nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಾಧನಾ ಸಮಾವೇಶ: ಕೊರಟಗೆರೆಯ 13,353 ಫಲಾನುಭವಿಗಳಿಗೆ ಸೌಲಭ್ಯ

    May 19, 2026

    ಜನಗಣತಿ ವೇಳೆ ಬಯಲಾದ ವಲಸೆ ಚಿತ್ರಣ: ತುಮಕೂರಿನಲ್ಲಿ 1,514 ಮನೆಗಳಿಗೆ ಬೀಗ!

    May 18, 2026

    ಪಾರ್ಟ್‌ಟೈಮ್‌ ಕೆಲಸದ ಆಮಿಷ: ತುಮಕೂರಿನ ಮಹಿಳಾ ವೈದ್ಯೆಗೆ ₹4 ಲಕ್ಷ ವಂಚನೆ

    May 18, 2026
    Facebook Twitter Instagram
    ಟ್ರೆಂಡಿಂಗ್
    • ಸಾಧನಾ ಸಮಾವೇಶ: ಕೊರಟಗೆರೆಯ 13,353 ಫಲಾನುಭವಿಗಳಿಗೆ ಸೌಲಭ್ಯ
    • ಜನಗಣತಿ ವೇಳೆ ಬಯಲಾದ ವಲಸೆ ಚಿತ್ರಣ: ತುಮಕೂರಿನಲ್ಲಿ 1,514 ಮನೆಗಳಿಗೆ ಬೀಗ!
    • ಪಾರ್ಟ್‌ಟೈಮ್‌ ಕೆಲಸದ ಆಮಿಷ: ತುಮಕೂರಿನ ಮಹಿಳಾ ವೈದ್ಯೆಗೆ ₹4 ಲಕ್ಷ ವಂಚನೆ
    • ಸಿರಾ: ಬುಕ್ಕಾಪಟ್ಟಣ ವೃತ್ತದಲ್ಲಿ ಪೂರ್ಣಗೊಂಡು ಐದಾರು ತಿಂಗಳು ಕಳೆದರೂ ಉದ್ಘಾಟನೆಗೊಳ್ಳದ ಶೌಚಾಲಯ!
    • ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ: ರಸ್ತೆ ದುರಾವಸ್ಥೆ ವಿರುದ್ಧ ಪ್ರತಿಭಟನೆ
    • ಹುಳಿಯಾರು: ಮೇ 20 ರಂದು ವಿಶ್ವ ತಾಯಂದಿರ ದಿನಾಚರಣೆ
    • ಮಧುಗಿರಿ: ಚಾಕು ತೋರಿಸಿ ಕೇಬಲ್, ಪೈಪ್ ಕಳವು
    • ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ಪಾಪಿ ತಂದೆ: ಕೊಲೆಯ ನಂತರ ಮಗಳು ನಾಪತ್ತೆ ಎಂದು ಹೈಡ್ರಾಮಾ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಈ 6 ಊರುಗಳಲ್ಲಿ ಮುಂದಕ್ಕೆ ಹೋದ ಬೆಳಕಿನ ಹಬ್ಬ!!
    ಜಿಲ್ಲಾ ಸುದ್ದಿ November 11, 2023

    ಈ 6 ಊರುಗಳಲ್ಲಿ ಮುಂದಕ್ಕೆ ಹೋದ ಬೆಳಕಿನ ಹಬ್ಬ!!

    By adminNovember 11, 2023No Comments2 Mins Read
    chamarajanagar

    ಚಾಮರಾಜನಗರ: ಬೆಳಕಿನ ಹಬ್ಬ ದೀಪಾವಳಿ ಇಡೀ ದೇಶಾದ್ಯಂತ ಆಚರಣೆ ಮಾಡಲು ಜನರು ಕಾತರದಿಂದ ಕಾಯುತ್ತಿದ್ದರೇ ಈ 6 ಊರುಗಳು ಮಾತ್ರ ಹಬ್ಬವನ್ನು ಒಂದು ವಾರ ಮುಂದಕ್ಕೆ ಹಾಕಿದ್ದಾರೆ.‌

    ಹೌದು…, ಅಚ್ಚರಿಯಾದರೂ ಸತ್ಯ. ದೀಪಾವಳಿ ಬಂತೆಂದರೆ ಸಡಗರ-ಸಂಭ್ರಮ, ಚಿಣ್ಣರಿಗೆ ಪಟಾಕಿ ಹಚ್ಚುವ ಖುಷಿ, ಹಿರಿಯರಿಗೆ ದೀಪ ಬೆಳುಗುವ ಸಂತಸ. ಆದರೆ ಮಂಗಳವಾರ ದೇಶಾದ್ಯಂತ ಆಚರಿಸುವ ಸಂಭ್ರಮದ ಬೆಳಕಿನ ಹಬ್ಬವನ್ನು ಗುಂಡ್ಲುಪೇಟೆ ತಾಲೂಕಿನ 6 ಊರುಗಳು ಹಬ್ಬದ ನಂತರ ವಾರದಲ್ಲಿ ಬುಧವಾರ ಆಚರಿಸುತ್ತವೆ.


