ಮಾರುಕಟ್ಟೆಯಲ್ಲಿ ವಿವಿಧ ಬಗೆಯ, ವಿವಿಧ ಬಣ್ಣಗಳನ್ನೊಳಗೊಂಡ ನೈಲ್ ಪಾಲಿಷ್ ಗಳು ದೊರೆಯುತ್ತವೆ. ಅವರವರ ಅಗತ್ಯಕ್ಕೆ ತಕ್ಕಂತೆ ತಮಗೆ ಒಪ್ಪುವ ಬಣ್ಣಗಳನ್ನು ಆಯ್ಕೆ ಮಾಡಿಕೊಂಡು ಬಣ್ಣವನ್ನು ಹಚ್ಚಿಕೊಂಡರೆ, ಉಗುರಿನ ಅಂದ ದುಪ್ಪಟ್ಟಾಗುತ್ತದೆ.
ಉಗುರಿನ ರಕ್ಷಣೆಗಾಗಿ ಬಳಸುವ ನೈಲ್ ಪಾಲಿಶ್ ರಕ್ಷಣೆ ನೀಡುವುದು ಮಾತ್ರವಲ್ಲ, ಉಗುರುಗಳು ಅಂದವಾಗಿ ಹಾಗೂ ಆಕರ್ಷಕ ರೀತಿಯಲ್ಲಿ ಕಾಣುವಂತೆ ಮಾಡುತ್ತವೆ. ಕೆಲವರಿಗೆ ಉದ್ದದ ಉಗುರು ಇಷ್ಟವಾದರೆ ಮತ್ತೆ ಕೆಲವರಿಗೆ ತುಂಡರಿಸಿದ ಉಗುರುಗಳು ಆಕರ್ಷಣೀಯವಾಗಿರುತ್ತದೆ.
ಒಟ್ಟಿನಲ್ಲಿ ತಮಗೊಪ್ಪುವ ನೈಲ್ ಪಾಲಿಷ್ ಲೇಪಿಸಿಕೊಂಡು ನೋಡುಗರಲ್ಲಿ ಆಸಕ್ತಿ ಕೆರಳುವಂತೆ ಮಾಡುವ ಗುಣ ಇದರಲ್ಲಿದೆ ಎಂಬುದು ಹಲವರ ಅಭಿಪ್ರಾಯ. ಜೊತೆಗೆ ಒಂದೇ ಉಗುರಿಗೆ ಎರಡ್ಮೂರು ಬಣ್ಣಗಳನ್ನು ಲೇಪಿಸಿಕೊಂಡರೆ ಮತ್ತಷ್ಟು ಆಕರ್ಷಣೀಯವಾಗಿರುತ್ತದೆ.