nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪಾವಗಡದಲ್ಲಿ ಬಾಕಿ ವಿದ್ಯುತ್ ಬಿಲ್ ವಸೂಲಿ ಆಂದೋಲನ: ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ ಎಚ್ಚರಿಕೆ

    June 12, 2026

    ತುಮಕೂರು: UGD ಓಪನ್ ಆಗಿ ಸಾರ್ವಜನಿಕರಿಗೆ ತೊಂದರೆ, ಪಾಲಿಕೆ ಮೌನ

    June 12, 2026

    ಕೆಂಚಮ್ಮನಹಳ್ಳಿ ಗ್ರಾಮದ ನವೀನ್ ಕೆ. ಅವರಿಗೆ ದಾವಣಗೆರೆ ವಿವಿಯಿಂದ ಪಿಎಚ್.ಡಿ ಪದವಿ ಪ್ರದಾನ

    June 12, 2026
    Facebook Twitter Instagram
    ಟ್ರೆಂಡಿಂಗ್
    • ಪಾವಗಡದಲ್ಲಿ ಬಾಕಿ ವಿದ್ಯುತ್ ಬಿಲ್ ವಸೂಲಿ ಆಂದೋಲನ: ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ ಎಚ್ಚರಿಕೆ
    • ತುಮಕೂರು: UGD ಓಪನ್ ಆಗಿ ಸಾರ್ವಜನಿಕರಿಗೆ ತೊಂದರೆ, ಪಾಲಿಕೆ ಮೌನ
    • ಕೆಂಚಮ್ಮನಹಳ್ಳಿ ಗ್ರಾಮದ ನವೀನ್ ಕೆ. ಅವರಿಗೆ ದಾವಣಗೆರೆ ವಿವಿಯಿಂದ ಪಿಎಚ್.ಡಿ ಪದವಿ ಪ್ರದಾನ
    • ಮರಿದಾಸನಹಳ್ಳಿ ಗ್ರಾಮಕ್ಕೆ ಕೆಪಿಎಸ್ ಶಾಲೆ ಮಂಜೂರು: ಹೆಚ್.ವಿ.ವೆಂಕಟೇಶ್ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ
    • “ಹೌದು ನಾನು ಏಜೆಂಟ್, ಆದರೆ ಮಾಫಿಯಾ ಕಮಿಷನ್ ಏಜೆಂಟ್ ಅಲ್ಲ”: ಸಿಎಂ ಡಿಕೆಶಿಗೆ ಆರ್. ಅಶೋಕ್ ತಿರುಗೇಟು
    • 26 ವರ್ಷಗಳ ಹಿಂದೆ ಸರ್ಕಸ್ ಕಂಪನಿ ಜೊತೆ ಓಡಿಹೋಗಿದ್ದ ಸತೀಶ್ ‘ಸಲೀಂ’ ಆಗಿ ಮನೆಗೆ ವಾಪಸ್!
    • ಅಕ್ರಮ ಸಂಬಂಧಕ್ಕೆ ಮಹಿಳೆ ಬಲಿ; ಪ್ರಿಯಕರನ ಬಂಧನ!
    • ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: KRS ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ವಿರುದ್ಧ ಕೇಸು ದಾಖಲು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬೆಳಧರ ಸರ್ಕಾರಿ ಶಾಲಾ ಆಟದ ಮೈದಾನದ ಉಳಿವಿಗಾಗಿ ವಿವಿಧ ಸಂಘಟನೆಗಳಿಂದ ಮೆರವಣಿಗೆ: ಅಧಿಕಾರಿಗಳ ಅಮಾನತಿಗೆ ಆಗ್ರಹ
    ತುಮಕೂರು March 5, 2024

    ಬೆಳಧರ ಸರ್ಕಾರಿ ಶಾಲಾ ಆಟದ ಮೈದಾನದ ಉಳಿವಿಗಾಗಿ ವಿವಿಧ ಸಂಘಟನೆಗಳಿಂದ ಮೆರವಣಿಗೆ: ಅಧಿಕಾರಿಗಳ ಅಮಾನತಿಗೆ ಆಗ್ರಹ

    By adminMarch 5, 2024No Comments2 Mins Read
    beladhara school

    ವರದಿ: ಮಂಜುಸ್ವಾಮಿ ಎಂ.ಎನ್.

    ತುಮಕೂರು: ಕೊರಟಗೆರೆ ವಿಧಾನಸಭಾ ಕ್ಷೇತ್ರ ಕೋರ ಹೋಬಳಿಯ ಬೆಳಧರ ಗ್ರಾಮದ ಸರ್ಕಾರಿ ಶಾಲೆಯ ಆಟದ ಮೈದಾನದ ಉಳಿವಿಗಾಗಿ ತುಮಕೂರು ನಗರದ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಜಿಲ್ಲಾ ಪಂಚಾಯತ್ ಕಚೇರಿಗೆ ಮೌನ ಮೆರವಣಿಗೆ ಇಂದು ಕಾಳಜಿ ಫೌಂಡೇಶನ್ ತುಮಕೂರು ವತಿಯಿಂದ ನಡೆಯಿತು.


