ಇತ್ತೀಚೆಗೆ ಜಾಗತಿಕ ಸಿಹಿ ನೀರಿನ ಮೀನು ಪ್ರಭೇದಗಳ ಮೊದಲ ಸಮಗ್ರ ಮೌಲ್ಯಮಾಪನವನ್ನು ಬಹಿರಂಗಪಡಿಸಲಾಗಿದೆ. ಈ ವರದಿಯ ಪ್ರಕಾರ ಅಂದಾಜು ಮಾಡಿದ ಸಿಹಿ ನೀರಿನ ಮೀನುಗಳಲ್ಲಿ 25% ರಷ್ಟು ಅಳಿವಿನ ಅಪಾಯದಲ್ಲಿದೆ.
ಹವಾಮಾನ ಬದಲಾವಣೆ, ಮಾಲಿನ್ಯ, ಅತಿಯಾದ ಮೀನುಗಾರಿಕೆ, ಮತ್ತು ಆಕ್ರಮಣಕಾರಿ ಪ್ರಭೇದಗಳಿಂದಾಗಿ ಸಿಹಿ ನೀರಿನ ಮೀನುಗಳು ಅಳಿವಿನ ಅಂಚಿಗೆ ತಲುಪಿರುವುದಕ್ಕೆ ಕಾರಣ ಎನ್ನಲಾಗಿದೆ. ಇದರ ಜೊತೆಗೆ ಮಧ್ಯ ದಕ್ಷಿಣ ಪೆಸಿಫಿಕ್ ಮತ್ತು ಪೂರ್ವ ಪೆಸಿಫಿಕ್ ಹಸಿರು ಆಮೆಗಳು ಕೂಡ ಅಳಿವಿನ ಅಂಚಿನಲ್ಲಿದೆ.