    Provided by
    Provided by

    ಗುಂಡ್ಲುಪೇಟೆ ತಾಲೂಕಿನ 6 ಗ್ರಾಮಗಳಲ್ಲಿ ಹಬ್ಬದ ಸಂತಸವೇ ಇಲ್ಲ. ಕಾರಣ ಈ ಬಾರಿ ಹಬ್ಬ ಮಂಗಳವಾರ ಬಂದಿರುವುದು. ಗುಂಡ್ಲುಪೇಟೆ ತಾಲೂಕಿನ ವೀರನಪುರ, ಬನ್ನಿತಾಳಪುರ, ಇಂಗಲವಾಡಿ, ಮಾಡ್ರಹಳ್ಳಿ, ಮಳವಳ್ಳಿ ಹಾಗೂ ನೇನೆಕಟ್ಟೆ ಗ್ರಾಮಗಳಲ್ಲಿ ದೀಪಾವಳಿಯ ಬಲಿ ಪಾಡ್ಯಮಿ ಬುಧವಾರ ಬಂದರೆ ಮಾತ್ರ ಹಬ್ಬ ಆಚರಿಸಲಿದ್ದು, ಇಲ್ಲದಿದ್ದರೆ ಮುಂದಿನ ಬುಧವಾರವೇ ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ.

    ದೀಪಾವಳಿ ಹಬ್ಬದ ಸಂಭ್ರಮ, ಹೊಸ ಬಟ್ಟೆ ತೊಡುವುದು, ಪಟಾಕಿ ಸಿಡಿಸುವುದು, ಮನೆಯಲ್ಲಿ ಸಿಹಿ ಊಟ ಎಲ್ಲವೂ ಬುಧವಾರವೇ ನಡೆಯಲಿದ್ದು, ಕಳೆದ ಮೂರು ತಲೆಮಾರುಗಳಿಂದ ಈ ಆರು ಗ್ರಾಮದವರು ಬುಧವಾರವೇ ಹಬ್ಬ ಆಚರಿಸುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ.

    ಬುಧವಾರವೇ ಹಬ್ಬ ಏಕೆ..?

    ಅಷ್ಟಕ್ಕೂ ಬುಧವಾರವೇ ಏಕೆ ಈ ಆರು ಗ್ರಾಮಗಳು ದೀಪಾವಳಿ ಮಾಡಲಿವೆ ಎಂಬ ಕುತೂಹಲಕ್ಕೆ ಉತ್ತರ ಗ್ರಾಮಸ್ಥರಲ್ಲಿ ಮನೆ ಮಾಡಿರುವ ಆತಂಕ. ಬುಧವಾರ ಹೊರತುಪಡಿಸಿ ಹಬ್ಬ ಆಚರಿಸಿದರೆ ಏನಾದರೂ ಕೆಡಕಾಗಬಹುದು, ದನಗಳಿಗೆ ಏನಾದರೂ ತೊಂದರೆ ಆಗಬಹುದು ಎಂಬ ಆತಂಕದಿಂದ ಈ ನಿರ್ಧಾರಕ್ಕೆ ಬಂದಿದ್ದಾರಂತೆ ಗ್ರಾಮಸ್ಥರು.

    ಈ ಕುರಿತು ವೀರನಪುರ ಗ್ರಾಮದ ಹಿರಿಯರಾದ ಸೋಮಪ್ಪ ಎಂಬವರು ಮಾತನಾಡಿ, ತಲೆಮಾರುಗಳ ಹಿಂದೆ ಒಮ್ಮೆ ಬುಧವಾರ ಹೊರತುಪಡಿಸಿ ಹಬ್ಬ ಆಚರಿಸಿದಾಗ ಏರಿಗೆ ಕಟ್ಟಿದ ಎತ್ತುಗಳಿಗೆ ಅನಾರೋಗ್ಯ ಉಂಟಾದ ನಿದರ್ಶನವಿರುವುದರಿಂದ ಹಿಂದಿನವರು ಹಾಕಿಕೊಟ್ಟ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ನಾವು ಆರು ಗ್ರಾಮದವರು ಒಂದೇ ದಿನ ಹಬ್ಬ ಆಚರಿಸಲಿದ್ದು, ಇದು ಮುಂದೆಯೂ ಕೂಡ ಪಾಲನೆಯಾಗಲಿದೆ. ಲೋಕವೆಲ್ಲಾ ಕ್ಯಾಲೆಂಡರ್ ಪ್ರಕಾರ ಹಬ್ಬದ ದಿನವೇ ಬೆಳಕಿನ ಹಬ್ಬ ಆಚರಿಸಿದರೆ ನಾವು ಬುಧವಾರ ಆಚರಿಸುತ್ತೇವೆ ಎಂದರು.