    Provided by
    Provided by

    ಈ ಹೋರಾಟಕ್ಕೆ  ಸಾಮಾಜಿಕ ಕಳಕಳಿಯ ಅನೇಕ ಸಂಘ ಸಂಸ್ಥೆಗಳು, ವಿವಿಧ ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ಕನ್ನಡ ಪರ ಸಂಘಟನೆಗಳು, ಸಾಮಾಜಿಕ ಕಳಕಳಿಯುಳ್ಳ ಸಾರ್ವಜನಿಕರು ಕೈ ಜೋಡಿಸಿ, ಶಾಲೆಯ ಆಟದ ಮೈದಾನದ ಉಳಿವಿಗಾಗಿ ಧ್ವನಿಯೆತ್ತಿದರು.

    ಬೆಳಧರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವ್ಯಾಪ್ತಿಗೆ ಹೊಂದಿಕೊಂಡಂತೆ ಎರಡು ಎಕರೆ ಭೂಮಿ ಗ್ರಾಮಠಾಣಾಗೆ ಸೇರಿದ್ದು, ರಾಜ್ಯ ಸರ್ಕಾರ ಶಾಲಾ ಮಕ್ಕಳ ಆಟದ ಮೈದಾನದ ಉದ್ದೇಶಕ್ಕಾಗಿ 3 ಎಕರೆ ಮೂರು ಗಂಟೆ ಜಮೀನು ಮಂಜೂರು ಮಾಡಿದ್ದು, ಸುಮಾರು ನಾಲ್ಕೈದು ಬಾರಿ ಕಂದಾಯ ಇಲಾಖೆಯಿಂದ ಸರ್ವೇ ಮಾಡಿ ಹದ್ದುಬಸ್ತು ಮಾಡಲಾಗಿದೆ ಹಾಗೂ ಇ ಸ್ವತ್ತು ಸಹ ಮಾಡಲಾಗಿದೆ.

    ಶಾಲೆ ಮೈದಾನದ ಪಕ್ಕದಲ್ಲಿ ಒಬ್ಬ ಖಾಸಗಿ ವ್ಯಕ್ತಿಗೆ ಸೇರಿದ ಕಲ್ಯಾಣ ಮಂಟಪವಿದ್ದು, ಕಲ್ಯಾಣ ಮಂಟಪದ ಮಾಲೀಕ ಶಾಲಾ ಮೈದಾನವನ್ನು ಭೂ ಕಬಳಿಕೆ ಮಾಡಿಕಂಡು ಕಲ್ಯಾಣ ಮಂಟಪಕ್ಕೆ ವಾಹನಗಳ  ಅಕ್ರಮ ನಿಲ್ದಾಣವಾಗಿ ಮಾಡಿಕೊಂಡಿದ್ದಾನೆ. ಈ ಕಲ್ಯಾಣ ಮಂಟಪಕ್ಕೆ ಆಗಮಿಸುವ ವಾಹನಗಳ ಚಾಲಕರು ಶಾಲಾ ಮೈದಾನದಲ್ಲಿ ವಿಪರೀತ ವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆ ಮಾಡಿಕೊಂಡು ಬಂದು ವಿದ್ಯಾರ್ಥಿಗಳ ಮೇಲೆಯೇ ವಾಹನ ಹತ್ತಿಸುವಂತಹ ಹಲವು ಘಟನೆಗಳು ಇಲ್ಲಿ ನಡೆದಿದ್ದು, ವಿದ್ಯಾರ್ಥಿಗಳು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡತಂಹ ಘಟನೆಗಳು ನಡೆದಿವೆ ಎಂದು ಪ್ರತಿಭಟನಾಕಾರರು  ಆಕ್ರೋಶ ವ್ಯಕ್ತಪಡಿಸಿದರು.

    ಶಾಲಾ ಅಭಿವೃದ್ಧಿಗಾಗಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಮಕ್ಕಳ ಹಿತದೃಷ್ಟಿಯಿಂದ ಆಟದ ಮೈದಾನದ ಸುತ್ತಲೂ  ತಂತಿ ಬೇಲಿ ನಿರ್ಮಾಣ ಕಾಮಗಾರಿಗೆ ಸುಮಾರು ಐದು ಲಕ್ಷ ರೂಪಾಯಿ ಮಂಜೂರು ಮಾಡಿದ್ದರೂ ಸಹ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ, ತಹಶೀಲ್ದಾರ್, ಮೈದಾನವನ್ನ ಹದ್ದುಬಸ್ತು ಮಾಡಿಕೊಂಡು ಮಕ್ಕಳ ಆಟದ ಮೈದಾನ ಉಳಿಸುವಲ್ಲಿ ವಿಫಲರಾಗಿ ಕರ್ತವ್ಯ ನಿಷ್ಠೆ ಮರೆತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಸರ್ಕಾರಿ ಶಾಲೆಯ ಮೈದಾನ ಕಾಪಾಡಬೇಕಿದ್ದ ಅಧಿಕಾರಿಗಳು ಕಲ್ಯಾಣ ಮಂಟಪದ ಮಾಲೀಕನ ಪರ ನಿಂತು ವಾದ ಮಾಡುತ್ತಿದ್ದು,  ಸರ್ಕಾರಿ ಕೆಲಸ ಮತ್ತು ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ ನಡೆದುಕೊಂಡಿದ್ದಾರೆ. ಇಂತಹ ಅಧಿಕಾರಿಗಳನ್ನು ತಕ್ಷಣವೇ ಅಮಾನತ್ತು ಮಾಡಬೇಕೆಂದು ಹೋರಾಟಗಾರರು ಆಗ್ರಹಿಸಿದರು.

