ನೀವು ಬಂಗಾರವನ್ನು ಖರೀದಿಸಲು ಹೊರಟಿದ್ದರೆ, ಇಲ್ಲಿದೆ ನಿಮಗೆ ತುಂಬಾ ಉಪಯುಕ್ತ ಮಾಹಿತಿ, ಹೌದು, ನೀವು ಖರೀದಿಸುವ ಆಭರಣವು ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ಗುರುತಿಸಬಹುದು. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಆ್ಯಪ್ ಒಂದನ್ನು ಬಿಡುಗಡೆ ಮಾಡಿದೆ. ಈ ಆ್ಯಪ್ ನ ಹೆಸರು BIS ಕೇರ್ ಆ್ಯಪ್ ಆಗಿದೆ.
ಹಾಲ್ ಮಾರ್ಕ್ ಮತ್ತು ISI ಪ್ರಮಾಣೀಕೃತ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಟ್ರ್ಯಾಕ್ ಮಾಡಲು ಈ ಆ್ಯಪ್ ನಿಮಗೆ ಸಹಾಯ ಮಾಡುತ್ತದೆ. ಆಂಡ್ರಾಯ್ಡ್ ಫೋನ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು ಐಫೋನ್ ನಲ್ಲಿ ಆ್ಯಪ್ ಸ್ಟೋರ್‌ನಿಂದ BIS ಕೇರ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು.


