ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಆಸ್ಪತ್ರೆಯಲ್ಲಿ. ಕೆ. ಚಂದ್ರಶೇಖರ ರಾವ್ ಅವರು ಬಿದ್ದು ಸೊಂಟಕ್ಕೆ ಪೆಟ್ಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೈದರಾಬಾದ್ ನ ಯಶೋದಾ ಆಸ್ಪತ್ರೆಗೆ ದಾಖಲಾಗಿರುವ ಕೆಸಿಆರ್ ಅವರ ಆರೋಗ್ಯ ಸುಧಾರಿಸಿದೆ.
ವರದಿಗಳ ಪ್ರಕಾರ, ಕೆಸಿಆರ್ ತಮ್ಮ ಫಾರ್ಮ್‌ಹೌಸ್ ನಲ್ಲಿ ಜಾರಿ ಬಿದ್ದರು. ಗುರುವಾರ ಮಧ್ಯರಾತ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಸಿಆರ್ ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಲಾಗಿದೆ ಎಂದು ವೈದ್ಯರ ತಂಡ ಮಾಹಿತಿ ನೀಡಿದೆ.


