ಬಿಹಾರ: ಜಗತ್ತಿನಲ್ಲಿ ಹಲವು ರೀತಿಯ ಮಾರುಕಟ್ಟೆಗಳಿವೆ. ಇತ್ತೀಚೆಗೆ, ಬಲ್ಗೇರಿಯಾದಲ್ಲಿ ವಧು ಮಾರುಕಟ್ಟೆ ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಯಾಗಿತ್ತು. ವಧುಗಳನ್ನು ಖರೀದಿಸಲು ಜನರು ಈ ಮಾರುಕಟ್ಟೆಗೆ ಬರುತ್ತಾರೆ ಎನ್ನಲಾಗುತಿತ್ತು. ಆದರೆ ವರರನ್ನು ಮಾರಾಟ ಮಾಡುವ ಮಾರುಕಟ್ಟೆಯೂ ಇದೆ. ಬಿಹಾರದ ಮಧುಬನಿಯಲ್ಲಿ ಪ್ರತಿ ವರ್ಷ ವರ ಮಾರುಕಟ್ಟೆಯನ್ನು ಆಯೋಜಿಸಲಾಗುತ್ತದೆ.
ವರ್ಷದಲ್ಲಿ ಒಂಬತ್ತು ದಿನಗಳ ಕಾಲ ಈ ಮಾರುಕಟ್ಟೆ ನಡೆಯುತ್ತದೆ. ಈ ಸಮಯದಲ್ಲಿ, ಅನೇಕ ಅವಿವಾಹಿತ ಯುವಕರು ಇಲ್ಲಿಗೆ ಬರುತ್ತಾರೆ. ಯಾವುದಾದರೂ ಹುಡುಗಿ ತಮ್ಮನ್ನು ಇಷ್ಟಪಡುತ್ತಾರೆ, ಮದುವೆಯಾಗುತ್ತಾರೆ ಎನ್ನುವ ಉದ್ದೇಶದಿಂದಲೇ ಹುಡುಗರು ಈ ಮಾರುಕಟ್ಟೆಗೆ ಬರುತ್ತಾರೆ.
ಇಲ್ಲಿ ಹುಡುಗರ ವಿದ್ಯಾರ್ಹತೆಗೆ ಅನುಗುಣವಾಗಿ ಅವರ ವಯಸ್ಸು 35 ವರ್ಷಕ್ಕಿಂತ ಹೆಚ್ಚಿದ್ದರೆ ಅವರ ಬೆಲೆ ಐವತ್ತು ಸಾವಿರ ರೂಪಾಯಿಗಳಿಗೆ ಆರಂಭವಾಗುತ್ತದೆ. ವರನನ್ನು ಕುಟುಂಬದ ಪರಂಪರೆಯ ಆಧಾರದ ಮೇಲೆ ಮೌಲ್ಯೀಕರಿಸಲಾಗುತ್ತದೆ. ಅತ್ಯಂತ ಪ್ರಮುಖ ವಿಷಯವೆಂದರೆ ಈ ಮಾರುಕಟ್ಟೆ ಇರುವುದು ನಮ್ಮದೇ ದೇಶದಲ್ಲಿ. ಈ ಮಾರುಕಟ್ಟೆಯಲ್ಲಿ ವರನ ಅರ್ಹತೆಯ ಆಧಾರದ ಮೇಲೆ ವರರನ್ನು ಮಾರಾಟ ಮಾಡಲಾಗುತ್ತದೆ.
ವರದಕ್ಷಿಣೆ ಪದ್ಧತಿಯನ್ನು ಕೊನೆಗಾಣಿಸುವ ಉದ್ದೇಶದಿಂದ ಈ ಮಾರುಕಟ್ಟೆ ಆಯೋಜಿಸಲಾಗಿತ್ತು. ಆದರೆ ಈ ಮಾರುಕಟ್ಟೆಗೆ ಬರುವ ಕೆಲವು ಹುಡುಗರು ಕೂಡಾ ವರದಕ್ಷಿಣೆಗೆ ಬೇಡಿಕೆಯಿಡುತ್ತಾರೆ ಎನ್ನಲಾಗಿದೆ.