    ಕಾಳಜಿ ತಂಡದ ನೇತೃತ್ವದಲ್ಲಿ ನಡೆದ  ಬೆಳೆಧರ ಶಾಲೆ ಮೈದಾನ ಉಳಿವಿಗಾಗಿ ಮೌನ ಮೆರವಣಿಗೆ ಜಾಥಾದಲ್ಲಿ  ನೈಜ ಹೋರಾಟಗಾರರ ವೇದಿಕೆ ಬೆಂಗಳೂರು, ಲಂಚಮುಕ್ತ ಕರ್ನಾಟಕ ಬೆಂಗಳೂರು, ಭೀಮ್ ಆರ್ಮಿ, ಕರುನಾಡು ವಿಜಯ ಸೇನೆ, ರಣಧೀರ ವೇದಿಕೆ, ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ ಕೈ ಜೋಡಿಸಿತ್ತು.

    ಮೌನ ಮೆರವಣಿಗೆ ಹೋರಾಟದಲ್ಲಿ ನೈಜ ಹೋರಾಟಗಾರರ ವೇದಿಕೆ ಬೆಂಗಳೂರು ಇದರ ಹೆಚ್.ಎಂ.ವೆಂಕಟೇಶ್, ಲಂಚಮುಕ್ತ ಕರ್ನಾಟಕ ಬೆಂಗಳೂರು ಇದರ ಕುಣಿಗಲ್ ನರಸಿಂಹ ಮೂರ್ತಿ, ಭೀಮ್ ಆರ್ಮಿ ಮುಖಂಡರಾದ ಶ್ರೀನಿವಾಸ್, ಕರುನಾಡು ವಿಜಯ ಸೇನೆ ಅರುಣ್ ಕೃಷ್ಣಯ್ಯ, ಮಧುಗಿರಿ ತಿಮ್ಮರಾಜು, ರಣಧೀರ ವೇದಿಕೆ ಶಂಕರೆ ಗೌಡ್ರು,  ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ, ಡಮರುಗ ಉಮೇಶ್, ಮಾಧ್ಯಮ ಮಿತ್ರರು ಹಾಗೂ ಬೆಳೆಧರ ಗ್ರಾಮಸ್ಥರು ಭಾಗಿಯಾಗಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ತುಮಕೂರು: UGD ಓಪನ್ ಆಗಿ ಸಾರ್ವಜನಿಕರಿಗೆ ತೊಂದರೆ, ಪಾಲಿಕೆ ಮೌನ

    June 12, 2026

    ತುಮಕೂರು ವಿಶ್ವವಿದ್ಯಾನಿಲಯ: ವಿವಿಧ ಪದವಿಗಳ ಉಳಿಕೆ ಸೀಟುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

    June 11, 2026

    ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ

    June 10, 2026

    Comments are closed.

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ಪಾವಗಡದಲ್ಲಿ ಬಾಕಿ ವಿದ್ಯುತ್ ಬಿಲ್ ವಸೂಲಿ ಆಂದೋಲನ: ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ ಎಚ್ಚರಿಕೆ

    June 12, 2026

    ಪಾವಗಡ: ಬೆಸ್ಕಾಂ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ವತಿಯಿಂದ ಜೂನ್ 2026ರ ಬಾಕಿ ಬಿಲ್ ವಸೂಲಿಗಾಗಿ ವಿಶೇಷ ಆಂದೋಲನಕ್ಕೆ ಚಾಲನೆ…

    ತುಮಕೂರು: UGD ಓಪನ್ ಆಗಿ ಸಾರ್ವಜನಿಕರಿಗೆ ತೊಂದರೆ, ಪಾಲಿಕೆ ಮೌನ

    June 12, 2026

    ಕೆಂಚಮ್ಮನಹಳ್ಳಿ ಗ್ರಾಮದ ನವೀನ್ ಕೆ. ಅವರಿಗೆ ದಾವಣಗೆರೆ ವಿವಿಯಿಂದ ಪಿಎಚ್.ಡಿ ಪದವಿ ಪ್ರದಾನ

    June 12, 2026

    ಮರಿದಾಸನಹಳ್ಳಿ ಗ್ರಾಮಕ್ಕೆ ಕೆಪಿಎಸ್ ಶಾಲೆ ಮಂಜೂರು: ಹೆಚ್.ವಿ.ವೆಂಕಟೇಶ್ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ

    June 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.