ಮುಂಬೈ: ಡ್ರಗ್ಸ್ ಗಾಗಿ ತಮ್ಮ ಇಬ್ಬರು ಮಕ್ಕಳನ್ನು ₹ 74 ಸಾವಿರಕ್ಕೆ ಮಾರಾಟ ಮಾಡಿದ್ದ ದಂಪತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ದಂಪತಿಯನ್ನು ಶಬ್ಬಿರ್ ಖಾನ್ ಹಾಗೂ ಸಾನಿಯಾ ಖಾನ್ ಎಂದು ಗುರುತಿಸಲಾಗಿದೆ. ಇವರ ಜೊತೆಗೆ ಮಕ್ಕಳ ಮಾರಾಟಕ್ಕೆ ನೆರವು ನೀಡಿದ್ದ ಶಕೀಲ್ ಮತ್ತು ಉಷಾ ಎಂಬುವರನ್ನು ಸಹ ಬಂಧಿಸಲಾಗಿದೆ.
ಮಕ್ಕಳನ್ನು ಮಾರಾಟ ಮಾಡಿದ್ದ ದಂಪತಿ ಮಾದಕ ವಸ್ತು ವ್ಯಸನಿಗಳಾಗಿದ್ದರು. ಇವರು ಡ್ರಗ್ಸ್ ಪಡೆಯುವ ಸಲುವಾಗಿ 74 ಸಾವಿರಕ್ಕೆ ಮಕ್ಕಳನ್ನು ಮಾರಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಒಂದು ತಿಂಗಳ ಹೆಣ್ಣು ಮಗುವನ್ನು ರಕ್ಷಣೆ ಮಾಡಲಾಗಿದೆ. 2 ವರ್ಷ ಬಾಲಕನಿಗಾಗಿ ತನಿಖೆ ಮಾಡಲಾಗುತ್ತಿದ್ದು ಎರಡು ದಿನಗಳಲ್ಲಿ ಬಾಲಕನ ಪತ್ತೆ ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಹೆಣ್ಣು ಮಗುವನ್ನು ₹14 ಸಾವಿರಕ್ಕೆ, ಗಂಡು ಮಗುವನ್ನು ₹ 60 ಸಾವಿರಕ್ಕೆ ಮಾರಾಟ ಮಾರಿದ್ದರು. ಘಟನೆ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


