ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಅದಿತಿ ಪ್ರಭುದೇವ ಮತ್ತು ಪವನ್ ತೇಜ್ ಅವರು ನಾಯಕಿ-ನಾಯಕನಾಗಿ ಅಭಿನಯಿಸಿದ ‘ಅಲೆಕ್ಸಾ’ ಸಿನಿಮಾ ರಿಲೀಸ್ ಆಗಲಿದೆ. ಪವನ್ ತೇಜ್ ಹೀರೋ ಆಗಿ ನಟಿಸಿದರೆ.. ಅದಿತಿ ಪ್ರಭುದೇವ ಅವರು ವಿಶೇಷ ತನಿಖಾ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಟಿ ಅದಿತಿ ಪ್ರಭುದೇವ ಅವರು ಅಭಿನಯಿಸಿದ ‘ಅಲೆಕ್ಸಾ’ ಸಿನಿಮಾ ಕೌತುಕವನ್ನು ಮೂಡಿಸಿದೆ. ಈ ಸಿನಿಮಾವನ್ನು ವಿ. ಚಂದ್ರು ನಿರ್ಮಾಣ ಮಾಡಿದ್ದಾರೆ. ಜೀವ ಅವರು ನಿರ್ದೇಶನ ಮಾಡಿದ್ದಾರೆ.
‘ಅಲೆಕ್ಸಾ’ ಸಿನಿಮಾವನ್ನು ಡಿಸೆಂಬರ್ 29ರಂದು ರಿಲೀಸ್ ಮಾಡಬೇಕು ಎಂದು ಚಿತ್ರತಂಡ ನಿರ್ಧರಿಸಿತ್ತು. ಆದರೆ ಡಿ.29ಕ್ಕೆ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ಸಿನಿಮಾ ‘ಕಾಟೇರ’ ಬಿಡುಗಡೆ ಆಗಿದ್ದರಿಂದ ‘ಅಲೆಕ್ಸಾ’ ಸಿನಿಮಾದ ರಿಲೀಸ್ ಜನವರಿ 26ಕ್ಕೆ ಮಂದೂಡಿಕೆ ಆಗಿದೆ.


