ಶುಂಠಿ ಎಣ್ಣೆಯಿಂದ ಕೂದಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ:
ಬಿಳಿ ಕೂದಲಿಗೆ ಶುಂಠಿ ಎಣ್ಣೆಯನ್ನು ಬಳಸುವುದರಿಂದ ಅದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು. ವಾರದಲ್ಲಿ ಮೂರು ದಿನ ಶುಂಠಿ ಎಣ್ಣೆಯನ್ನು ಬಳಸುವುದರಿಂದ ಕೂದಲಿನ ಆರೋಗ್ಯ ಸುಧಾರಿಸುತ್ತದೆ. ಶುಂಠಿಯನ್ನು ಸೇವಿಸುವುದರಿಂದ ಕೂದಲಿಗೆ ರಕ್ತ ಸಂಚಾರಕ್ಕೆ ಸಹಕಾರಿಯಾಗುತ್ತದೆ. ಶುಂಠಿಯಲ್ಲಿ ವಿಟಮಿನ್ ಬಿ, ಎ, ಸಿ, ಇ ಮುಂತಾದ ಪೋಷಕಾಂಶಗಳು ಹೇರಳವಾಗಿವೆ. ಇವು ಕೂದಲಿನ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉಪಯುಕ್ತವಾಗಿವೆ.
ತೂಕ ಇಳಿಸಿಕೊಳ್ಳಲು ಬಯಸಿದರೆ ನೀವು ಬೆಳಗಿನ ಉಪಾಹಾರದಲ್ಲಿ ಇವುಗಳನ್ನು ತಿನ್ನಬೇಕು:
ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ತೂಕವನ್ನು ಕಳೆದುಕೊಳ್ಳುವಲ್ಲಿ ಆಹಾರ ಕ್ರಮವು ಬಹಳ ಮುಖ್ಯವಾಗಿದೆ. ಆಹಾರ ಮತ್ತು ವ್ಯಾಯಾಮದ ಬಗ್ಗೆ ಜಾಗರೂಕರಾಗಿರಬೇಕು. ಅದಕ್ಕಾಗಿ, ನೀವು ಖಂಡಿತವಾಗಿಯೂ ಆರೋಗ್ಯಕರ ಉಪಹಾರವನ್ನು ಸೇವಿಸಬೇಕು. ಓಟ್ಸ್, ನಟ್ಸ್, ಬೇಯಿಸಿದ ಮೊಟ್ಟೆ, ಬಾಳೆಹಣ್ಣು ಇತ್ಯಾದಿಗಳನ್ನು ಬೆಳಗಿನ ಉಪಾಹಾರವಾಗಿ ತೆಗೆದುಕೊಳ್ಳಬಹುದು. ಇವೆಲ್ಲವೂ ತೂಕ ಇಳಿಕೆಗೆ ಸಹಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.
ಬೆಳಗ್ಗೆ ಕುಡಿಯುವ ಬ್ಲ್ಯಾಕ್ ಟೀ ಹೃದಯ ಅಪಾಯವನ್ನು ಕಡಿಮೆ ಮಾಡುತ್ತೆ:
ನಿಮಗೆ ತಿಳಿದಿದೆಯೇ ಬೆಳಿಗ್ಗೆ ಬ್ಲ್ಯಾಕ್ ಟೀ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಬ್ಲ್ಯಾಕ್ ಟೀ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್ ಗಳಲ್ಲಿ ಸಮೃದ್ಧವಾಗಿದೆ ಎಂದು ಹಲವಾರು ಸಂಶೋಧನೆಗಳು ಬಹಿರಂಗಪಡಿಸಿವೆ. ಇದು ಪರಿಧಮನಿಯ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಹಲ್ಲುಗಳನ್ನು ಬಲಪಡಿಸುತ್ತದೆ,ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ,ತೂಕ ಇಳಿಸಿಕೊಳ್ಳಲು ಸಹಾಯಕವಾಗಿದೆ.
ನೆನೆಸಿದ ಅಂಜೂರದ ನೀರು ಕುಡಿದ್ರೆ ಸಿಗುತ್ತೆ ಅನೇಕ ಆರೋಗ್ಯ ಪ್ರಯೋಜನಗಳು:
ಅಂಜೂರ ನೆನಸಿದ ನೀರು ನಿಮ್ಮ ಆರೋಗ್ಯಕ್ಕೆ ಹೆಚ್ಚು ಅವಶ್ಯಕವಾಗಿದೆ. ರಾತ್ರಿಯಲ್ಲಿ ಅಂಜೂರ ನೆನೆಸಿದ ನೀರನ್ನು ಕುಡಿಯುವುದರಿಂದ 6 ಆರೋಗ್ಯ ಪ್ರಯೋಜನಗಳು ನಿಮಗೆ ಸಿಗುತ್ತವೆ. ತೂಕ ನಷ್ಟಕ್ಕೆ ತುಂಬಾನೇ ಸಹಾಯ ಮಾಡುತ್ತದೆ. ಅಂಜೂರ ನೆನೆಸಿದ ನೀರು ಜೀರ್ಣಕ್ರಿಯೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಾಂತಿಯುತ ಚರ್ಮವನ್ನು ನೀಡುತ್ತದೆ.