nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ

    July 22, 2026

    ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ

    July 22, 2026

    ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್‌ ಬುಕ್ ವಿತರಣೆ

    July 22, 2026
    Facebook Twitter Instagram
    ಟ್ರೆಂಡಿಂಗ್
    • ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ
    • ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ
    • ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್‌ ಬುಕ್ ವಿತರಣೆ
    • ಪ.ಪಂ. ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಅವರ 63ನೇ ಜನ್ಮದಿನಾಚರಣೆ
    • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ: ಪ್ರವೇಶಾತಿಗೆ ಅರ್ಜಿ ಆಹ್ವಾನ
    • ಗೋನೆಗಾರರು ಕೇರಾ ಸುರಕ್ಷಾ ವಿಮಾ ಯೋಜನೆ ಪ್ರಯೋಜನೆ ಪಡೆಯಲು ತೋಟಗಾರಿಕೆ ಇಲಾಖೆ ಮನವಿ
    • 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
    • ತುಮಕೂರು: ಗಾಂಜಾ ಸಾಗಣೆ: ಅಪರಾಧಿಗೆ 4 ವರ್ಷ ಕಠಿಣ ಶಿಕ್ಷೆ; ದಂಡ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮನೆ ಮಗ ಮುದ್ದಹನುಮೇಗೌಡರನ್ನು ಗೆಲ್ಲಿಸಿ: ಡಾ.ಜಿ. ಪರಮೇಶ್ವರ್ ಮನವಿ
    ರಾಜ್ಯ ಸುದ್ದಿ April 18, 2024

    ಮನೆ ಮಗ ಮುದ್ದಹನುಮೇಗೌಡರನ್ನು ಗೆಲ್ಲಿಸಿ: ಡಾ.ಜಿ. ಪರಮೇಶ್ವರ್ ಮನವಿ

    By adminApril 18, 2024No Comments3 Mins Read
    korategere

    ಕೊರಟಗೆರೆ: ಪ್ರಧಾನಿ ನರೇಂದ್ರ ಮೋದಿಯವರು ರೈತರ ಸಾಲ ಮನ್ನಾ ಮಾಡದೆ, ಅದಾನಿ, ಅಂಬಾನಿಯವರಂತಹ ಶ್ರೀಮಂತರ ಸಾಲ ಮನ್ನಾ ಮಾಡ್ತಾರೆ. ಈ ದೇಶದ ರೈತರು ಮೋದಿ ಅವರ ಕಣ್ಣಿಗೆ ಕಾಣಲ್ಲ ಎಂದು ಬಿಜೆಪಿ ಪಕ್ಷದ ವಿರುದ್ಧ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕಿನ ಪುರವರ, ವಡ್ಡಗೆರೆ, ಹೊಳವನಹಳ್ಳಿ, ಕೋಳಾಲ, ತೋವಿನಕೆರೆ ಸೇರಿದಂತೆ ಕೋರ ಹೋಬಳಿಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುದ್ದಹನುಮೇಗೌಡರ ಪರ ಪ್ರಚಾರ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಣ್ಣ ನರೇಂದ್ರ ಮೋದಿಯವರ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಸರಿಯಾದ ಕ್ಷೇತ್ರ ಸಿಗದೇ ರಾಜ್ಯಾದ್ಯಂತ ಓಡಾಡುತ್ತಿದ್ದಾರೆ. ಆದರೆ ಮುದ್ದಹನುಮೇಗೌಡರು ಇಲ್ಲೇ ಹುಟ್ಟಿ ಬೆಳೆದು ನ್ಯಾಯಾಧೀಶರಾಗಿ ಕೆಲಸ ಮಾಡಿ, ನಿಮ್ಮಗಳ ಸೇವೆ ಮಾಡುತ್ತಿದ್ದಾರೆ. ಈ ಹಿಂದೆ ಮುದ್ದ ಹನುಮೇಗೌಡರಿಗೆ 35,000 ಮತಗಳ ಅಂತರದಿಂದ ಗೆಲ್ಲಿಸಿದ್ರಿ. ತುಮಕೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಮುದ್ದಹನುಮೇಗೌಡರನ್ನು ಮತ್ತೊಮ್ಮೆ ಗೆಲ್ಲಿಸಬೇಕಾಗಿದೆ.

