ಭಿಕ್ಷುಕನೊಬ್ಬ ಪ್ರತಿದಿನ ಭಿಕ್ಷೆ ಬೇಡುವ ಮೂಲಕ ಕೋಟ್ಯಂತರ ರೂಪಾಯಿ ಸಂಪತ್ತನ್ನು ಸಂಪಾದಿಸಿದ್ದಾನೆ. ಭಿಕ್ಷಾಟನೆಯ ಮೂಲಕವೇ ಮುಂಬೈನ ಭರತ್ ಜೈನ್ ಎಂಬರು 7.5 ಕೋಟಿ ರೂ. ಸಂಪಾದಿಸಿದ್ದಾರೆ.
ಇವರ ತಿಂಗಳ ಗಳಿಕೆ 60 ರಿಂದ 75 ಸಾವಿರದವರೆಗೂ ಇದೆ ಎನ್ನುತ್ತಿವೆ ವರದಿಗಳು. ವಿಶ್ವದ ಶ್ರೀಮಂತ ಭಿಕ್ಷುಕ ಎನಿಸಿಕೊಂಡಿರುವ ಭರತ್ ಜೈನ್ ಮುಂಬೈ ಹಾಗೂ ಪುಣೆಯಲ್ಲಿ ಸ್ವಂತ ಮನೆಗಳನ್ನು ಹೊಂದಿದ್ದಾರೆ.
ಮುಂಬೈನಲ್ಲಿಯೇ ಈತನಿಗೆ 1.2 ಕೋಟಿ ಮೌಲ್ಯದ ಎರಡು ಬಿ ಎಚ್ ಕೆ ಫ್ಲಾಟ್ ಗಳಿವೆ. ಥಾಣೆಯಲ್ಲಿ ಕೋಟ್ಯಂತರ ಮೌಲ್ಯದ 2 ಅಂಗಡಿಗಳಿವೆ. ಕುಟುಂಬದವರು ಎಷ್ಟೇ ಹೇಳಿದರೂ ಇವರು ಇಂದಿಗೂ ಭಿಕ್ಷೆ ಬೇಡುತ್ತಿದ್ದಾರೆ ಎನ್ನಲಾಗಿದೆ.


