ಬೆಂಗಳೂರು ನಗರದ ಗಂಗಮ್ಮನ ಗುಡಿ ಬಳಿ ಕಾರ್ಖಾನೆಯೊಂದರ ಕೌಂಪೌಂಡ್ ನಲ್ಲಿದ್ದ ಸ್ಪಾಂಜ್ ತ್ಯಾಜ್ಯಕ್ಕೆ ಬುಧವಾರ ಸಂಜೆ ಬೆಂಕಿ ತಗುಲಿ ಕ್ಷಣಕಾಲ ಆತಂಕ ಸೃಷ್ಟಿಯಾಗಿತ್ತು. ಅಪಾರ ಪ್ರಮಾಣದ ತ್ಯಾಜ್ಯವನ್ನು ಸ್ಥಳದಲ್ಲಿ ಸಂಗ್ರಹಿಸಲಾಗಿತ್ತು. ಬೆಂಕಿ ಎತ್ತರಕ್ಕೆ ಹೊತ್ತಿ ಉರಿಯಿತು. ದಟ್ಟಿಸಿದ ಹೊಗೆಯೂ ಆತಂಕ ಸೃಷ್ಟಿಸಿತ್ತು.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಮೂರು ಅಗ್ನಿಶಾಮಕ ದಳದ ವಾಹನಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದವು. ಸ್ಥಳೀಯರೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಗೆ ನೆರವು ನೀಡಿದರು.


