ಆಸ್ಟ್ರೇಲಿಯಾದ ಸ್ಟಾರ್ ಓಪನರ್ ಡೇವಿಡ್ ವಾರ್ನರ್ ಹೊಸ ದಾಖಲೆ ಬರೆದಿದ್ದಾರೆ. ವಾರ್ನರ್ ಟೆಸ್ಟ್ ನಲ್ಲಿ ಆಸೀಸ್ ಪರ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ಅವರು ಇದುವರೆಗೆ 110 ಟೆಸ್ಟ್ ಗಳಲ್ಲಿ 8,651 ರನ್ ಗಳಿಸಿದ್ದಾರೆ. ಈ ಮೂಲಕ ಮಾಜಿ ನಾಯಕ ಮೈಕಲ್ ಕ್ಲಾರ್ಕ್ (8,643) ಅವರನ್ನು ಹಿಂದಿಕ್ಕಿದ್ದಾರೆ.
ಭರ್ಜರಿ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನನ್ನ ಆಟ ಇನ್ನೂ ಇದೆ ಎಂಬ ಸಂದೇಶವನ್ನು 37 ವರ್ಷದ ಕ್ರಿಕೆಟಿಗ ರವಾನಿಸಿದ್ದಾರೆ. ಆದರೆ ಈ ಸರಣಿ ವಾರ್ನರ್ ಪಾಲಿಗೆ ಕೊನೆಯ ಟೆಸ್ಟ್ ಸರಣಿ ಎಂದು ಕೆಲವು ವರದಿಗಳಾಗಿವೆ. ಅಭಿಮಾನಿಗಳು ಸಹ ಹೀಗೆಯೇ ತಿಳಿದಿದ್ದಾರೆ. 37 ವರ್ಷದ ಡೇವಿಡ್, ತಮ್ಮ ನಿವೃತ್ತಿ ಮಾತುಕತೆಯಿಂದ ದೂರವಿರಲು ಬಯಸಿದ್ದಾರೆ. ಅದಕ್ಕೆ ಈ ಆಟವೇ ಸಾಕ್ಷಿ.


