ವರ್ಗಾವಣೆಯಾಗಿ ಹಲವು ತಿಂಗಳಾದರೂ ವರ್ಗಾವಣೆಯಾದ ಸ್ಥಳಕ್ಕೆ ವರದಿ ಮಾಡಿಕೊಳ್ಳದೇ, ಗೈರು ಹಾಜರಾದ ರಾಜ್ಯದ 44 ಪೊಲೀಸ್ ಇನ್ ಸ್ಪೆಕ್ಟರ್ ಗಳು ಕರ್ತವ್ಯ ಲೋಪವೆಸಗಿದ್ದು, ಇದೀಗ ಅಂತಹವರನ್ನ ಅಮಾನತು ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.
ವರ್ಗಾವಣೆಗೊಂಡ ಪೊಲೀಸರು ವರದಿ ಮಾಡಿ ಪಾಲನಾ ವರದಿಯನ್ನ ಪೊಲೀಸ್ ಪ್ರಧಾನ ಕಚೇರಿಗೆ ಕಳುಹಿಸಬೇಕು. ಆದರೆ, ಕೆಲ ಪೊಲೀಸ್ ಇನ್ ಸ್ಪೆಕ್ಟರ್ ಗಳು ವರ್ಗಾವಣೆಯಾಗಿ ಹಲವು ತಿಂಗಳಾದರೂ ವರ್ಗವಾದ ಸ್ಥಳಕ್ಕೆ ವರದಿ ಮಾಡಿಕೊಳ್ಳದೇ ಹಿರಿಯ ಅಧಿಕಾರಿಗಳ ಆದೇಶ ಉಲ್ಲಂಘಿಸಿದ್ದಾರೆ.


