ಉಂಡ ಮನೆಗೆ ಕನ್ನ ಹಾಕಿದ್ದ ಚಾಲಕಿ ಕಳ್ಳಿಯನ್ನು ಜೆಪಿನಗರ ಪೊಲೀಸರು ಬಂಧಿಸಿದ್ದಾರೆ. ಮಂಜುಳಾ (38) ಬಂಧಿತ ಆರೋಪಿಯಾಗಿದ್ದು, ರೇಖಾ ಕಿರಣ್ ಎಂಬುವವರ ಮನೆಯಲ್ಲಿ 8 ವರ್ಷದಿಂದ ಕೆಲಸ ಮಾಡಿಕೊಂಡಿದ್ದಳು. ಮನೆಯಲ್ಲಿ ಸಾಕಷ್ಟು ಚಿನ್ನಾಭರಣ ಇದ್ದ ಬಗ್ಗೆ ಹಾಗೂ ಬೀರು ಕೀ ಸಹ ಎಲ್ಲಿ ಇಟ್ಟಿರ್ತಾರೆ ಎಂಬುದನ್ನು ಅರಿತಿದ್ದಳು.
ಕಳೆದ ಮಾರ್ಚ್ ತಿಂಗಳಲ್ಲಿ ಮನೆಯವರು ಹೊರಗೆ ಹೋಗುವುದನ್ನು ಕಾದು ಕುಳಿತಿದ್ದ ಮಂಜುಳಾ, ಮನೆ ಬೀರುವಿನಲ್ಲಿದ್ದ 34 ಲಕ್ಷ ಮೌಲ್ಯದ ಚಿನ್ನ, ವಜ್ರದ ಆಭರಣದ ಜೊತೆ ಒಂದು ಲಕ್ಷ ಕ್ಯಾಶ್ ಎಗರಿಸಿದ್ದಳು. ಕಳ್ಳತನ ಮಾಡಿದ್ದ ಆಭರಣಗಳನ್ನು ತನ್ನೂರು ಹೆಚ್ ಡಿ ಕೋಟೆಯಲ್ಲಿ ಇಟ್ಟಿದ್ದಳು. ನಂತರ ರೇಖಾ ಕಿರಣ್ ಮನೆಯಲ್ಲಿಯೇ ಕೆಲಸ ಮುಂದುವರೆಸಿದ್ದಳು. ರೇಖಾ ಕಿರಣ್ ಕಳ್ಳತನದ ಬಗ್ಗೆ ಪ್ರಶ್ನೆ ಮಾಡಿದಾಗ ಏನೂ ಗೊತ್ತಿಲ್ಲದಂತೆ ಡ್ರಾಮಾ ಮಾಡಿದ್ದಳು. ಆದ್ದರಿಂದ ಮನೆಯೊಡತಿ ಅನುಮಾನಗೊಂಡು ಜೆಪಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರ ತನಿಖೆ ವೇಳೆ ಮಂಜುಳಾ ಕಳ್ಳಾಟ ಬಯಲಾಗಿದ್ದು, ಸದ್ಯ ಆರೋಪಿಯಿಂದ 34 ಲಕ್ಷ ಮೌಲ್ಯದ ಚಿನ್ನ, ವಜ್ರದ ಆಭರಣಗಳು, ನಗದು ವಶಕ್ಕೆ ಪಡೆದು, ಆರೋಪಿಯನ್ನು ಜೈಲಿಗಟ್ಟಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


