ಒಂದಲ್ಲ ಎರಡಲ್ಲ ಬರೋಬ್ಬರಿ ಹತ್ತು ದಿನದಿಂದ RTO ದಲ್ಲಿ ವಾಹನಸವಾರರಿಗೆ ಸಂಕಷ್ಟ ಎದುರಾಗಿದೆ. ಸಾರಿಗೆ ಇಲಾಖೆ ಕಚೇರಿಯಲ್ಲಿ ಆಫೀಸರ್ಸ್ ಏನ್ಮಾಡ್ತಿದ್ದಾರೆ. ಆರ್ ಟಿಓ ಕಚೇರಿಗಳಲ್ಲಿ ಡಿಎಲ್- ಆರ್ಸಿಗೆ ಸ್ಮಾರ್ಟ್ ಸಮಸ್ಯೆ ಎದುರಾಗಿದೆ.
ಬೆಂಗಳೂರು ಆರ್ ಟಿಓ ಕಚೇರಿಗಳಲ್ಲಿ ಡಿಎಲ್-ಆರ್ಸಿ ಕಾರ್ಡ್, ಲೈಸೆನ್ಸ್ ಕಳೆದ ಹತ್ತು ದಿನದಿಂದ ಸಿಗ್ತಿಲ್ಲ. ಕೈಗೆ ಕಾರ್ಡ್ ಸಿಗದೇ ಮನೆ ಮುಂದೆ ಬೈಕ್, ಕಾರು ನಿಂತಿದೆ. ಆರ್ ಟಿಓ ಕಚೇರಿಗಳಲ್ಲಿ ಚಾಲನಾ ಪರೀಕ್ಷೆ ಪಾಸ್ ಆದ್ರೂ ಡಿ ಎಲ್ ಸಿಗುತ್ತಿಲ್ಲ.
ಆರ್ ಟಿ ಓ ಕಚೇರಿಗಳಲ್ಲಿ ಚಾಲನಾ ಪರೀಕ್ಷೆ ಪಾಸ್ ಆದ್ರೂ ಡಿ ಎಲ್ ಸಿಗುತ್ತಿಲ್ಲ. ಸ್ಮಾರ್ಡ್ ಕಾರ್ಡ್ ಗೆ ಟೆಕ್ನಿಕಲ್ ಸಮಸ್ಯೆ ತಲೆದೋರಿದೆ. ಸಾರಿಗೆ ಇಲಾಖೆ ಕಚೇರಿಗಳಲ್ಲಿ ಸ್ಮಾರ್ಡ್ ಕಾರ್ಡ್ ಗಳಿಗೆ ಸಕಾಲದಲ್ಲಿ ಚಿಪ್ ಪೂರೈಕೆಯಾಗ್ತಿಲ್ಲ.
ಶೋ ರೂಂನಿಂದ ಹೊಸದಾಗಿ ವಾಹನ ಖರೀದಿಸಿದ್ರೂ ವಾಹನ ರಸ್ತೆಗಿಳಿಸದ ಸ್ಥಿತಿ ಇದೆ. ಹೀಗಾಗಿ ಬೆಂಗಳೂರು ಆರ್ ಟಿಓ ಕಚೇರಿಗಳಲ್ಲಿ ಅಧಿಕಾರಿಗಳ ವಿರುದ್ಧ ವಾಹನಸವಾರರು ಆಕ್ರೋಶ ಹೊರಹಾಕಿದ್ದಾರೆ.


