ಬಂಗಾರ ಎಂದಾಕ್ಷಣ ಅನೇಕರಿಗೆ ಶ್ರೀಮಂತಿಕೆ, ಅಂತಸ್ತು ನೆನಪಾಗಬಹುದು. ಆದರೆ ಇದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ. ಚಿನ್ನದ ಉಂಗುರವನ್ನು ಧರಿಸುವುದರಿಂದ ಸೂರ್ಯನ ಶಕ್ತಿಯು ದೇಹಕ್ಕೆ ಹರಿಯಲು ಸಹಾಯ ಮಾಡುತ್ತದೆ.
ಏಕಾಗ್ರತೆ ಹೆಚ್ಚುತ್ತದೆ. ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ಚಿನ್ನದ ಉಂಗುರವನ್ನು ಧರಿಸಿದರೆ ಮಾನಸಿಕ ಧೈರ್ಯ ಮತ್ತು ಆಂತರಿಕ ಶಾಂತಿ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು.
ಇದಲ್ಲದೇ, ನಿಮ್ಮ ಜಾತಕದಲ್ಲಿ ಗುರು ದುರ್ಬಲನಾಗಿದ್ದರೆ ಯಶಸ್ಸು ಪಡೆಯಲು ನಿಮ್ಮ ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಬಹುದು.


