ಪಾವಗಡ: ತಾಲ್ಲೂಕಿನ ನಿಡಗಲ್ಲು ಹೋಬಳಿ ಕೋಡಿಗೆಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿಶಾಲೆ ಬಿ ಸಿ 89 ವಾರ್ಷಿಕೋತ್ಸವವನ್ನು ಶಾಲೆಯ ಆವರಣಲ್ಲಿ ಆಯೋಜನೆ ಮಾಡಲಾಗಿತ್ತು.
ಶಾರದಾ ಮಾತೆ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಲೆಯ ಅಧ್ಯಕ್ಷತೆ ವಹಿಸಿಕೊಂಡ ಪ್ರಾಂಶುಪಾಲ ತಿಪ್ಪೇಸ್ವಾಮಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ನಮ್ಮ ಶಾಲೆಯಲ್ಲಿ 12ನೇ ವಾರ್ಷಿಕೋತ್ಸವ ನಡೆಯುತ್ತಿದೆ, ಪ್ರತಿವರ್ಷ ನಮ್ಮ ಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ನಮ್ಮ ಶಿಕ್ಷಕರ ಶ್ರಮ ಮತ್ತು ಉತ್ತಮ ಕೊಡುಗೆ ಶಾಲೆ ರಾಜ್ಯದಲ್ಲಿ ದ್ವಿತೀಯ ಸ್ಥಾನಕ್ಕೆ ಏರಲು ಕಾರಣವಾಯಿತು ಎಂದರು.
ಕಾರ್ಯಕ್ರಮದಲ್ಲಿ ಪೋಷಕರಾದ ಗೀತಾ, ಶ್ರೀ ಜಯಶೀಲರೆಡ್ಡಿ, ಪತ್ರಕರ್ತ ರಾಮಪ್ಪ, ಶಿಕ್ಷಕರಾದ ಅಶೋಕ ಕೆ.ಎಸ್., ಜಿ.ನಾಗೇಂದ್ರಯ್ಯ, ನರಸಿಂಹಮೂರ್ತಿ, ಕೇಶವಮೂರ್ತಿ, ಮಂಜುನಾಥ್ ಎನ್., ಸುಬ್ರಮಣಿ, ಅಜಯ್, ಪುಷ್ಪಲತಾ, ಕಾವ್ಯ, ಅಡುಗೆ ಸಿಬ್ಬಂದಿ ಮತ್ತು ಕಾವಲುಗಾರರು ಹಾಜರಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