ತುಮಕೂರು: ನಿನ್ನೆ ಸಂಜೆ ಎಡೆಬಿಡದೆ ಸುರಿದ ಬಾರಿ ಮಳೆಯಿಂದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ನಡುವೆ ತುಮಕೂರು ನಗರದ ಬೃಹತ್ ಕೆರೆಯಾಗಿರುವ ಅಮಾನಿಕೆರೆ ತೂಬಿನಿಂದ ಹೊರ ಬರುತ್ತಿರುವ ನೀರು ನೆರೆಯುಕ್ತವಾಗಿ ಹರಿದು ಬರುತ್ತಿದ್ದು, ಕೆರೆಗೆ ಕೈಗಾರಿಕಾ ತ್ಯಾಜ್ಯ ಮತ್ತು ರಾಸಾಯನಿಕಯುಕ್ತ ನೀರು ಹರಿದು ಬರುತ್ತಿದೆ.
ಇಂದು ಬೆಳಗ್ಗೆಯಿಂದ ತುಮಕೂರು ಅಮಾನಿಕೆರೆಯ ಎಸ್ ಮಾಲ್ ಎದುರಿನ ಕೆರೆ ತೂಬ್ ನಿಂದ ಹೊರ ಬರುತ್ತಿರುವ ವಿಷಯುಕ್ತ ಹಾಗೂ ಕಲುಷಿತ ನೀರನ್ನ ಗಮನಿಸಿದರೆ, ಇಡೀ ಅಮಾನಿಕೆರೆಗೆ ಕೈಗಾರಿಕಾ ತ್ಯಾಜ್ಯ ಸೇರಿರಬಹುದು ಮತ್ತು ಕೆರೆಯಲ್ಲಿರುವ ಜಲಚರಗಳ ಮಾರಣ ಹೋಮವಾಗಬಹುದು.

ಕೂಡಲೇ ಈ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕ ಸುರಕ್ಷಾ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ಮಹಾನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ. ಮಹೇಶ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಕೆರೆ ನೀರು ಕುಡಿಯಲು ಯೋಗ್ಯವಾಗುವುದಿಲ್ಲ. ಅಮಾನಿಕೆರೆ ನೀರನ್ನು ತುಮಕೂರು ನಗರಕ್ಕೆ ಮರುಬಳಕೆಗೆ ಹೇಮಾವತಿ ಜಲಸಂಗ್ರಹ ಮಾಡುವ ಬುಗುಡನಹಳ್ಳಿ ಮತ್ತು ಪಿ.ಎನ್. ಪಾಳ್ಯಕ್ಕೆ ಪಂಪಿಂಗ್ ಮಾಡಿ, ಜಲಶುದ್ದೀಕರಣದ ಕೇಂದ್ರದ ಮೂಲಕ ತುಮಕೂರು ಮಹಾ ಜನತೆಗೆ ಪೂರೈಸಿದರೆ, ಭಾರೀ ಪ್ರಮಾಣದ ಸಾವು-ನೋವುಗಳು ಮತ್ತು ತೀವ್ರ ರೀತಿಯ ಅನಾರೋಗ್ಯದಿಂದ ಮಹಾ ಜನತೆ ತತ್ತರಿಸಿ ಹೋಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅನಾಹುತಗಳಿಗೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಗಳೇ ನೇರ ಹೊಣೆಗಾರರು ಎಂದು ಕೆ.ಪಿ. ಮಹೇಶ ಎಚ್ಚರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


