ದಂಪತಿ ತಮ್ಮ ಆರು ಮಕ್ಕಳೊಂದಿಗೆ ತೆರಳುತ್ತಿದ್ದ ಬೈಕ್ ಗೆ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮತ್ತು ಆತನ ಪತ್ನಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ದಂಪತಿಗಳು ಒಂದೇ ಬೈಕ್ ನಲ್ಲಿ ಆರು ಮಕ್ಕಳ ಜೊತೆ ಸೇರಿ ಪ್ರಯಾಣಿಸುತ್ತಿದ್ದರು. ಆರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಸೋಮವಾರ ತಡರಾತ್ರಿ ಬಹ್ರೈಚ್ ನೆರೆಹೊರೆಯಲ್ಲಿ ಈ ಘಟನೆ ನಡೆದಿದೆ.
ಬಹ್ರೈಚ್ ನ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಪವಿತ್ರಾ ಮೋಹನ್ ತ್ರಿಪಾಠಿ ಮಾತನಾಡಿ, ರಾಮಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಜಿಜೋಟ್ ನಿವಾಸಿ ದುರ್ಗೇಶ್ ತನ್ನ ಪತ್ನಿ ಮತ್ತು ಆರು ಮಕ್ಕಳೊಂದಿಗೆ ತನ್ನ ಅತ್ತೆಯ ಮನೆಗೆ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಪಿಕಪ್ ವಾಹನ ಅವರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ.


