ಮೈಸೂರು: ಗೃಹಿಣಿ ಒಬ್ಬರು ಪತಿ, ಅತ್ತೆ-ಮಾವನ ಕಿರುಕುಳದಿಂದ ಬೇಸತ್ತು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. 35 ವರ್ಷದ ವಿಜಯಲಕ್ಷ್ಮೀ ಮೃತ ದುರ್ದೈವಿಯಾಗಿದ್ದಾರೆ.
ವಿಜಯಲಕ್ಷ್ಮೀ ದಾಂಪತ್ಯ ಜೀವನಕ್ಕೆ ಕಾಲಿಟ್ಟು 12 ವರ್ಷಗಳಾಗಿದ್ದು, ಎರಡು ಮುದ್ದಾದ ಮಕ್ಕಳಿದ್ದಾರೆ. ಆದರೆ ವರದಕ್ಷಿಣೆಗಾಗಿ ಅತ್ತೆ, ಮಾವ, ಮೈದುನ ಮತ್ತು ಪತಿ ಯಾವಗಲೂ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