    ವೀರನಪುರ ಗ್ರಾಮದ ಯುವಕರಾದ ರಮೇಶ್, ನಾಗಪ್ಪ ಎಂಬವರು ಮಾತನಾಡಿ, ತಾತ, ಮುತ್ತಾತ ಕಾಲದಿಂದಲೂ ಬುಧವಾರ ದಿನದಂದೇ ಬೆಳಕಿನ ಹಬ್ಬ ಆಚರಣೆ ಮಾಡುತ್ತೇವೆ. ಬಲಿಪಾಡ್ಯಮಿ ಬುಧವಾರ ಬಂದರೇ ಅಂದೆ ಮಾಡುತ್ತೇವೆ ಇಲ್ಲವೇ ಅದಾದ ನಂತರದ ಬುಧವಾರ ಹಬ್ಬ ಆಚರಣೆ ಮಾಡುತ್ತೇವೆ, ತಲೆಮಾರುಗಳ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

    ತಲೆಮಾರುಗಳ ನಂಬಿಕೆಯಂತೆ ಮುಂದಿನ ಬುಧವಾರವೇ ಈ 6 ಗ್ರಾಮಗಳಲ್ಲಿ ಬೆಳಕಿನ ಹಬ್ಬ ನಡೆಯಲಿದೆ, ಈಗ ಬರುವ ಬಲಿಪಾಡ್ಯಮಿ ದಿನ ಎಂದಿನಂತೆ ಸಾಮಾನ್ಯ ದಿನವನ್ನಾಗಿ ಇವರು ಕಳೆಯಲಿದ್ದು ಯಾವುದೇ ಪಟಾಕಿ ಸಿಡಿಸುವುದು, ಹೊಸ ಬಟ್ಟೆ ತೊಡುವುದು ಮಾಡುವುದಿಲ್ಲ.

    admin
    • Website

    Related Posts

    ಬೀದರ್: ‘ಅಕ್ಕ ಪಡೆ’ಯಿಂದ ಸಂಚಾರಿ ನಿಯಮ ಹಾಗೂ ಮಹಿಳಾ ಸುರಕ್ಷತೆಯ ವಿಶೇಷ ಅರಿವು ಕಾರ್ಯಕ್ರಮ

    May 18, 2026

    ನೀರು ಕೊಡಿ ಇಲ್ಲವೇ ಕುರ್ಚಿ ಬಿಡಿ: ಅಧಿಕಾರಿಗಳ ವಿರುದ್ಧ ಬಂಟಿ ದರ್ಬಾರೆ ಗುಡುಗು ! 

    May 18, 2026

    ಸಚಿವ ಡಿ. ಸುಧಾಕರ್ ನಿಧನ: ಚಿತ್ರದುರ್ಗ ಜಿಲ್ಲೆಗೆ ನಾಳೆ ರಜೆ, ರಾಜ್ಯಾದ್ಯಂತ 3 ದಿನ ಶೋಕಾಚರಣೆ ಘೋಷಣೆ

    May 10, 2026

    Comments are closed.

    Our Picks

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಸಾಧನಾ ಸಮಾವೇಶ: ಕೊರಟಗೆರೆಯ 13,353 ಫಲಾನುಭವಿಗಳಿಗೆ ಸೌಲಭ್ಯ

    May 19, 2026

    ಕೊರಟಗೆರೆ: ರಾಜ್ಯ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶದ ಅಂಗವಾಗಿ ಕೊರಟಗೆರೆ ತಾಲ್ಲೂಕು ಆಡಳಿತ ಕಂದಾಯ ಇಲಾಖೆಯಲ್ಲಿ ವಿವಿಧ ಯೋಜನೆಗಳಡಿ…

    ಜನಗಣತಿ ವೇಳೆ ಬಯಲಾದ ವಲಸೆ ಚಿತ್ರಣ: ತುಮಕೂರಿನಲ್ಲಿ 1,514 ಮನೆಗಳಿಗೆ ಬೀಗ!

    May 18, 2026

    ಪಾರ್ಟ್‌ಟೈಮ್‌ ಕೆಲಸದ ಆಮಿಷ: ತುಮಕೂರಿನ ಮಹಿಳಾ ವೈದ್ಯೆಗೆ ₹4 ಲಕ್ಷ ವಂಚನೆ

    May 18, 2026

    ಸಿರಾ: ಬುಕ್ಕಾಪಟ್ಟಣ ವೃತ್ತದಲ್ಲಿ ಪೂರ್ಣಗೊಂಡು ಐದಾರು ತಿಂಗಳು ಕಳೆದರೂ ಉದ್ಘಾಟನೆಗೊಳ್ಳದ ಶೌಚಾಲಯ!

    May 18, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.