊಳ್ಳಬೇಕು. ವಾಲ್ಮೀಕಿ ಮಹರ್ಷಿಗಳಿಗೆ ವಿಧಾನಸೌಧದ ಮುಂದೆ ವಿಗ್ರಹ ಪ್ರತಿಷ್ಠಾಪನೆ ಮಾಡಿದ ಸಿದ್ದರಾಮಯ್ಯ ಹಾಗೂ ವಾಲ್ಮೀಕಿ ದಿನಾಚರಣೆಗೆ ರಜೆ ಘೋಷಿಸಿದ ಯಡಿಯೂರಪ್ಪರನ್ನು ಸ್ಮರಿಸಬೇಕು” ಎಂದು ಅಭಿಪ್ರಾಯ ಪಟ್ಟರು.

    ಮಾಜಿ ಸಚಿವ ವೆಂಕಟರಮಣಪ್ಪ ಅವರು, “ನಾಯಕ ಸಮಾಜವು ಪ್ರೀತಿಯಿಂದ ಎಲ್ಲ ಸಮಾಜಗಳೊಂದಿಗೆ ಬೆರೆತು ಬೆಳೆಯಬೇಕು. ರಾಜಣ್ಣ ಅವರ ಪದವಿ ಕಳೆದುಹೋಗಲು ಕೆಲವು ಶಕ್ತಿಗಳು ಷಡ್ಯಂತ್ರ ನಡೆಸಿದ್ದು ನೋವು ತಂದಿದೆ. ಆದರೂ ಸ್ನೇಹ-ಸೌಹಾರ್ದತೆಯಿಂದ ಮುಂದೆ ಸಾಗುತ್ತೇವೆ” ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ದೊರೆ ರಾಜ ಜಯಚಂದ್ರ ಶಾಸಕ ಎಚ್ ವಿ ವೆಂಕಟೇಶ್, ಇಇ ಅನಿಲ್ ಕುಮಾರ್, ಇಇ ಹನುಮಂತರಾಯಪ್ಪ,  ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಜಂಗಮಪ್ಪ, ಎಚ್.ತಿಮ್ಮಯ್ಯ, ಮಧುಸೂದನ್, ಉಪನ್ಯಾಸಕ ನಾಗರಾಜು, ಪುತ್ಥಳಿ ನಿರ್ಮಾತೃ ನವೀನ್ ಕುಮಾರ್, ಪುರಸಭೆ ಸದಸ್ಯರಾದ ಪಿ.ಎಚ್.ರಾಜೇಶ್ ರವಿ ಮುಖಂಡಗಳಾದ ಬ್ಯಾಡನೂರು ಶಿವು, ಕೆ.ರಾಂಪುರದ ಆನಂದ್, ರಂಗಮ್ಮ, ಶಿವಕುಮಾರ್, ಅಂಬಿಕಾ ರಮೇಶ್, ಎರ್ರಪ್ಪ ಸೇರಿದಂತೆ  ಸಮುದಾಯದ ಮುಖಂಡರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

    ವರದಿ: ನಂದೀಶ್ ನಾಯ್ಕ,  ಪಾವಗಡ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಎತ್ತಿನಹೊಳೆ ನಾಲಾ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಎನ್‌.ಡಿ.ಎ ಮೈತ್ರಿಕೂಟದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಆಗ್ರಹ

    October 6, 2026

    ಕೋಟಗುಡ್ಡ ಸಹನಾ ಶಾಲೆಗೆ “ಪರಿಸರ ಶಾಲಾ ಪ್ರಶಸ್ತಿ”

    September 29, 2026

    ದಸರಾ ಕ್ರೀಡಾಕೂಟ: ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್‌ ನಲ್ಲಿ ಪಾವಗಡದ ಚನ್ನಕೇಶವಪುರ ತಂಡಕ್ಕೆ ದ್ವಿತೀಯ ಸ್ಥಾನ

    September 26, 2026

    Leave A Reply Cancel Reply

    Our Picks

    ಮಧ್ಯರಾತ್ರಿ ನಾನಾ ಪಾಟೇಕರ್ ಅಂತ್ಯಸಂಸ್ಕಾರ; ತಡವಾಗಿದ್ದೇಕೆ? ಮಗ ಮಲ್ಹಾರ್ ನೀಡಿದ ಸ್ಪಷ್ಟನೆ ಇಲ್ಲಿದೆ

    October 10, 2026

    ನಾನಾ ಪಾಟೇಕರ್ ಆಸ್ತಿ–ಪಾಸ್ತಿ ಎಷ್ಟು ಗೊತ್ತಾ? ಅವರ ಕುಟುಂಬದ ಬಗ್ಗೆ ಇಲ್ಲಿದೆ ರಹಸ್ಯಕರ ಮಾಹಿತಿ!

    October 9, 2026

    ಹಿರಿಯ ನಟ ನಾನಾ ಪಾಟೇಕರ್ ನಿಧನ: ಪ್ರಧಾನಿ ಮೋದಿ, ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರಿಂದ ಸಂತಾಪ

    October 8, 2026

    50 ಪೈಸೆ ನಾಣ್ಯ ಇನ್ನೂ ಮಾನ್ಯವೇ? RBI ನಿಯಮ ತಿಳಿದರೆ ಅಚ್ಚರಿಯಾಗುತ್ತೆ!

    October 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಕಲ್ಪತರು ನಾಡಿನಲ್ಲಿ ನಾಡಹಬ್ಬದ ಕಳೆ: ತುಮಕೂರು ದಸರಾ–2026ಕ್ಕೆ ಸಕಲ ಸಜ್ಜು, ಮುಖ್ಯಮಂತ್ರಿಗೆ ಆಹ್ವಾನ

    October 10, 2026

    ಬೆಂಗಳೂರು/ತುಮಕೂರು: ಮೈಸೂರು ದಸರೆಯ ಸಾಂಸ್ಕೃತಿಕ ಪರಂಪರೆಯನ್ನು ಕಲ್ಪತರು ನಾಡಿನಲ್ಲೂ ಮರುಸೃಷ್ಟಿಸುವ ಸಂಕಲ್ಪದೊಂದಿಗೆ ರೂಪುಗೊಂಡಿರುವ ‘ತುಮಕೂರು ದಸರಾ–2026’ಕ್ಕೆ ಸಿದ್ಧತೆಗಳು ಬಿರುಸಿನಿಂದ ಸಾಗಿವೆ.…

    ಪ್ರಜ್ವಲ್ ರೇವಣ್ಣಗೆ ಜೈಲು ಶಿಫ್ಟ್‌; ಪರಪ್ಪನ ಅಗ್ರಹಾರದಿಂದ ಹಿಂಡಲಗಾಗೆ ಸ್ಥಳಾಂತರಕ್ಕೆ ಆದೇಶ! ಕಾರಣವೇನು?

    October 10, 2026

    ಮಹಾಲಯ ಅಮಾವಾಸ್ಯೆ: ಈ ತಪ್ಪುಗಳನ್ನು ಮಾಡಬೇಡಿ! ಪಿತೃಗಳಿಗೆ ತರ್ಪಣ ನೀಡುವಾಗ ಏನು ಪಾಲಿಸಬೇಕು?

    October 10, 2026

    ದೆವ್ವಗಳೇಕೆ ರಾತ್ರಿ ಹೊತ್ತಲ್ಲೇ ಕಾಣಿಸುತ್ತವೆ? ಬೆಚ್ಚಿಬೀಳಿಸುವ ಅಚ್ಚರಿಯ ಸಂಗತಿ ಇಲ್ಲಿದೆ ನೋಡಿ…

    October 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.