    ಲೋಕಸಭೆಯಲ್ಲಿ 5 ಬಾರಿ ಗೆದ್ದಂತಹ ಜಿಎಸ್ ಬಸವರಾಜು ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನೀವು ಮಾಡಿದಂತಹ ಕೆಲಸ ಒಂದಾದರೂ ತೋರಿಸಿ. ಇಡೀ ಜಿಲ್ಲೆಯಲ್ಲಿ ನಿಮ್ಮ ಕೆಲಸ ಶೂನ್ಯವಾಗಿದೆ. ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯನ ಕಡೆಯವರು ಸೋಮಣ್ಣಗೆ ಮಣ್ಣು ಮುಕ್ಕಿಸಿದ್ದಾರೆ. ಬಿಜೆಪಿಯವರೇ ತುಮಕೂರಿನಲ್ಲಿ ಬಲಿಪಶು ಮಾಡಲು ಹೊರಟಿದ್ದಾರೆ. ನಮ್ಮ ರೈತರು ಬೆಳೆದ ಬೆಳೆಗಳಿಗೆ ಕೇಂದ್ರ ಸರ್ಕಾರ ಸರಿಯಾದ ಬೆಂಬಲ ಬೆಲೆ ನೀಡುತ್ತಿಲ್ಲ. ಒಂದು ವರ್ಷದಲ್ಲಿ ಎರಡು ಕೋಟಿ ಉದ್ಯೋಗ ಕೊಡ್ತೀವಿ ಅಂತ ಹೇಳಿದ್ರು. ಕೇಂದ್ರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಕೂಡ ಅದನ್ನು ಭರ್ತಿ ಮಾಡುತ್ತಿಲ್ಲ. ಮುದ್ದ ಹನುಮೇಗೌಡರು ಲೋಕಸಭಾ ಸದಸ್ಯನಾಗಿದ್ದಂತಹ ಸಂದರ್ಭದಲ್ಲಿ ಕೊಬ್ಬರಿ, ರೈಲ್ವೆ ನೀರಾವರಿ ಸೇರಿದಂತೆ ಸಾಕಷ್ಟು ಯೋಜನೆಗಳ ಬಗ್ಗೆ ಸಂಸತ್ ನಲ್ಲಿ ಧ್ವನಿ ಎತ್ತಿದ್ದಾರೆ. ಅವರು ಗೆದ್ದರೆ ನೆನೆಗುದಿಗೆ ಬಿದ್ದಿರುವ ಇನ್ನೂ ಹಲವಾರು ಅಭಿವೃದ್ಧಿ ಯೋಜನೆಯನ್ನು ಮರು ಪ್ರಾರಂಭ ಮಾಡ್ತಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುದ್ದ ಹನುಮೇಗೌಡ  ಗೌಡರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

    ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುದ್ದೆ ಹನುಮೇಗೌಡ ಮಾತನಾಡಿ, ನಾನು ಸಂಸದನಾಗಿದ್ದಂತಹ ಕಾಲದಲ್ಲಿ  ತುಮಕೂರಿನಿಂದ ರಾಯದುರ್ಗಕ್ಕೆ ರೈಲ್ವೆ ಯೋಜನೆ, ನೀರಾವರಿ, ಕೊಬ್ಬರಿಗೆ ಬೆಂಬಲ ಬೆಲೆ ಸೇರಿದಂತೆ 3200 ಕೋಟಿ  ವೆಚ್ಚದ ನಾಲ್ಕು ಪಥದ ರಸ್ತೆ ನಿರ್ಮಾಣ ಮಾಡಿಸಿದ್ದು. ಇದರಿಂದ ಜಿಲ್ಲೆಯ ಆರು ತಾಲೂಕಿಗಳಿಗೆ ಅನುಕೂಲವಾಗಲಿದೆ. ಈಗಿನ ಸಂಸದರು ನಮ್ಮ ಜಿಲ್ಲೆ ಮತ್ತು ತಾಲೂಕಿನ ಬಗ್ಗೆ  ಒಂದು ದಿನವೂ ಕೂಡ ಮಾತಾಡಿದ್ದನ್ನು ನಾನು ನೋಡಲೇ ಇಲ್ಲ, ನೀವು ಮಾಡಿರುವ ಕೆಲಸದ ಯಾವುದಾದರೂ ಒಂದು ಸಾಕ್ಷಿ ಗುಡ್ಡೆ ತೋರಿಸಿ ಎಂದು ಬಸವರಾಜು ವಿರುದ್ಧ ಕಿಡಿಕಾರಿದರು.

