ಬೆಂಗಳೂರು: ನಗರದ ವೈದ್ಯರು ಮಾಡಿದ ವಿಶಿಷ್ಟ ಸರ್ಜರಿಯೊಂದು ವೈದ್ಯಲೋಕದಲ್ಲಿ ಅಚ್ಚರಿ ಮೂಡಿಸಿದೆ.
18 ವರ್ಷಗಳ ಹಿಂದೆ ಯುದ್ಧದ ಸಮಯದಲ್ಲಿ ಯೆಮೆನ್ ಮೂಲದ ವ್ಯಕ್ತಿಯೊಬ್ಬನ ತಲೆಗೆ ಹೊಕ್ಕಿದ್ದ ಬುಲೆಟ್ ಅನ್ನು ಇದೀಗ ಬೆಂಗಳೂರಿನ ಆರ್. ವಿ. ಆಸ್ಟರ್ ಆಸ್ಪತ್ರೆಯ ವೈದ್ಯರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬುಲೆಟ್ ಸ್ಕಲ್ ಬೋನ್ ಒಳಗೆ ನುಸುಳಿ ಕಿವಿಗೆ ಹೊಕ್ಕಿತ್ತು. ವೈದ್ಯರು ಸವಾಲು ಸ್ವೀಕರಿಸಿ ಶಸ್ತ್ರಚಿಕಿತ್ಸೆ ನಡೆಸಿ 3 ಸೆಂಟಿಮೀಟರ್ ಉದ್ದದ ಬುಲೆಟ್ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.


