ಬೆಂಗಳೂರು: ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಇಂಟರ್ ಪೋಲ್ ಪೊಲೀಸರು ದುಬೈನಲ್ಲಿ ಬಂಧಿಸಿದ್ದಾರೆ. ಮಿಧುನ್ ಚಂದ್ರನ್ ಜೊತೆ ಸಂಬಂಧ ಹೊಂದಿದ್ದ 33 ವರ್ಷದ ಮಹಿಳೆ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕವಾಗಿ ಬಳಸಿಕೊಂಡ ಎಂದು ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.
ಎಫ್ ಐಆರ್ ಪ್ರಕಾರ, ಚಂದ್ರನ್ ತನ್ನ ತಾಯಿ ಗೀತಾಗೆ ಪರಿಚಯಿಸಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾಳೆ. ಅವರು ಆರಂಭದಲ್ಲಿ ಮದುವೆಗೆ ಒಪ್ಪಿದ್ದರು. ಸಂತ್ರಸ್ತೆ 2016ರಲ್ಲಿ ಅದೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಸಂತ್ರಸ್ತೆಯ ಜತೆ ಸ್ನೇಹ ಬೆಳೆಸಿದ್ದ ಎನ್ನಲಾಗಿದೆ.
ಚಂದ್ರನಿಗೆ ಆರ್ಥಿಕವಾಗಿ ಸಹಾಯ ಮಾಡುವಂತೆ ಸಂತ್ರಸ್ತೆ ಮತ್ತು ಆತನ ತಾಯಿ ಆಮಿಷ ಒಡ್ಡಿದ್ದರು. ಎಫ್ ಐಆರ್ ನ ಪ್ರಕಾರ ಚಂದ್ರನ್ ಮತ್ತು ಅವರ ತಾಯಿ ಗೀತಾ ಸಂತ್ರಸ್ತೆಯನ್ನು ಮದುವೆಯಾಗುವಂತೆ ಕೇಳಿದಾಗ ನಿಂದನೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆಯು ಫೆಬ್ರವರಿ 2020 ರಲ್ಲಿ ಚಂದ್ರನ್ ಮತ್ತು ಆತನ ತಾಯಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಶಂಕಿತರ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 417 (ವಂಚನೆ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 506 (ಅಪರಾಧ ಬೆದರಿಕೆ) ಮತ್ತು ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