    ಬಿಜೆಪಿ ಅಭ್ಯರ್ಥಿ ಸೋಮಣ್ಣನವರಿಗೆ ಚುನಾವಣೆಗೆ ಸ್ಪರ್ಧಿಸಲು ಬೇರೆ ಯಾವುದೇ ಕ್ಷೇತ್ರ ಸಿಗಲಿಲ್ಲ ಎಂಬಂತಿದೆ ಆದ್ದರಿಂದ ಅವರು ತುಮಕೂರಿಗೆ ಬಂದಿದ್ದಾರೆ. ಸೋಮಣ್ಣನಿಗೂ ತುಮಕೂರಿಗೂ  ಯಾವ ಸಂಬಂಧವೂ ಇಲ್ಲ  ತುಮಕೂರಿಗೆ ಅವರ ಕೊಡುಗೆ ಏನು.?  ಸಮ್ಮಿಶ್ರ ಸರ್ಕಾರ ಇದ್ದಾಗ ಲೋಕಸಭಾ ಅಭ್ಯರ್ಥಿಯಾಗಿದ್ದ ದೇವೇಗೌಡರ ಗೆಲುವಿಗಾಗಿ ನಾನು ಕೂಡ ಶ್ರಮಿಸಿದ್ದೆ.ಅವರು ಸೋಲುವುದಕ್ಕೆ ನಾವ್ಯಾರೂ ಕಾರಣರಲ್ಲ ನಾನು ದೇವೇಗೌಡರ ಬಗ್ಗೆ ಎಲ್ಲಿಯೂ ಅಪಪ್ರಚಾರ ಮಾಡಿಲ್ಲ. ಬೇಕಿಲ್ಲದ ವಿಚಾರಗಳಿಗೆ ಕಿವಿ ಕೊಡಬೇಡಿ ನಾನು ಲೋಕಸಭಾ ಸದಸ್ಯನಾಗಿದ್ದಂತಹ ಸಂದರ್ಭದಲ್ಲಿ ಜಿಲ್ಲಾಧ್ಯಂತ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಇನ್ನು ಮುಂದೆಯೂ ಸಹ ನಿಮ್ಮ ಜೊತೆಗಿದ್ದು ಉತ್ತಮ ರೀತಿಯ ಯೋಜನೆಗಳನ್ನು  ತಂದು ಅಭಿವೃದ್ಧಿ ಮಾಡ್ತೀನಿ ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಹೀಗಾಗಿ ನನಗೆ ಮತ್ತೊಂದು ಬಾರಿ ಆಶೀರ್ವಾದ ಮಾಡಿ ಎಂದು ಹೇಳಿದರು.

    ಈ ಸಂದರ್ಭದಲ್ಲಿ  ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ, ಮಾಜಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ  ಮುರಳಿಧರ್ ಹಾಲಪ್ಪ, ಕೆಪಿಸಿಸಿ ಸದಸ್ಯ ದಿನೇಶ್, ಎಂ ಎನ್ ಜೆ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಶ್ವಥ್ ನಾರಾಯಣ್, ಅರಕೆರೆ ಶಂಕರ್, ಮಹಿಳಾ ಘಟಕದ ಅಧ್ಯಕ್ಷ ಜಯಮ್ಮ, ಜಿ ಪಂ ಮಾಜಿ ಸದಸ್ಯ ನಾರಾಯಣ ಮೂರ್ತಿ, ಪ ಪಂ ಸದಸ್ಯ ಎ ಡಿ ಬಲರಾಮಯ್ಯ, ಮುಖಂಡರುಗಳಾದ ವಾಲೆ ಚಂದ್ರಯ್ಯ, ಮೈಲಾರಪ್ಪ, ಮಹಾಲಿಂಗಪ್ಪ, ನಾಗಭೂಷಣ್, ಎಲ್ಐಸಿ ರಾಜಣ್ಣ, ಜಯರಾಮಣ್ಣ, ಕವಿತಾ ಸೇರಿದಂತೆ ಇತರರು ಹಾಜರಿದ್ದರು.

    ವರದಿ: ಮಂಜುಸ್ವಾಮಿ ಎಂ ಎನ್ ಕೊರಟಗೆರೆ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

     

     


    Provided by
    Provided by
    admin
    • Website

    Related Posts

    ತುಮಕೂರು: ಬಂಟ್ವಾಳದಲ್ಲಿ ನಡೆದ ಯುವತಿಯ ಭೀಕರ ಹತ್ಯೆಗೆ ಮಹಿಳಾ ಸಾಂಸ್ಕೃತಿಕ ಸಂಘಟನೆ ಖಂಡನೆ

    July 20, 2026

    ಸಂಕಷ್ಟದಲ್ಲೂ ಕೈಬಿಡದ ಸಂಗಾತಿ: ದೇವೇಗೌಡರ 72 ವರ್ಷಗಳ ಪಯಣಕ್ಕೆ ನೆರಲಾಗಿದ್ದ ಚೆನ್ನಮ್ಮ

    July 19, 2026

    ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಹೃದಯಾಘಾತದಿಂದ ಸಾವು

    July 18, 2026

    Comments are closed.

    Our Picks

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ

    July 22, 2026

    ತುಮಕೂರು: ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಗಂಗಹನುಮಯ್ಯ ಅವರ ಧರ್ಮಪತ್ನಿ, ಹಿರಿಯ ಪತ್ರಕರ್ತೆ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ…

    ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ

    July 22, 2026

    ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್‌ ಬುಕ್ ವಿತರಣೆ

    July 22, 2026

    ಪ.ಪಂ. ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಅವರ 63ನೇ ಜನ್ಮದಿನಾಚರಣೆ

    July 22, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.