ಬೆಂಗಳೂರು: ಟಿಪ್ಪರ್ ಲಾರಿಯೊಂದು ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದ ಘಟನೆ ಬೆಂಗಳೂರಿನ ಚಾಲುಕ್ಯ ಸರ್ಕಲ್ ನಲ್ಲಿ ನಡೆದಿದೆ. ಬನಶಂಕರಿಯಿಂದ ಹೆಬ್ಬಾಳದ ಕಡೆ ಹೊರಟಿದ್ದಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ, ಏಕಾಏಕಿ ರಸ್ತೆಯಿಂದ ಡಿವೈಡರ್‌ಗೆ ಹತ್ತಿದೆ.
ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಇಲ್ಲ. ಟಿಪ್ಪರ್ ಚಾಲಕ ಮನೋಹರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಲಾರಿಯನ್ನು ಮೇಲಕ್ಕೆ ಎತ್ತಿದ್ದಾರೆ.


