ಬೆಂಗಳೂರು: ಈ ಆಕ್ಟೋಬರ್ ತಿಂಗಳಿನಲ್ಲಿ ಸಿಸಿಬಿ ಮಹಿಳಾ ಸಂರಕ್ಷಣಾ ದಳ ಬೆಂಗಳೂರು ನಗರದಲ್ಲಿ ಮಾನವ ಕಳ್ಳಸಾಗಣೆ ಸಂಬಂಧ ವಿಶೇಷ ಕಾರ್ಯಚಾರಣೆ ಕೈಗೊಂಡು 14 ಜನ ಆರೋಪಿಗಳ (ಪಿಂಪ್ಗಳ)ನ್ನು ಬಂಧಿಸಿ, 20 ಜನ ನೊಂದ ಮಹಿಳೆಯರನ್ನು ಸಂರಕ್ಷಣೆ ಮಾಡಿದೆ.
ಅಕ್ಟೋಬರ್ 1ರಿಂದ 30ರವರೆಗೆ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿ ವಿಶೇಷ ಕಾರ್ಯಚಾರಣೆ ಕೈಗೊಂಡು, ಬೆಂಗಳೂರಿನ ವಿವಿಧ ಕಡೆ ದಾಳಿ ನಡೆಸಿ ಬಾಂಗ್ಲದೇಶದಿಂದ ಹಾಗೂ ಹೊರರಾಜ್ಯದಿಂದ ಮಹಿಳೆಯರನ್ನು ಮಾನವ ಕಳ್ಳಸಾಗಣೆ ಮಾಡಿಕೊಂಡು ಬಂದು ವೇಶ್ಯವಾಟಿಕೆ ವೇಶ್ಯವಾಟಿಕೆ ನಡೆಸುತ್ತಿದ್ದ 14 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ವೇಶ್ಯವಾಟಿಕೆಗೆ ತೊಡಗಿಸಿಕೊಂಡಿದ್ದ ಒಟ್ಟು 20 ಜನ ಗೊಂದ ಮಹಿಳೆಯರನ್ನು ಸಂರಕ್ಷಣೆ ಮಾಡಿದ್ದಾರೆ. ಸಂರಕ್ಷಣೆಯಾದ ಮಹಿಳೆಯರಲ್ಲಿ ಬಾಂಗ್ಲಾದೇಶದ 4 ಜನ ಮಹಿಳೆಯರು, ಪಶ್ಚಿಮ ಬಂಗಾಳದ 11 ಜನ ಮಹಿಳೆಯರು, ತೆಲಂಗಾಣದ ಒಬ್ಬ ಮಹಿಳೆ, ಉತ್ತರಾಖಂಡ್ನ ಒಬ್ಬ ಮಹಿಳೆ ಹಾಗೀ ಕರ್ನಾಟಕದ 3 ಮಹಿಳೆಯರನ್ನು ಸಿಸಿಬಿ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಆರೋಪಿಗಳಿಂದ 04 ದ್ವಿಚಕ್ರ ವಾಹನಗಳು, ಒಂದು ಮಾರುತಿ ಸ್ವಿಫ್ಟ್ ಕಾರ್, 40 ಮೊಬೈಲ್ ಫೋನ್ಗಳು, 02 ಲ್ಯಾಪ್ ಟಾಪ್ 3 ವಿವಿಧ ಕಂಪನಿಯ ಸಿಮ್ ಕಾರ್ಡ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿರುತ್ತದೆ ಎಂದು ಸಿಸಿಬಿ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


