ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ.ಆದರೆ ಬೇಸಿಗೆಯಲ್ಲಿ ಮೊಟ್ಟೆಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಯಾಗುತ್ತದೆ ಎನ್ನಲಾಗುತ್ತಿದೆ. ಹಾಗಾದರೆ ಬೇಸಿಗೆಯಲ್ಲಿ ಮೊಟ್ಟೆಗಳನ್ನು ತಿನ್ನುವುದು ನಿಜವಾಗಿಯೂ ದೇಹದಲ್ಲಿ ಅತಿಯಾದ ಶಾಖವನ್ನು ಉಂಟುಮಾಡಬಹುದೇ? ಈ ಬಗೆಗಿನ ಡಿಟೇಲ್ಸ್ ಇಲ್ಲಿದೆ ನೋಡಿ…
ಹೆಚ್ಚಿನ ಸಂಖ್ಯೆಯ ಜನರು ತಮ್ಮ ದಿನವನ್ನು ಮೊಟ್ಟೆಗಳೊಂದಿಗೆಯೇ ಪ್ರಾರಂಭಿಸುತ್ತಾರೆ. ಇದು ಉತ್ತಮ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿದೆ. ಮಾತ್ರವಲ್ಲ ಸ್ನಾಯುಗಳನ್ನು ಬಲಪಡಿಸುತ್ತದೆ. ಹಾಗಾಗಿ ಮುಂಜಾನೆ ಮೊಟ್ಟೆ ತಿಂದರೆ ದಿನವಿಡೀ ನೀವು ಎನರ್ಜಿಟಿಕ್ ಆಗಿ ಇರಬಹುದು ಎಂದು ಅನೇಕರು ನಂಬಿದ್ದಾರೆ. ಆದರೆ ಬೇಸಿಗೆಯಲ್ಲಿ ಮೊಟ್ಟೆಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿ ಎಂದು ಜನರು ಭಾವಿಸುತ್ತಾರೆ. ಮೊಟ್ಟೆಯ ಉಷ್ಣ ಗುಣದಿಂದ ಅನಾರೋಗ್ಯ ಉಂಟಾಗಬಹುದು ಎಂದು ಸಹ ಜನರು ಹೇಳುತ್ತಾರೆ.
ಬೇಸಿಗೆಯಲ್ಲಿ ಮೊಟ್ಟೆ ತಿನ್ನುವುದು ನಿಜವಾಗಿಯೂ ಆರೋಗ್ಯಕ್ಕೆ ಹಾನಿ ಯಾಗುತ್ತದೆಯೇ? ಆಹಾರ ತಜ್ಞರು ತಿಳಿಸುವಂತೆ ಮೊಟ್ಟೆಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿ ಯಾವುದೇ ಸೀಸನ್ ನಲ್ಲಿ ಮೊಟ್ಟೆ ತಿನ್ನೋದು ಹಾನಿಕಾರಕವಲ್ಲ. ಜನರು ಬೇಸಿಗೆಯಲ್ಲಿ ಮೊಟ್ಟೆ ತಿನ್ನಬಹುದು, ಆದರೆ ಅವುಗಳ ಪ್ರಮಾಣವು ಚಳಿಗಾಲಕ್ಕಿಂತ ಕಡಿಮೆ ಇರಬೇಕು. ಬೇಸಿಗೆಯಲ್ಲಿ, ಜನರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಪ್ರತಿದಿನ ಒಂದು ಅಥವಾ ಎರಡು ಮೊಟ್ಟೆಗಳನ್ನು ಮಾತ್ರ ಸೇವಿಸಬಹುದು. ಹೆಚ್ಚು ಸೇವಿಸಿದರೆ ಸಮಸ್ಯೆ ಎಂದು ತಿಳಿಸಿದ್ದಾರೆ.
ಮೊಟ್ಟೆಗಳನ್ನು ಪ್ರತಿ ಋತುವಿನಲ್ಲಿ ಬೇಯಿಸಿ ತಿನ್ನಬಹುದು ಅಥವಾ ಆಮ್ಲೆಟ್ ತಯಾರಿಸುವ ಮೂಲಕವೂ ತಿನ್ನಬಹುದು. ಮೊಟ್ಟೆಗಳಲ್ಲಿ ಪ್ರೋಟೀನ್ ಗಳು, ಜೀವಸತ್ವಗಳು, ಖನಿಜಗಳು ಮತ್ತು ಸ್ವಲ್ಪ ಪ್ರಮಾಣದ ವಿಟಮಿನ್ ಡಿ ಇರುತ್ತದೆ.ಇವುಗಳಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದ್ದು, ಇದು ಕೆಂಪು ರಕ್ತ ಕಣಗಳ ರಚನೆಗೆ ಬಹಳ ಮುಖ್ಯ ಎಂದು ಆಹಾರ ತಜ್ಞರು ಹೇಳುತ್ತಾರೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹಾಗಾಗಿ ಮೊಟ್ಟೆ ತಿನ್ನೋದು ಒಳ್ಳೆಯದೆ. ವಿಟಮಿನ್ ಡಿ ಕಾರಣದಿಂದಾಗಿ, ಮೊಟ್ಟೆಗಳು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮೂಳೆಗಳನ್ನು ಸ್ಟ್ರಾಂಗ್ ಆಗಿಸುತ್ತೆ. ಮೊಟ್ಟೆಗಳು ಅನೇಕ ಶಕ್ತಿಯುತ ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿರುತ್ತವೆ. ಮೊಟ್ಟೆ ತಿನ್ನಲು ತೊಂದರೆ ಇರುವ ಜನರು ಮೊಟ್ಟೆಗಳನ್ನು ತಿನ್ನುವುದನ್ನು ನಿಲ್ಲಿಸಿದರೆ ಉತ್ತಮ .
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296