ಜೂನಿಯರ್ ಮೆಹಮೂದ್ ಎಂದೇ ಖ್ಯಾತರಾಗಿದ್ದ ನಟ ನಯೀಮ್ ಸಯ್ಯದ್(67) ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಹೊಟ್ಟೆಯ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು, ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ತಡರಾತ್ರಿ 2 ಗಂಟೆಗೆ ಮೃತಪಟ್ಟಿದ್ದಾರೆ.
ಇಂದು ಮಧ್ಯಾಹ್ನ ಸಾಂತಾಕ್ರೂಜ್ ಸಮಾಧಿ ಮೈದಾನದಲ್ಲಿ ನಯೀಮ್ ಸಯ್ಯದ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಸ್ನೇಹಿತರು ತಿಳಿಸಿದ್ದಾರೆ. ತಮ್ಮ ನಟನೆಯಿಂದಲೇ ಇವರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು.


