ಗುಜರಾತ್ ನ ಭರೂಚ್ ಜಿಲ್ಲೆಯ ಅಂಕಲೇಶ್ವರದ ಅತುಲ್ ಗಿರಿ ಎಂಬ ವ್ಯಕ್ತಿ ಐದು ವರ್ಷಗಳ ಹಿಂದೆ ಚಾಕು ಇರಿತಕ್ಕೊಳಗಾಗಿದ್ದು, ಸ್ಥಳೀಯ ಭರೂಚ್ ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದರು.
ಆ ವೇಳೆ ಅಲ್ಲಿನ ವೈದ್ಯರು ಅತುಲ್ ಗಿರಿ ಸರಿಯಾಗಿ ಪರೀಕ್ಷಿಸದೆ ಮಾತ್ರೆಗಳನ್ನು ನೀಡಿ ಕಳುಹಿಸಿದ್ದರು. ಕ್ರಮೇಣ ಹೊಟ್ಟೆ ನೋವು ಕಾಣಿಸಿಕೊಂಡಿತು. 5 ವರ್ಷಗಳ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಹೊಟ್ಟೆನೋವು ಎಂದು ವೈದ್ಯರಿಗೆ ತಿಳಿಸಿ ಎಕ್ಸ್ ರೇ ತೆಗೆಸಿದಾಗ ಹೊಟ್ಟೆಯಲ್ಲಿ ಚಾಕು ಪತ್ತೆಯಾಗಿದೆ.


