ನಿವೃತ್ತ ಸರ್ಕಾರಿ ನೌಕರ ಸೇರಿ ಇಬ್ಬರಿಗೆ ಯುವತಿ ಸೋಗಿನಲ್ಲಿ ಪ್ರತ್ಯೇಕವಾಗಿ ವಿಡಿಯೊ ಕರೆ ಮಾಡಿದ್ದ ಸೈಬರ್ ವಂಚಕರು, ಬೆತ್ತಲೆ ವಿಡಿಯೋ ಚಿತ್ರೀಕರಿಸಿಕೊಂಡು ₹20. 56 ಲಕ್ಷ ದೋಚಿದ್ದಾರೆ.
ಎರಡೂ ಕೃತ್ಯಗಳ ಸಂಬಂಧ ಪಶ್ಚಿಮ ಹಾಗೂ ಉತ್ತರ ವಿಭಾಗದ ಸೈಬರ್ ಕೈಂ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಹೊರ ರಾಜ್ಯಗಳಲ್ಲಿರುವ ವಂಚಕರು, ಯುವತಿ ನಗ್ನ ವಿಡಿಯೊವನ್ನು ಬಳಸಿಕೊಂಡು ಕರೆ ಮಾಡಿ ವಂಚನೆ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.


