ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾರದರ್ಶಕ ಗಾಜಿಗೆ ಗುದ್ದಿಕೊಂಡು ಗಾಯಗೊಂಡಿದ್ದ ಮಹಿಳೆಯ ಮೂಗಿನ ಮೂಳೆ ಮುರಿತಗೊಂಡಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ.
ನೇಪಾಳ ರಾಜಧಾನಿ ಕಲ್ಮಂಡುವಿನಿಂದ 33 ವರ್ಷದ ನಿಶಾ ಮಿತ್ತಲ್ ಅಗರ್ವಾಲ್ ಅವರು ಕುಟುಂಬದೊಂದಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಟರ್ಮಿನಲ್ 2 ನಲ್ಲಿ ಗಾಜಿನ ಬಾಗಿಲನ್ನು ಗಮನಿಸದ ನಿಶಾ ಅವರು ಗುದ್ದಿಕೊಂಡಿದ್ದರು.


