ಬೆಳಗಾವಿ: ಇದೇ ಡಿಸೆಂಬರ್ 4 ರಿಂದ 15 ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಇನ್ನು ರಾಜ್ಯ ವಿಧಾನಮಂಡಲ ಚಳಿಗಾಲ ಅಧಿವೇಶನದ ಭದ್ರತೆಗಾಗಿ 5 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎಸ್.ಎನ್.ಸಿದ್ರಾಮಪ್ಪ ಮಾಹಿತಿ ನೀಡಿದ್ದಾರೆ.
ಇನ್ನು ಇಷ್ಟೊಂದು ಸಂಖ್ಯೆಯ ಪೊಲೀಸರ ವಾಸ್ತವ್ಯಕ್ಕೆ ನಾಲ್ಕು ದೊಡ್ಡ ದೊಡ್ಡ ಜರ್ಮನ್ ಟೆಂಟ್ ನೊಂದಿಗೆ ಬೃಹತ್ ಟೌನ್ ಶಿಪ್ ನಿರ್ಮಿಸಲಾಗಿದೆ.
ಅಧಿವೇಶನ ಬಂದೋಬಸ್ತ್ ಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಬರುವ ಪೊಲೀಸ್ ಸಿಬ್ಬಂದಿಗೆ ಬೃಹತ್ ಟೌನ್ ಶೀಫ್ ನಿರ್ಮಿಸಿ ವಾಸ್ತವ್ಯಕ್ಕೆ ಸುವರ್ಣ ವಿಧಾನ ಸೌಧದ ಅಲಾರವಾಡ ಬಳಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಟೌನ್ ಶಿಪ್ ನಿರ್ಮಾಣವಾಗಿದೆ.
ಈ ಟೌನ್ ಶಿಪ್ ನಿರ್ಮಾಣ ಕೆಲಸವನ್ನು ಮೈಸೂರಿನ ಕೆ.ಎಂ ಶರೀಫ್ ಎನ್ನುವರು ತೆಗೆದುಕೊಂಡಿದ್ದು, ಹದಿಮೂರು ದಿನಗಳಿಂದ 100 ಜನ ಕಾರ್ಮಿಕರು ಈ ಟೆಂಟ್ ನಿರ್ಮಾಣದಲ್ಲಿ ತೊಡಗಿದ್ದಾರೆ. ಇದೀಗ ಬಹುತೇಕ ಮುಗಿದಿದ್ದು, ಕೊನೆಯ ಹಂತದ ಕೆಲಸಗಳನ್ನು ಮಾಡುತ್ತಿದ್ದಾರೆ.


